ಸುಳ್ಯ

ಪೆರಾಜೆ: ತಡರಾತ್ರಿ ಬ್ರೇಕ್ ಡ್ಯಾನ್ಸ್ ಮಾಡಿಕೊಂಡು ಬಂದು ಗುಂಡಿಗೆ ಬಿದ್ದ ರಿಕ್ಷಾ..!, ಪಲ್ಟಿಯಾದ ರಿಕ್ಷಾದಲ್ಲೇ ಚಾಲಕನಿಗೆ ಭರ್ಜರಿ ನಿದ್ರೆ..! ಎದ್ದೇಳಿಸಲು ಹೋದಾಗ ಆಗಿದ್ದೇನು..?

ನ್ಯೂಸ್ ನಾಟೌಟ್: ತಡರಾತ್ರಿ ಆಟೋ ರಿಕ್ಷಾವೊಂದು ಬ್ರೇಕ್ ಡ್ಯಾನ್ಸ್ ಮಾಡಿಕೊಂಡು ಬಂದು ರಸ್ತೆಯಿಂದ ಹೊರಕ್ಕೆ ಹೋಗಿ ಗುಂಡಿಗೆ ಬಿದ್ದಿರುವ ಘಟನೆ ಪೆರಾಜೆಯ ಜ್ಯೋತಿ ಶಾಲೆಯ ಬಳಿ ನಡೆದಿದೆ. ವಿಶೇಷವೆಂದರೆ ಗುಂಡಿಗೆ ಬಿದ್ದಿರುವುದು ಕೂಡ ಗೊತ್ತಾಗದ ರಿಕ್ಷಾ ಚಾಲಕ ಅದರಲ್ಲೇ ದೀರ್ಘ ನಿದ್ರೆಗೆ ಜಾರಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋ, ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಯುವಕರ ತಂಡವೊಂದು ಕೆಲಸ ಮುಗಿಸಿಕೊಂಡು ತಡರಾತ್ರಿ ಪೆರಾಜೆಯ ಬಳಿ ಇರುವ ತಮ್ಮ ಮನೆಗೆ ತೆರಳುತ್ತಿದ್ದ ಸಮಯ. ಈ ವೇಳೆ ಆಟೋ ರಿಕ್ಷಾವೊಂದು ರಸ್ತೆಯ ಚರಂಡಿಗೆ ಜಾರಿದ ಸ್ಥಿತಿಯಲ್ಲಿ ನಿಂತಿತ್ತು. ಇದನ್ನು ಕಂಡು ಏನೋ ಆಗಿದೆ ಎಂದು ರಿಕ್ಷಾದ ಸಮೀಪ ಗಾಬರಿಯಿಂದ ಓಡೋಡಿ ಬರ್ತಾರೆ. ಆದರೆ ಅಲ್ಲೊಬ್ಬ ವ್ಯಕ್ತಿ ಆರಾಮವಾಗಿ ನಿದ್ರೆ ಮಾಡ್ತಾ ಇರ್ತಾರೆ. ಅಣ್ಣ ಇಲ್ಲಿ ಏಕೆ ಮಲಗಿದ್ದೀರಿ ಎಂದು ಯುವಕರು ಕೇಳಿದಾಗ ಮನೆಯಲ್ಲಿ ಕಿರಿಕಿರಿ ನಿಮ್ಮದು ಇಲ್ಲಿ ಕೂಡ ಎಂದು ತಡವರಿಸುತ್ತಾ ಉತ್ತರಿಸುತ್ತಾರೆ. ಅಣ್ಣ ನಿಮ್ಮ ರಿಕ್ಷಾ ಗುಂಡಿಗೆ ಬಿದ್ದಿದೆ, ನಿಮಗೆ ಗೊತ್ತಾಗಲಿಲ್ಲವಾ..? ಅಂತ ಯುವಕರು ಪ್ರಶ್ನಿಸಿದಾಗ ..ಗೊತ್ತಾಗಿದೆ ಆದರೆ ಮೇಲಕ್ಕೆ ಎತ್ತಲು ಆಗುವುದಿಲ್ಲ. ಇನ್ನೇನು ಮಾಡುವುದು ಅಂತ ಮಲಗಿದೆ ಎಂದು ಉತ್ತರಿಸುತ್ತಾರೆ. ಕೊನೆಗೆ ಯುವಕರು ರಿಕ್ಷಾವನ್ನು ಮೇಲಕ್ಕೆ ಎತ್ತಿ ಆತನನ್ನು ಮನೆಗೆ ಕಳಿಸಿಕೊಟ್ಟರು ಎಂದು ತಿಳಿದು ಬಂದಿದೆ. ಈ ವಿಡಿಯೋ ಕೂಡ ಇದೀಗ ವೈರಲ್ ಆಗುತ್ತಿದೆ.

Related posts

ಶ್ರೀ ಭಗವಾನ್ ಸಂಘ ಊರುಬೈಲು ಇವರಿಂದ ಚೆಂಬು ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

ಸುಳ್ಯ: ಶಾಸಕಿ ಕು.ಭಾಗೀರಥಿ ಮುರುಳ್ಯ ಉಪಸ್ಥಿತಿಯೊಂದಿಗೆ ತಾಲೂಕು ಪಂಚಾಯತ್‌ನಲ್ಲಿ ಆಯುಧಪೂಜೆ

ಸುಳ್ಯ:ಕೆನರಾ ಕೈಗಾರಿಕಾ ಸಂಘ ನಿರ್ದೇಶಕರ ಚುನಾವಣೆ ;ಅತ್ಯಧಿಕ ಮತಗಳಿಂದ ಗೆದ್ದು ಚುನಾಯಿತರಾದ ಸುಂದರ ಗೌಡ ಬಳ್ಳಕ್ಕ