ಕರಾವಳಿಕ್ರೈಂ

ಸುಳ್ಯ:ಸ್ಕೂಟಿ ಪಲ್ಟಿ,ಚರಂಡಿಗೆ ಬಿದ್ದ ಸವಾರ;ಗಂಭೀರ ಗಾಯ

ನ್ಯೂಸ್ ನಾಟೌಟ್ : ಸ್ಕೂಟಿ ಸವಾರ ತನ್ನ ನಿಯಂತ್ರಣ ಕಳೆದುಕೊಂಡು ಸ್ಕೂಟಿ ಪಲ್ಟಿ ಹೊಡೆದ ಘಟನೆ ಸುಳ್ಯದ ಪರಿವಾರಕಾನ ಎಂಬಲ್ಲಿ ನಡೆದಿದೆ. ಪರಿಣಾಮ ,ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಏನಿದು ಘಟನೆ?

ಗಾಯಗೊಂಡ ವ್ಯಕ್ತಿ ಬಂದ್ಯಡ್ಕ ಮೂಲದ ವ್ಯಕ್ತಿ. ತನ್ನ ಸಹೋದರಿ ಮನೆ ಕಲ್ಲುಗುಂಡಿಯಲ್ಲಿ ಇದ್ದುದರಿಂದ ಅಲ್ಲಿಗೆ ನಿನ್ನೆ ತಡರಾತ್ರಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಸುಳ್ಯದಿಂದ ಕಲ್ಲುಗುಂಡಿಗೆ ಹೋಗುತ್ತಿದ್ದಾಗ ಪರಿವಾರಕಾನದ ಸಾಯಿ ಸರ್ವೀಸ್ ಸ್ಟೇಷನ್ ಬಳಿಯ ತಿರುವಿನಲ್ಲಿ ಸ್ಕೂಟಿ ಸವಾರ ನಿಯಂತ್ರಣ ಕಳೆದುಕೊಂಡರು.ರಸ್ತೆಯ ಬದಿಯ ಚರಂಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸಂಸತ್ತಿನಲ್ಲಿ ಭದ್ರತಾ ಲೋಪ: ಐವರು ಕಾಂಗ್ರೆಸ್​ ಸಂಸದರನ್ನು ಲೋಕಸಭೆಯಿಂದ ಅಮಾನತ್ತು ಮಾಡಿದ್ದೇಕೆ? ಈ ಬಗ್ಗೆ ಸ್ಪೀಕರ್ ಹೇಳಿದ್ದೇನು?

ಮಂಗಳೂರು : ಕಳವಾದ 7 ಮೊಬೈಲ್ ಪೋನ್‌ಗಳು ೨೪ ಗಂಟೆಯೊಳಗೆ ಪತ್ತೆ! ಮೊಬೈಲ್ ಪತ್ತೆಗೆ ಬಂದಿದೆ ಹೊಸ ಪೋರ್ಟಲ್ !

ಉಡುಪಿಯ ತ್ರಾಸಿ ಬೀಚ್‌ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿ ..! ಪ್ರವಾಸಿಗ ಪಾರು, ಬೋಟ್ ರೈಡರ್ ಕಣ್ಮರೆ..!