ಕೊಡಗು

ಪಾರಾಮೆಡಿಕಲ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ:ಮನೆಯಲ್ಲಿ ಯಾರೂ ಇಲ್ಲದ ವೇಳೆ ನಡೆದ ದುರ್ಘಟನೆ

ನ್ಯೂಸ್ ನಾಟೌಟ್ : ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ಪಾರಾಮೆಡಿಕಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದ ನೇತಾಜಿ ಬಡಾವಣೆಯಲ್ಲಿ ಈ ಘಟನೆ ಸಂಭವಿಸಿದೆ.

ಏನಿದು ಘಟನೆ?

ಬಡಾವಣೆ ನಿವಾಸಿ ಎಲ್‌ಐಸಿ ಏಜೆಂಟ್ ಸಂತೋಷ್ ಎಂಬುವವರ ಪುತ್ರಿ ಜಸ್ಮಿತಾ(19) ಆತ್ಮಹತ್ಯೆಗೆ ಶರಣಾಗಿರುವ ಹುಡುಗಿ. ಈಕೆ ಮಡಿಕೇರಿ ವೈದ್ಯಕೀಯ ಕಾಲೇಜಿನಲ್ಲಿ ಪಾರಾ ಮೆಡಿಕಲ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದಳು.ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸ್ಥಳಕ್ಕೆ ಕುಶಾಲನಗರ ಟೌನ್ ಪೊಲೀಸ್‌ ಪಿಎಸ್‌ಐ ಅಪ್ಪಾಜಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈಕೆಯ ಸಾವಿನ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related posts

ಮಡಿಕೇರಿ: ಗೌಡ ಪ್ರೀಮಿಯರ್ ಲೀಗ್ ಲಾಂಛನ ಬಿಡುಗಡೆ

ವಿಶ್ವ ಹಿಂದೂ ಪರಿಷದ್ ಅಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ,ಪ್ರಾಣಾಪಾಯದಿಂದ ಪಾರು ,ಮುಂದುವರಿದ ತನಿಖೆ

ಸುಳ್ಯ:ಕೊರಗಜ್ಜ ದೈವಸ್ಥಾನದ ಕಾಲಾವಧಿ ನೇಮೋತ್ಸವ,ಆಮಂತ್ರಣ ಪತ್ರಿಕೆ ಬಿಡುಗಡೆ