ದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಭಾರತದ ವಿಶೇಷ ಖಾದ್ಯ ‘ಗೋಲ್ ಗಪ್ಪ’ಕ್ಕೆ ಮನಸೋತ ಜಪಾನ್ ಪ್ರಧಾನಿ! ವಿಡಿಯೋ ವೈರಲ್!

ನ್ಯೂಸ್ ನಾಟೌಟ್: ಗೋಲ್ ಗಪ್ಪ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುವುದು ಸಹಜ. ಇದೀಗ ಗೋಲ್ ಗಪ್ಪಕ್ಕೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರು ಕೂಡ ಮನಸೋತಿದ್ದಾರೆ. ಒಮ್ಮೆ ಗೋಲ್ ಗಪ್ಪಾ ಸವಿದ ಬಳಿಕ ಒನ್ ಮೋರ್ ಎಂದು ಮತ್ತೊಮ್ಮೆ ಕೇಳಿ ತಿಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಫ್ಯೂಮಿಯೊ ಕಿಶಿದಾ ಮಾರ್ಚ್ ೨೦ರಂದು ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್​ ಪ್ರಧಾನಿಯನ್ನು ಸ್ವಾಗತಿಸಿ ಬಳಿಕ ಅವರನ್ನು ದೆಹಲಿಯ ಬುದ್ಧ ಜಯಂತಿ ಪಾರ್ಕ್​ಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಜಪಾನ್ ಪ್ರಧಾನಿ ಬೋಧಿ ವೃಕ್ಷಕ್ಕೆ ಪುಷ್ಪಾರ್ಷನೆ ಮಾಡಿದ್ದಾರೆ.

ಇದೇ ವೇಳೆ ಗೋಲ್​ ಗಪ್ಪ ಮತ್ತು ಲಸ್ಸಿಯನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಅವರಿಗೆ ಸವಿದದ್ದು ವಿಶೇಷವಾಗಿತ್ತು. ಗೋಲ್ ಗಪ್ಪ ರುಚಿಯನ್ನು ಸವಿದು ಭಾರತದ ವಿಶೇಷ ಖಾದ್ಯಕ್ಕೆ ಮನಸೋತ ಕಿಶಿದಾ “ಒನ್ ಮೋರ್” ಎಂದು ಮತ್ತೊಮ್ಮೆ ಕೇಳಿ ತಿಂದು ಸಂತೋಷಪಟ್ಟಿದ್ದಾರೆ.

ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿದಾ ಗೋಲ್​ ಗಪ್ಪ ಸವಿಯುವ ವಿಡಿಯೋ ಇದೀಗ ಟ್ವಿಟ್ಟರ್​ನಲ್ಲಿ ಹರಿದಾಡುತ್ತಿದೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗಿದೆ.

Related posts

ಪ್ರೋ.ಕೆಎಸ್ ಭಗವಾನ್ ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಪೇಜಾವರ ಶ್ರೀ ಕಿಡಿ! ಮಹಿಷ ದಸರಾದ ಬಗ್ಗೆ ಶ್ರೀಗಳು ಹೇಳಿದ್ದೇನು?

17 ವರ್ಷದ ಹುಡುಗನ ಜೊತೆ 16ರ ಅಪ್ರಾಯ್ತೆಯ ದೈಹಿಕ ಸಂಬಂಧ..! ಗರ್ಭಿಣಿಯಾದ ಬಳಿಕ ಮಾತ್ರೆ ಸೇವಿಸಿ ಭ್ರೂಣವನ್ನು ಚರಂಡಿಗೆ ಎಸೆದ ಹುಡುಗಿ..!

ಪಾಕಿಸ್ತಾನದ ನೆರವಿನೊಂದಿಗೆ 12 ಭಾರತೀಯರನ್ನು ರಕ್ಷಿಸಿದ ಕರಾವಳಿ ಪಡೆ..! ಇರಾನ್‌ ನಿಂದ ಬರುತ್ತಿದ್ದ ಹಡಗು ಅರಬ್ಬಿ ಸಮುದ್ರದಲ್ಲಿ ಮುಳುಗಡೆ..!