ದೇಶ-ಪ್ರಪಂಚ

ಪ್ರಿಯತಮನಿಗಾಗಿ ಪಾಕ್ ತೊರೆದು 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಮಹಿಳೆಗೆ ಇದೆಂಥಾ ಸಂಕಷ್ಟ,ಆಕೆ 72 ಗಂಟೆಯೊಳಗೆ ದೇಶ ತೊರೆಯಬೇಕು ಎಂದು ಹಿಂದೂ ಸಂಘಟನೆ ಖಡಕ್ ಎಚ್ಚರಿಕೆ ನೀಡಿದ್ದೇಕೆ?

ನ್ಯೂಸ್ ನಾಟೌಟ್ : ಪಬ್ ಜೀ ಮೂಲಕ ಭಾರತದ ಯುವಕನೊಬ್ಬ ಪರಿಚಯವಾಗಿ , ನಂತರ ಪ್ರೀತಿಗೆ ತಿರುಗಿ , ಪ್ರಿಯಕರನಿಗಾಗಿ ಅಕ್ರಮವಾಗಿ ಭಾರತಕ್ಕೆ ತನ್ನ ನಾಲ್ಕು ಮಕ್ಕಳೊಂದಿಗೆ ಓಡೋಡಿ ಬಂದ ಪಾಕಿಸ್ತಾನದ ಮಹಿಳೆಗೀಗ ಸಂಕಷ್ಟ ಎದುರಾಗಿದೆ.

ಭಾರತಕ್ಕೆ ಬಂದಿದ್ದ ಮಹಿಳೆ ಸೀಮಾ ಹೈದರ್ ಹಿಂದೂ ಸಂಪ್ರದಾಯ ಸ್ವೀಕರಿಸಿ,ಇದು ನನ್ನ ಕುಟುಂಬ ನಾನು ಭಾರತ ಬಿಟ್ಟು ಹೋಗಲಾರೆ ಎಂದು ಇಲ್ಲಿನ ಆಚಾರ ವಿಚಾರವನ್ನು ಅಳವಡಿಸಿಕೊಳ್ಳಲು ಪ್ರಯತ್ನ ಪಡುತ್ತಿರುವಾಗಲೇ ಹಿಂದೂ ಸಂಘಟನೆಯೊಂದು ಆಕೆಗೆ ಎಚ್ಚರಿಕೆಯನ್ನು ಸೂಚಿಸಿದೆ.

ಅತ್ತ ಪಾಕ್‌ ನಲ್ಲಿ ಸೀಮಾ ಅವರ ಕುಟುಂಬ ಇನ್ಮುಂದೆ ಸೀಮಾ ಇಲ್ಲಿಗೆ ಬರುವುದು ಬೇಡ ಅವಳು ಮುಸ್ಲಿಂ ಆಗಿ ಉಳಿದಿಲ್ಲ ಎಂದು ಹೇಳಿದ್ರೆ, ಇನ್ನೊಂದೆಡೆ ಗಂಡ ವಿಡಿಯೋ ಮೂಲಕ ಪತ್ನಿಯ ಬರುವಿಕೆಗಾಗಿ ಮನವಿ ಮಾಡಿದ್ದ.ಸೀಮಾ ಹೈದರ್ ಪಾಕಿಸ್ತಾನದ ಗೂಢಚಾರಿಕೆಯಾಗಿರಬಹುದು ಮತ್ತು ದೇಶಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಗೋ ರಕ್ಷಾ ಹಿಂದೂ ದಳದ  ರಾಷ್ಟ್ರೀಯ ಅಧ್ಯಕ್ಷ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನಾವು ದೇಶದ್ರೋಹಿ ರಾಷ್ಟ್ರದ ಮಹಿಳೆಯನ್ನು ಸಹಿಸುವುದಿಲ್ಲ. 72 ಗಂಟೆಗಳಲ್ಲಿ ಸೀಮಾ ಹೈದರ್ ದೇಶ ತೊರೆಯದಿದ್ದರೆ ಆಂದೋಲನ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಪಬ್‌ ಜೀ ಆಡುತ್ತಾ ಅದರ ಮೂಲಕವೇ ಮಹಿಳೆಯೊಬ್ಬಳಿಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದರು. ಮಹಿಳೆಗೆ ನಾಲ್ಕು ಮಕ್ಕಳ ತಾಯಿಯಾಗಿದ್ದಳು.ಆಕೆ ಪಾಕಿಸ್ತಾನ ಮೂಲದವಳು ಎಂದು ತಿಳಿದಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮುಂದುವರಿದಿತ್ತು.ಹಲವು ಸಮಯಗಳ ನಂತರ ಭಾರತದ ಸಚಿನ್ ಪಾಕ್‌ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್ ಪರಸ್ಪರ ಒಬ್ಬರನೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ.ಇದಾದ ಬಳಿಕ ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ನೇಪಾಳದ ಮೂಲಕ ಭಾರತಕ್ಕೆ ಬಂದು ಸಚಿನ್‌ ಇರುವ ಗ್ರೇಟರ್‌ ನೋಯ್ಡಾಕ್ಕೆ ಬಂದಿದ್ದರು.

Related posts

ಕೊಲೆ ಆಗಿದ್ದ ಬಾಲಕ ಸುಪ್ರೀಂಕೋರ್ಟ್‌ ಮುಂದೆ ಹಾಜರಾಗಿ ಬದುಕಿದ್ದೇನೆ ಎಂದದ್ದೇಗೆ..! ಆತನ ತಂದೆ ಮಾಡಿದ ಆ ಒಂದು ತಪ್ಪೇನು?

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ,ಈಜಿ ಮೇಲೇರಿ ಪ್ರಾಣ ಉಳಿಸಿಕೊಂಡ 7 ವರ್ಷದ ಬಾಲಕಿ..!

ಎನ್‌ ಸಿಸಿ ವಿದ್ಯಾರ್ಥಿಗಳನ್ನು ಕೆಸರು ತುಂಬಿದ ನೆಲದಲ್ಲಿ ಮಲಗಿಸಿ ಶಿಕ್ಷೆ..! ತರಬೇತುದಾರ ವಿಚಿತ್ರ ಶಿಕ್ಷೆ ನೀಡಿದ್ದೇಕೆ? ಇಲ್ಲಿದೆ ವೈರಲ್ ವಿಡಿಯೋ