ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಪಾಕ್ ನಲ್ಲಿ ವಾಟ್ಸಾಪ್​, ಫೇಸ್​ಬುಕ್, ಯೂಟ್ಯೂಬ್, ಇನ್​ಸ್ಟಾಗ್ರಾಂ ನಿಷೇಧ..! ಏಕೆ ಈ ದಿಢೀರ್ ನಿರ್ಧಾರ..?

ನ್ಯೂಸ್‌ ನಾಟೌಟ್: ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಎಕ್ಸ್ ಅನ್ನು ನಿಷೇಧಿಸಿರುವ ಪಾಕಿಸ್ತಾನ ಸರ್ಕಾರ ಈಗ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್​, ವಾಟ್ಸಾಪ್, ಫೇಸ್​ಬುಕ್, ಇನ್​ಸ್ಟಾಗ್ರಾಂ ಹಾಗೂ ಟಿಕ್​ಟಾಕ್ ನಿಷೇಧಕ್ಕೆ ಮುಂದಾಗಿದೆ. ಜುಲೈ 13ರಿಂದ 18ರವರೆಗೆ ಆರು ದಿನಗಳ ಕಾಲ ಇವುಗಳಿಗೆ ನಿಷೇಧ ಹೇರಲಾಗಿದೆ ಎಂದು ವರದಿ ತಿಳಿಸಿದೆ.

ಮೊಹರಂ ತಿಂಗಳಿನಲ್ಲಿ ದ್ವೇಷಪೂರಿತ ಭಾಷಣವಾಗಲಿ, ತಪ್ಪು ಮಾಹಿತಿಯಾಗಲಿ ರವಾನೆಯಾಗದಂತೆ ನೋಡಿಕೊಳ್ಳಲು ಪಂಜಾಬ್ ಮುಖ್ಯಮಂತ್ರಿ ಮರ್ಯಮ್ ನವಾಜ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಪಾಕಿಸ್ತಾನ ಸರ್ಕಾರವು ಇದಕ್ಕಾಗಿ ಸಂಪೂರ್ಣವಾಗಿ ಸಿದ್ಧವಾಗಿದೆ. ಮರ್ಯಮ್ ನವಾಜ್ ಅವರ ಕಾನೂನು ಮತ್ತು ಸುವ್ಯವಸ್ಥೆಯ ಸಂಪುಟ ಸಮಿತಿಯು ಈ ಪ್ರಸ್ತಾಪವನ್ನು ಮಂಡಿಸಿದೆ.

ಈ ಮೂಲಕ ಸಂಸ್ಕೃತಿಯ ಬಗ್ಗೆ ದ್ವೇಷ ಹರಡುವುದನ್ನು ಮತ್ತು ಯಾವುದೇ ಅಪಪ್ರಚಾರವನ್ನು ಪ್ರಚಾರ ಮಾಡುವುದನ್ನು ಹೆಚ್ಚಿನ ಪ್ರಮಾಣದಲ್ಲಿ ನಿಲ್ಲಿಸಬಹುದು ಎಂಬುದು ಅವರ ಅಭಿಪ್ರಾಯ ವ್ಯಕ್ತವಾಗಿದೆ. ಈ ಪ್ರಸ್ತಾವನೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವಂತೆ ಮರ್ಯಮ್ ನವಾಜ್ ದೇಶದ ಪ್ರಧಾನಿ ಬಳಿ ಮನವಿ ಮಾಡಿದ್ದಾರೆ. ಪಾಕಿಸ್ತಾನದ ಹಲವು ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳ ವಿರುದ್ಧ ಮಾತನಾಡುತ್ತಿದ್ದಾರೆ, ಅದರಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರ ಹೆಸರೂ ಇದೆ.

Click 👇

https://newsnotout.com/2024/07/google-pay-phone-pay-in-ksrtc-kannada-news-govt-bus-updated-in-terms-of-payment
https://newsnotout.com/2024/07/dengue-kannada-newsfever-8-year-old-girl-nomore-doctors
https://newsnotout.com/2024/07/21-ias-officers-transferred-to-different-districts-and-postions-karnataka-government-order

Related posts

ಬಿಳಿನೆಲೆ: ಮನೆ ಮಂದಿಯ ಮುಂದೆಯೇ ಇಲಿ ಪಾಷಾಣ ತಿಂದು ಸಾವು

ಲೈಂಗಿಕ ದೌರ್ಜನ್ಯ: ಶಿವಮೂರ್ತಿ ಶರಣರ ನ್ಯಾಯಾಂಗ ಬಂಧನ ವಿಸ್ತರಣೆ

ವಿಮಾನ ತುರ್ತು ಭೂಸ್ಪರ್ಶ..! ಪ್ರಾಣಾಪಾಯದಿಂದ ಪಾರಾದ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು..?