ಕರಾವಳಿ

ಪಾಕ್‌ ಫುಟ್ಬಾಲ್‌ ಆಟಗಾರ್ತಿಯರ ಚಡ್ಡಿ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ ಕ್ಲಾಸ್‌

ನ್ಯೂಸ್ ನಾಟೌಟ್ : ಜೀವನದಲ್ಲಿ ಕೆಲವರಿಗೆ ದೊಡ್ಡ ಸಮಸ್ಯೆಗಳಿರುತ್ತದೆ. ಇನ್ನೂ ಕೆಲವರಿಗೆ ಸಣ್ಣ ವಿಚಾರವೂ ದೊಡ್ಡದಾಗಿ ಕಾಣುತ್ತದೆ. ಹೌದು, ಇಲ್ಲೊಬ್ಬ ಪತ್ರಕರ್ತ ಫುಟ್‌ಬಾಲ್ ಆಟಗಾರ್ತಿಯರ ಚಡ್ಡಿ ಬಗ್ಗೆ ಪ್ರಶ್ನಿಸಿ ಇದೀಗ ವ್ಯಾಪಕ ಟೀಕೆಗೆ ಒಳಗಾಗಿದ್ದಾನೆ.

ಹೌದು, ಪಾಕಿಸ್ತಾನ ಮಹಿಳಾ ಫುಟ್ಬಾಲ್‌ ತಂಡದ ಕ್ರೀಡಾಪಟುಗಳಿಗೆ ಪಂದ್ಯದಲ್ಲಿ ಚಡ್ಡಿ ಧರಿಸಿ ಆಟವಾಡಿದ ಕುರಿತು ಪ್ರಶ್ನಿಸಿದ್ದ ವರದಿಗಾರನಿಗೆ ಛೀಮಾರಿ ಹಾಕಲಾಗಿದೆ. ಕಠ್ಮಂಡುವಿನಲ್ಲಿ ನಡೆಯುತ್ತಿರುವ ಎಸ್‌ಎಎಫ್‌ಎಫ್‌ ಚಾಂಪಿಯನ್‌ಶಿಪ್‌ನಲ್ಲಿ ಮಾಲ್ಡಿವ್ಸ್‌ ತಂಡದ ವಿರುದ್ಧ 7 ಗೋಲುಗಳ ಅಂತರದಲ್ಲಿ ಪಾಕಿಸ್ತಾನ ವನಿತೆಯರು ಜಯ ಗಳಿಸಿದ್ದಾರೆ. ದೀರ್ಘಾವಧಿ ಬಳಿಕ ಪಾಕ್‌ ತಂಡ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಇದು ಎಂಟು ವರ್ಷಗಳ ಬಳಿಕ ಸಿಕ್ಕ ಮೊದಲ ಜಯವಾಗಿದೆ.

ಪಂದ್ಯದ ನಂತರ ಪಾಕಿಸ್ತಾನ ವನಿತೆಯರ ಫುಟ್ಬಾಲ್‌ ತಂಡದ ಮುಖ್ಯಸ್ಥ, ತರಬೇತುದಾರ ಮತ್ತು ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ ವೇಳೆ ಆಟಗಾರ್ತಿಯರ ಧಿರಿಸಿನ ಬಗ್ಗೆ ಪ್ರಶ್ನಿಸಲಾಗಿದೆ. ನಾವು ಇಸ್ಲಾಮಿಕ್‌ ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಸೇರಿದವರು ಎಂಬುದು ನಿಮಗೆ ಗೊತ್ತಿದೆ. ಈ ಹುಡುಗಿಯರು ಯಾಕೆ ಚಡ್ಡಿ ಧರಿಸಿ ಆಟವಾಡುತ್ತಿದ್ದಾರೆ? ಯಾಕೆ ಲೆಗ್ಗಿಂಗ್ಸ್‌ ಧರಿಸಿಲ್ಲ? ಎಂದು ಓರ್ವ ವರದಿಗಾರ ಪ್ರಶ್ನಿಸಿದ್ದಾನೆ. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪತ್ರಕರ್ತನ ಪ್ರಶ್ನೆಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

Related posts

ಕರ್ನಾಟಕ ಬ್ಯಾಂಕ್ ಪರೀಕ್ಷೆಯಲ್ಲಿ IRCMD ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಆಯ್ಕೆ, ಪುತ್ತೂರು, ಸುಳ್ಯದ ಇಬ್ಬರು ಆ ಸಾಧಕ ವಿದ್ಯಾರ್ಥಿಗಳು ಯಾರು..? ಇಲ್ಲಿದೆ ಡಿಟೇಲ್ಸ್

ಸುಳ್ಯ ಬಸ್‌ ಸ್ಟ್ಯಾಂಡ್‌ನಲ್ಲಿ ಕಿರಿಕ್ ಪಾರ್ಟಿ ಕುಡುಕ..! ಮದ್ಯದ ಅಮಲಿನಲ್ಲಿ ಸುಮ್ಮನೆ ಕುಳಿತವರ ಜೊತೆ ಅನುಚಿತ ವರ್ತನೆ, ಚಳಿ ಬಿಡಿಸಿದ ಪೊಲೀಸರು..!

ಸುಬ್ರಹ್ಮಣ್ಯ:ಮಹಿಳೆ ನೇಣಿಗೆ ಶರಣು,ಘಟನೆಗೆ ಕಾರಣವೇನು?