ಕ್ರೈಂದೇಶ-ಪ್ರಪಂಚವೈರಲ್ ನ್ಯೂಸ್

ಪಾಕಿಸ್ತಾನದ ಭದ್ರತಾ ವಾಹನದ ಮೇಲೆ ಆತ್ಮಾಹುತಿ ದಾಳಿ..! ಒಂಬತ್ತು ಸೈನಿಕರ ದುರಂತ ಅಂತ್ಯಕ್ಕೆ ಕಾರಣವೇನು? ಜಮ್ಮು – ಕಾಶ್ಮೀರದ ಉರಿ ದಾಳಿ ನೆನಪಿಸಿದ ಉಗ್ರದಾಳಿ ನಡೆಸಿದ್ಯಾರು ?

ನ್ಯೂಸ್ ನಾಟೌಟ್: ಮೋಟರ್ ಸೈಕಲ್ ನಲ್ಲಿ ಬಂದ ಆತ್ಮಾ* ಹುತಿ ದಾಳಿಕೋರನೊಬ್ಬ ಪಾಕಿಸ್ತಾನದ ಭದ್ರತಾ ವಾಹನದ ಮೇಲೆ ದಾಳಿ ಮಾಡಿದ ಪರಿಣಾಮ ಕನಿಷ್ಠ ಒಂಬತ್ತು ಸೈನಿಕರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದು, ಇದು ದೇಶದಲ್ಲಿ ಹೆಚ್ಚುತ್ತಿರುವ ಉಗ್ರಗಾಮಿ ಹಿಂಸಾಚಾರಕ್ಕೆ ಉದಾಹರಣೆ ಎಂದು ಸೇನೆ ಹಾಗೂ ಮೂವರು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಈ ಘಟನೆ ಜಮ್ಮು – ಕಾಶ್ಮೀರದ ಉರಿ ಪಟ್ಟಣದ ಸಮೀಪ, 18 ಸೆಪ್ಟೆಂಬರ್ 2016 ರಂದು ನಡೆದ ದಾಳಿಯನ್ನು ನೆನಪಿಸಿದೆ.

ಅಪ್ಘಾನಿಸ್ತಾನದ ಗಡಿಯ ಖೈಬರ್ ಪುಂಖ್ಟುಖ್ವಾ ಪ್ರಾಂತ್ಯದ ಬನ್ನು ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಸೇನೆ ಹೇಳಿಕೆ ನೀಡಿದೆ. ಘಟನೆಯಲ್ಲಿ 5 ಮಂದಿ ಸೈನಿಕರು ಗಾಯಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಆದರೆ ಭದ್ರತಾ ಅಧಿಕಾರಿಗಳು, ಗಾಯಾಳುಗಳ ಸಂಖ್ಯೆ 20 ಎಂದು ಪ್ರಕಟಿಸಿದ್ದಾರೆ.

ಈ ಘಟನೆ ಬಗ್ಗೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲವಾದರೂ ಇದು 2022ರಿಂದೀಚೆಗೆ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ತಾಲಿಬಾನ್ನ ಕೃತ್ಯ ಎಂದು ಶಂಕಿಸಲಾಗಿದೆ. ಹಲವೆಡೆ ವನ್ಯಧಾಮಗಳಲ್ಲಿ ಇಂಥ ಉಗ್ರರು ಆಶ್ರಯ ಪಡೆದಿದ್ದು, ಅಪ್ಘಾನಿಸ್ತಾನದಲ್ಲಿ ಮುಕ್ತವಾಗಿಯೇ ವಾಸವಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Related posts

ಡಾಲರ್‌ ನೋಟಿನಿಂದ ಬೆವರು ಒರೆಸಿಕೊಂಡ ಪಾಕ್ ಕ್ರಿಕೆಟಿಗ..! ಇಲ್ಲಿದೆ ವಿವಾದಾತ್ಮಕ ವಿಡಿಯೋ

ಈ ಮಹಿಳೆಗೆ 2 ಗರ್ಭ ಕೋಶ..! 2 ಮಕ್ಕಳ ಜನನ..! ವೈದ್ಯಲೋಕದ ಅಚ್ಚರಿಗೆ ಕಾರಣವಾದ ಮಹಿಳೆ ಯಾರು?

ಜೈಲಿನಲ್ಲಿ ಕೈದಿಗಳಿಗೂ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ನೇರಪ್ರಸಾರ..! ಅಮೆರಿಕ ಸೇರಿದಂತೆ 51 ದೇಶಗಳಲ್ಲಿ ಬಾಲರಾಮನ ದರ್ಶನ, ಇಲ್ಲಿದೆ ಸಂಪೂರ್ಣ ಮಾಹಿತಿ