Uncategorized

ರಾಮಮಂದಿರ ಮಾದರಿಯ ಗೂಡು ದೀಪ ನೋಡಿದ್ದೀರಾ? ಜನಮನ ಗೆದ್ದ ಈ ಗೂಡು ದೀಪ ನಿರ್ಮಾಣವಾಗಿದ್ದೆಲ್ಲಿ?

ನ್ಯೂಸ್ ನಾಟೌಟ್‌: ದೀಪಾವಳಿ ಹಬ್ಬದ ಮೆರುಗನ್ನು ಹೆಚ್ಚಿಸಲು ಹೊಸ ಹೊಸ ಮಾದರಿಯ ಗೂಡು ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.ತರಹೇವಾರಿ ಗೂಡು ದೀಪಗಳತ್ತ ಎಲ್ಲರ ಚಿತ್ತ ನೆಟ್ಟಿದೆ.ಆದರೆ ಇಲ್ಲೊಂದು ಕಡೆ ರಾಮಮಂದಿರ ಮಾದರಿಯ ಗೂಡು ದೀಪ ಎಲ್ಲರ ಗಮನ ಸೆಳೆಯುತ್ತಿದೆ.

ಹೌದು,ಇಂತಹ ದೃಶ್ಯ ಕಂಡು ಬಂದಿದ್ದು ಪಡುಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಮಹಾದ್ವಾರದ ಬಳಿಯ ಬಜಪೆ ಕೈಕಂಬ ರಾಜ್ಯ ಹೆದ್ದಾರಿ ೧೦೧ರ ಬದಿಯಲ್ಲಿ.ಪಡುಪೆರಾದ ಶ್ರೀ ನಾಗಬ್ರಹ್ಮ ಯುವಕ ಮಂಡಲ ಪ್ರತಿವರ್ಷದಂತೆ ಈ ಬಾರಿಯು ಏನಾದರೂ ಯುನಿಕ್ ಆಗಿ ಗೂಡು ದೀಪ ಸಿದ್ಧಪಡಿಸಬೇಕು ಎಂದು ಯೋಚಿಸಿ ಈ ಡಿಫರೆಂಟ್‌ ಆದ ಗೂಡು ದೀಪ ತಯಾರಿಸಿದ್ದಾರೆ. ಈ ಬಾರಿ ೨೮ನೇ ವರ್ಷಕ್ಕೆ ಅಯೋಧ್ಯೆ ಶ್ರೀರಾಮ ಮಂದಿರದ ಮಾದರಿಯ ಗೂಡು ಎಲ್ಲರನ್ನು ಆಕರ್ಷಿಸುತ್ತಿದೆ.

ಸುಮಾರು ಎರಡು ತಿಂಗಳಿಂದ ಈ ಗೂಡು ದೀಪ ತಯಾರಾಗುತ್ತಿದೆ.ಈ ಗೂಡು ದೀಪ ೧೦ ಅಡಿ ಎತ್ತರ , ೧೧ ಅಡಿಉದ್ದ,೭ ಅಡಿ ಅಗಲವಿದೆ ಅನ್ನೋದೇ ವಿಶೇಷ..

Related posts

ಉಡುಪಿ ಕೃಷ್ಣ ಮಠಕ್ಕೆ ಜೂನಿಯರ್ ಎನ್.​ಟಿ.ಆರ್ ಮತ್ತು ರಿಷಬ್ ಶೆಟ್ಟಿ ಭೇಟಿ, ಜೂನಿಯರ್ ಎನ್​.ಟಿ.ಆರ್ ತಾಯಿ ಉಡುಪಿ ಮೂಲದವರು

ಜನವರಿ  31 ರಿಂದ ರಾಜ್ಯದಾದ್ಯಂತ ನೈಟ್ ಕರ್ಪ್ಯೂ ರದ್ದು

ಮಡಿಕೇರಿ : ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳಕ್ಕೆ ಬಿದ್ದ ಲಾರಿ