Latestಕ್ರೈಂವೈರಲ್ ನ್ಯೂಸ್ಸಾಧಕರ ವೇದಿಕೆ

ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ನಿಧನ..! ‘ಸುಕ್ರಜ್ಜಿ’ ಎಂದೇ ಖ್ಯಾತರಾಗಿದ್ದ ಜನಪದ ಹಾಡುಗಾರ್ತಿ

3.8k

ನ್ಯೂಸ್‌ ನಾಟೌಟ್: ಜನಪದ ಹಾಡುಗಾರ್ತಿ, ಮದ್ಯಪಾನ ವಿರೋಧಿ ಹೋರಾಟದ ಮೂಲಕ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ (88) ಗುರುವಾರ ಮುಂಜಾನೆ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೂರು ದಿನಗಳ ಹಿಂದೆಯಷ್ಟೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಗುರುವಾರ(ಫೆ.13) ಮುಂಜಾನೆ 3:30ರ ಸುಮಾರಿಗೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿವೆ

‘ಸುಕ್ರಜ್ಜಿ’ ಎಂದೇ ಖ್ಯಾತರಾಗಿದ್ದ ಸುಕ್ರಿ ಬೊಮ್ಮಗೌಡ ಅಂಕೋಲಾ ತಾಲೂಕು ಬಡಗೇರಿ ನಿವಾಸಿಯಾಗಿದ್ದರು. ಹಾಲಕ್ಕಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ಚಿರಪರಿಚಿತರಾಗಿದ್ದರು. ಬಡಗೇರಿ ಗ್ರಾಮದಲ್ಲಿ ಮದ್ಯ ಮಾರಾಟ ಹಾವಳಿ ಹೆಚ್ಚಿದ್ದರಿಂದ ಅದನ್ನು ತಡೆಯಲು ಹಲವು ದಶಕಗಳ ಹಿಂದೆ ಜನಾಂದೋಲನ ನಡೆಸಿದ್ದರು.

2006ರಲ್ಲಿ ನಾಡೋಜ ಪ್ರಶಸ್ತಿ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

See also  ಕಟೀಲು ದೇವಾಲಯಕ್ಕೆ ಬಂದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ದೇವಿಗೆ ವಿಶೇಷ ಪೂಜೆ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget