Latestದೇಶ-ವಿದೇಶ

‘ಆಪರೇಷನ್ ಸಿಂದೂರ್‌’ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ’: ಐಎಎಫ್‌

526

ನ್ಯೂಸ್‌ ನಾಟೌಟ್‌: ಭಾರತ-ಪಾಕ್‌ ನಡುವೆ ಕದನ ವಿರಾಮ ಘೋಷಣೆಯಾದರೂ ಪಾಕ್‌ ಬೆಂಬಲಿತ ಉಗ್ರರ ವಿರುದ್ಧ ಭಾರತೀಯ ವಾಯುಪಡೆ ಆರಂಭಿಸಿದ ‘ಆಪರೇಷನ್ ಸಿಂದೂರ್‌’ ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ. ಈ ಬಗ್ಗೆ ಸರಿಯಾದ ಸಮಯದಲ್ಲಿ ವಿವರವಾದ ಮಾಹಿತಿ ನೀಡಲಾಗುವುದು. ಪರಿಶೀಲಿಸದ ಮಾಹಿತಿ, ಊಹಾಪೋಹಗಳಿಂದ ದೂರವಿರಬೇಕು ಎಂದು ಐಎಎಫ್ ತನ್ನ ಎಕ್ಸ್‌ ನ ಅಧಿಕೃತ ಹ್ಯಾಂಡಲ್‌ನಲ್ಲಿ ಪ್ರಕಟಿಸಿದೆ.

https://x.com/IAF_MCC/status/1921460735575507121

“ಭಾರತೀಯ ವಾಯುಪಡೆ (IAF) ಆಪರೇಷನ್ ಸಿಂದೂರ್‌ ನಲ್ಲಿ ತನಗೆ ನಿಯೋಜಿಸಲಾದ ಕಾರ್ಯಗಳನ್ನು ನಿಖರತೆ ಮತ್ತು ವೃತ್ತಿಪರತೆಯೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಾರ್ಯಾಚರಣೆಗಳನ್ನು ಉದ್ದೇಶಪೂರ್ವಕ ಮತ್ತು ವಿವೇಚನಾಯುಕ್ತ ರೀತಿಯಲ್ಲಿ, ರಾಷ್ಟ್ರೀಯ ಉದ್ದೇಶಗಳಿಗೆ ಅನುಗುಣವಾಗಿ ನಡೆಸಲಾಯಿತು” ಎಂದು ಹೇಳಿಕೊಂಡಿದೆ.

ಎರಡು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದೆ ಎಂದು ಹೇಳಿಕೊಂಡ ಒಂದು ದಿನದ ನಂತರ ಭಾರತೀಯ ವಾಯುಪಡೆ ಈ ಮಾಹಿತಿ ಬಹಿರಂಗ ಮಾಡಿದೆ. ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳ ಬಳಿಕ ರಾಜೌರಿ ವಲಯ ಮತ್ತು ಶ್ರೀನಗರದಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಭಾರೀ ಶೆಲ್ ದಾಳಿ ನಡೆಸಿದೆ. ಅಧಿಕಾರಿಗಳ ಪ್ರಕಾರ, ಈ ಪ್ರದೇಶದಲ್ಲಿ ಹಲವಾರು ಡ್ರೋನ್‌ಗಳು ಕಂಡುಬಂದ ನಂತರ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತೆ ಕಾರ್ಯರೂಪಕ್ಕೆ ಬಂದವು. ಅಲ್ಲದೇ ಭಾರತವು ಸೇನಾ ಪ್ರಧಾನ ಕಚೇರಿಯ ಬಳಿ ಕನಿಷ್ಠ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದುಬಂದಿದೆ.

See also  ಪ್ರಜ್ವಲ್‌ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ತಡೆ ನೀಡಲು ಭವಾನಿ ರೇವಣ್ಣ ಮನವಿ..! ಅರ್ಜಿ ತಿರಸ್ಕರಿಸಿದ ಕೋರ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget