ಕ್ರೈಂರಾಜಕೀಯವೈರಲ್ ನ್ಯೂಸ್

ಹಾಸ್ಟೆಲ್‍ ನಲ್ಲಿ 19ರ ವಿದ್ಯಾರ್ಥಿನಿ ನೇಣಿಗೆ ಶರಣು..! ರೂಮ್ ನಲ್ಲಿ ಸಿಕ್ಕ ಡೆತ್ ನೋಟ್ ನಲ್ಲೇನಿತ್ತು..?

ನ್ಯೂಸ್‌ ನಾಟೌಟ್ : ವಿದ್ಯಾರ್ಥಿನಿಯೊಬ್ಬಳು ಆನ್‍ಲೈನ್ ಆ್ಯಪ್ ನಲ್ಲಿ ಹಣ ಹೂಡಿ, ನಷ್ಟಕ್ಕೆ ಒಳಗಾದ ಹಿನ್ನೆಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಮಹಾರಾಣಿ ವಿವಿಯ ಹಾಸ್ಟೆಲ್‍ನಲ್ಲಿ ನಡೆದಿದೆ. ನೇಣಿಗೆ ಶರಣಾದ ವಿದ್ಯಾರ್ಥಿನಿಯನ್ನು ಪಾವನಾ (19) ಎಂದು ಗುರುತಿಸಲಾಗಿದೆ.

ಆಕೆ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಾಂಗ ಮಾಡುತ್ತಿದ್ದಳು. ಆಕೆ ನೇಣಿಗೆ ಶರಣಾದ ರೂಮ್ ನಂಬರ್ 17 ರಲ್ಲಿ ಡೆತ್‍ನೋಟ್ ಪತ್ತೆಯಾಗಿದೆ. ಅದರಲ್ಲಿ ಆನ್‍ಲೈನ್ ಆಪ್‍ನಲ್ಲಿ 15,000 ರೂ. ಹೂಡಿಕೆ ಮಾಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆನ್‍ ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ಗೇಮ್‍ ನಲ್ಲಿ 15 ಸಾವಿರ ರೂ. ನಷ್ಟ ಅನುಭವಿಸಿದ್ದಾಳೆ.

ಇದಕ್ಕಾಗಿ ಆಕೆ ಸ್ನೇಹಿತರ ಬಳಿ ಸಾಲ ಮಾಡಿದ್ದಳು ಎನ್ನಲಾಗಿದೆ. 10 ಸಾವಿರ ರೂ. ಹೊಂದಿಸಿದ್ದ ಯುವತಿ, ಉಳಿದ 5 ಸಾವಿರ ರೂ. ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು. ಕೊನೆಗೆ ಸಾಲ ತೀರಸಲು ಆಗದೆ ಆತಂಕದಿಂದ ಭಾನುವಾರ ರಾತ್ರಿ ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಜೂ.16ರ ರಾತ್ರಿ 11:30ಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗುವ ವೇಳೆ ಚೇರ್ ಬಿದ್ದ ಶಬ್ದ ಕೇಳಿ ಬಂದಿತ್ತು. ಈ ವೇಳೆ ಪಕ್ಕದ ರೂಮ್‍ನ ವಿದ್ಯಾರ್ಥಿನಿಯರು ಬಂದು ನೋಡಿದಾಗ, ಆಕೆ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಪಾವನಾ ಗೆಳತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/about-darshan-thoogudeepa-from-umapati-kannada-news-statement
https://newsnotout.com/2024/06/darshan-farm-house-case-manager-issue-kannada-news-renukaswami-case
https://newsnotout.com/2024/06/kodagu-well-elephant-issue-forest-department-kannada-news
https://newsnotout.com/2024/06/darshan-and-team-rowdy-contacts-kannada-news

Related posts

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯ 35ನೇ ವರ್ಷಕ್ಕೆ ಪಾದಾರ್ಪಣೆ, 1990ರಲ್ಲಿ ಭಾರತೀಯ ವಕೀಲರ ಸಂಘದಿಂದ ಮಾನ್ಯತೆ ಪಡೆದ ಹೆಗ್ಗಳಿಕೆ

17 ವರ್ಷದ ಹುಡುಗನ ಜೊತೆ 16ರ ಅಪ್ರಾಯ್ತೆಯ ದೈಹಿಕ ಸಂಬಂಧ..! ಗರ್ಭಿಣಿಯಾದ ಬಳಿಕ ಮಾತ್ರೆ ಸೇವಿಸಿ ಭ್ರೂಣವನ್ನು ಚರಂಡಿಗೆ ಎಸೆದ ಹುಡುಗಿ..!

ಇವರಿಗೆ ಸರಕಾರದ ಉಚಿತ ಅಕ್ಕಿ ಬೇಡವಂತೆ..! ಅಕ್ಕಿ ಬದಲು ಹಣ ಕೊಡಿ ಎಂಬ ಒತ್ತಾಯವೇಕೆ ಗೊತ್ತಾ?