Latestಕ್ರೈಂಬೆಂಗಳೂರು

ಒಂದೂವರೆ ತಿಂಗಳ ಹಸುಗೂಸನ್ನು ನೀರಿನಲ್ಲಿ ಮುಳುಗಿಸಿ ಕೊಂದ ಕ್ರೂರಿ..! ತಾಯಿಯ ಈ ಕೃತ್ಯಕ್ಕೆ ಕಾರಣವೇನು ಗೊತ್ತಾ..?

1.1k

ನ್ಯೂಸ್‌ ನಾಟೌಟ್‌: ಹೆತ್ತ ತಾಯಿ ತನ್ನ ಒಂದೂವರೆ ತಿಂಗಳ ಹಸುಗೂಸನ್ನು ನೀರು ಕಾಯಿಸುವ ಹಂಡೆಯಲ್ಲಿ ಮುಳುಗಿಸಿ ಭಯಾನಕವಾಗಿ ಕೊಂದ ಘಟನೆ ಬೆಂಗಳೂರು ಹೊರವಲಯದ ವಿಶ್ವೇಶ್ವರಪುರದಲ್ಲಿ ನಡೆದಿದೆ.

ಬಡತನ ಹಾಗೂ ಮಗುವಿನ ಆರೈಕೆ ಕಷ್ಟವಾದ ಹಿನ್ನೆಲೆ ಮಗುವನ್ನು ತಾಯಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಶೌಚಾಲಯದಲ್ಲಿ ನೀರು ಕಾಯಿಸುವ ಹಂಡೆಯಲ್ಲಿ ತನ್ನ ಒಂದೂವರೆ ತಿಂಗಳ ಮಗುವನ್ನು ಮುಳುಗಿಸಿ ತಾಯಿ ಕೊಲೆ ಮಾಡಿದ್ದು, ಘಟನೆ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ನಗರದ ವಿಶ್ವೇಶ್ವರಪುರದಲ್ಲಿ ವಾಸವಾಗಿದ್ದ ಪವನ್ ಮತ್ತು ರಾಧಾ ದಂಪತಿಯ ಗಂಡು ಮಗುವನ್ನು ತಡರಾತ್ರಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದು, ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಆರೋಪಿ ರಾಧಾಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಪತಿ ಪವನ್ ಆಟೋ ಡೈವರ್ ಆಗಿದ್ದು, ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೂ ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಹಾಗೂ ಮನಸ್ತಾಪ ಇದ್ದು, ಮಗುವಿನ ಕೊಲೆಗೆ ನಿಖರವಾದ ಕಾರಣ ಕಲೆಹಾಕಲು ನೆಲಮಂಗಲ ಟೌನ್ ಪೊಲೀಸರು ಮುಂದಾಗಿದ್ದಾರೆ. 

See also  ಪಿಕಪ್ ಮತ್ತು ಬೈಕ್ ಡಿಕ್ಕಿ: ಬೈಕ್ ಸವಾರನ ಕಾಲಿಗೆ ಗಂಭೀರ ಪೆಟ್ಟು
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget