ಬೆಂಗಳೂರುಸುಳ್ಯ

ಸುಬ್ರಹ್ಮಣ್ಯ: ಸ್ನಾನ ಘಟ್ಟದ ಬಳಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ, ಬೆಂಗಳೂರಿನಿಂದ ಬಂದ ವೃದ್ದ ನೀರಿನ ಸೆಳೆತಕ್ಕೆ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್: ಕುಕ್ಕೆ ಸುಬ್ರಹ್ಮಣ್ಯದ ಸ್ನಾನ ಘಟದ ಬಳಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧನನ್ನು ರಕ್ಷಿಸಿರುವ ಘಟನೆ ವರದಿಯಾಗಿದೆ.

ಶುಕ್ರವಾರ ಬೆಳಗ್ಗೆ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಒಂಟಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೃದ್ಧರೋರ್ವರು ಸ್ನಾನಘಟ್ಟದ ಬಳಿ ನೀರಿಗೆ ಇಳಿದು ಬಳಿಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ದೇವಳದ ಸಿಬಂದಿ ಲೋಕಾನಾಥ್ ಅವರಿಗೆ ಮಾಹಿತಿ ನೀಡಿದ್ದರು. ಈ ವೇಳೆ ತುರ್ತಾಗಿ ಅಲ್ಲಿಗೆ ಆಗಮಿಸಿದ ಲೋಕನಾಥ್‌ ಅವರು ಅಲ್ಲಿ ಅಂಗಡಿ ನಡೆಸುತ್ತಿರುವ ಗೋಪಾಲ್‌ ಹಾಗೂ ಇನ್ನೋರ್ವರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ನೀರಿನಿಂದ ಹೊರಕ್ಕೆ ಕರೆತಂದಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ಚಾರ್ಮಾಡಿ ಘಾಟ್‌ ನಲ್ಲಿ ಮತ್ತೆ ಗುಡ್ಡ ಕುಸಿತ..! ಅಧಿಕಾರಿಗಳು ಭೇಟಿ, ಪರಿಶೀಲನೆ..!

ಬಿಗ್ ಬಾಸ್ ಮನೆಗೆ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡ ಎಂಟ್ರಿ..! ಆಟಗಳಲ್ಲಿ ಹೊಸ ತಿರುವು..!

ಸ್ನೇಹ ಶಾಲೆಯಲ್ಲಿ ೭೫ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕೃತಿ ಬಿಡುಗಡೆ