Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಅಧಿಕೃತವಾಗಿ ಯುದ್ಧ ಘೋಷಿಸಿದ ಇರಾನ್ನ ಸರ್ವೋಚ್ಛ ನಾಯಕ..! ಶರಣಾಗುವಂತೆ ಧಮ್ಕಿ ಹಾಕಿದ ಟ್ರಂಪ್‌..!

524

ನ್ಯೂಸ್ ನಾಟೌಟ್: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಯಾಗಿದ್ದು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಸ್ರೇಲ್‌ ಬೆಂಬಲಕ್ಕೆ ನಿಂತಿರುವ ಟ್ರಂಪ್‌ ಶರಣಾಗುವಂತೆ ಧಮ್ಕಿ ಹಾಕಿದ್ದಾರೆ. ಆದರೆ ಅಮೆರಿಕ ಬೆದರಿಕೆಗೂ ಜಗ್ಗದ ಇರಾನ್‌ ನ ಸರ್ವೋಚ್ಛ ನಾಯಕ ʻಯುದ್ಧ ಶುರುವಾಗಿದೆʼ ಎಂದು ಎಕ್ಸ್‌ ನಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ʻನಮಿ ಹೆಸರಿನಲ್ಲಿ, ಯುದ್ಧ ಪ್ರಾರಂಭವಾಗುತ್ತದೆ. ಅಲಿ ತನ್ನ ಜುಲ್ಫಿಕರ್‌ ನೊಂದಿಗೆ ಖಮೇನಿಗೆ ಹಿಂತಿರುಗುತ್ತಾನೆ. ಹೈದರ್‌ ಹೆಸರಿನಲ್ಲಿ ಯುದ್ಧ ಶುರುವಾಗುತ್ತೆ, ಜಿಯೋನಿಸ್ಟ್‌ (ಯಹೂದಿಗಳು) ಗಳಿಗೆ ಯಾವುದೇ ಕರುಣೆ ತೋರಲ್ಲ. ಎಂದು ಅಯತೊಲ್ಲಾ ಅಲಿ ಖಮೇನಿಯ ಪೋಸ್ಟ್‌ ಸೂಚಿಸಿದೆ.

ಇರಾನ್‌ ನ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಸದ್ಯಕ್ಕೆ ನಾವು ಹತ್ಯೆ ಮಾಡುವುದಿಲ್ಲ. ಬದಲಾಗಿ ಅಲಿ ಖಮೇನಿ ಶರಣಾಗಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇರವಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಖಮೇನಿ ಈ ಪೋಸ್ಟ್‌ ಬಂದಿದೆ. ಸುಪ್ರೀಂ ಲೀಡರ್ ಎಂದು ಕರೆಯಲ್ಪಡುವ ವ್ಯಕ್ತಿ ಅಡಗಿದ್ದಾನೆ ಎನ್ನುವುದು ನಮಗೆ ನಿಖರವಾಗಿ ತಿಳಿದಿದೆ. ಅವನನ್ನು ನಾವು ಹತ್ಯೆ ಮಾಡಲು ಹೋಗುವುದಿಲ್ಲ. ನಾಗರಿಕರು ಅಥವಾ ಅಮೇರಿಕನ್ ಸೈನಿಕರ ಮೇಲೆ ಕ್ಷಿಪಣಿಗಳು ಹಾರಿಸುವುದನ್ನು ನಾವು ಬಯಸುವುದಿಲ್ಲ. ನಮ್ಮ ಸಹನೆಯನ್ನು ಪರೀಕ್ಷೆ ಮಾಡುವುದು ಬೇಡ.

ನಾವು ಈಗ ಇರಾನ್ ಆಕಾಶದ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇವೆ. ಇರಾನ್ ಉತ್ತಮ ಸ್ಕೈ ಟ್ರ್ಯಾಕರ್‌ ಗಳು ಮತ್ತು ಇತರ ರಕ್ಷಣಾ ಸಾಧನಗಳನ್ನು ಹೊಂದಿತ್ತು. ಆದರೆ ಅಮೇರಿಕ ನಿರ್ಮಿತ ಸಾಮಾಗ್ರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಮೆರಿಕ ತಯಾರಿಸಿದಂತೆ ಯಾರೂ ಉತ್ತಮವಾಗಿ ತಯಾರಿಸಲು ಸಾಧ್ಯವಿಲ್ಲ ಎಂದು ಪೋಸ್ಟ್‌ನಲ್ಲಿ ಟ್ರಂಪ್ ಹೇಳಿದ್ದಾರೆ.

ಫೇಕ್ ಅಕೌಂಟ್‌ ನಿಂದ ಮಹಿಳೆಯರ ಮಾನಹಾನಿ ಮಾಡುತ್ತಿದ್ದ ಯುವಕ ಅರೆಸ್ಟ್..! ಮೊಬೈಲ್‌ ನಲ್ಲಿ 13,500 ಅಶ್ಲೀಲ ಚಿತ್ರ ಪತ್ತೆ..!

See also  ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸ್ತನ್ಯಪಾನ ಸಪ್ತಾಹ ದಿನಾಚರಣೆ, ವಿದ್ಯಾರ್ಥಿಗಳಿಂದ ಸ್ತನ್ಯಪಾನ ಜಾಗೃತಿ ಬಗ್ಗೆ ಮೂಕಪಾತ್ರಾಭಿನಯ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget