Latestಕ್ರೈಂರಾಜ್ಯವೈರಲ್ ನ್ಯೂಸ್

ಫೇಕ್ ಅಕೌಂಟ್‌ ನಿಂದ ಮಹಿಳೆಯರ ಮಾನಹಾನಿ ಮಾಡುತ್ತಿದ್ದ ಯುವಕ ಅರೆಸ್ಟ್..! ಮೊಬೈಲ್‌ ನಲ್ಲಿ 13,500 ಅಶ್ಲೀಲ ಚಿತ್ರ ಪತ್ತೆ..!

651

ನ್ಯೂಸ್ ನಾಟೌಟ್: ನಕಲಿ ಖಾತೆ ಸೃಷ್ಟಿಸಿ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ ಕಾಮುಖನನ್ನು ಮುಂಬೈ ಪೊಲೀಸರು ಸಂಡೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.

ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್ (25) ಬಂಧಿತ ಆರೋಪಿ ಎನ್ನಲಾಗಿದೆ. ದೆಹಲಿಯ ಕಂಪ್ಯೂಟರ್ ಸಾಫ್ಟ್‌ ಸ್ಟಿಲ್ಸ್‌ ನಲ್ಲಿ ಡಿಪ್ಲೋಮಾ ಪಡೆದಿದ್ದ ಆರೋಪಿ ಸಂಡೂರಿನ ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ.

ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಅದರಿಂದ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡೋದೇ ಇವನ ಕೆಲಸವಾಗಿತ್ತು. ಈವರೆಗೂ ಒಟ್ಟು 10 ನಕಲಿ ಖಾತೆ ಹಾಗೂ 20ಕ್ಕೂ ಹೆಚ್ಚು ಇ-ಮೇಲ್ ಐಡಿ ಮಾಡಿಕೊಂಡಿದ್ದ. ಈ ಕುರಿತು ವಿದ್ಯಾರ್ಥಿನಿಯೊಬ್ಬಳು ದೂರು ದಾಖಲಿಸಿದ್ದಳು. ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಗೂಗಲ್‌ನಿಂದ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ ಆರೋಪಿ ಶುಭಂ ನನ್ನು ಸಂಡೂರಿನಲ್ಲಿ ಬಂಧಿಸಿದ್ದಾರೆ.

ತನಿಖೆ ವೇಳೆ, ಮಹಿಳೆಯರಿಗೆ ನಗ್ನವಾಗಿ ವಿಡಿಯೋ ಕರೆ ಮಾಡುವಂತೆ ಕಿರುಕುಳ ಕೊಡುತ್ತಿದ್ದ. ಮಹಿಳೆಯರು ಒಪ್ಪದೇ ಇದ್ದಾಗ ನಕಲಿ ಖಾತೆ ಸೃಷ್ಟಿ ಮಾಡಿ, ಮಾನಹಾನಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಜೊತೆಗೆ ಆರೋಪಿಯ ಮೊಬೈಲ್‌ನಿಂದ 13,500 ಮಹಿಳೆಯರ ಅಶ್ಲೀಲ ದೃಶ್ಯಗಳಿರುವ ಸ್ಕ್ರೀನ್ ಶಾಟ್‌ಗಳನ್ನು ರಿಕವರಿ ಮಾಡಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ಯಂಗ್ ಆ್ಯಂಡ್ ಡೈನಾಮಿಕ್ ಜಿಲ್ಲಾಧಿಕಾರಿ, ಮುಲೈ ಮುಗಿಲನ್ ಗೆ ವರ್ಗಾವಣೆ

See also  ದೂರು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಿಟಿ ರವಿ ವಿರುದ್ಧ ಎಫ್.​ಐ.ಆರ್ ದಾಖಲು..! ಕೊಲೆಗೆ ಸಂಚು ಎಂದು ಹೆಬ್ಬಾಳ್ಕರ್ ವಿರುದ್ಧವೂ ಪ್ರತಿ ದೂರು..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget