ಕ್ರೈಂದೇಶ-ಪ್ರಪಂಚ

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಟ್ಟ ದು‍ಷ್ಕರ್ಮಿಗಳು ! ಸಚಿವರ ಸ್ಥಿತಿ ಗಂಭೀರ – ವಿಡಿಯೋ ನೋಡಿ

ನ್ಯೂಸ್ ನಾಟೌಟ್ : ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಅಪರಿಚಿತ ವ್ಯಕ್ತಿಗಳು ಸಚಿವರ ಟಾರ್ಗೆಟ್ ಮಾಡಿ ಅವರ ಎದೆಗೆ ಗುಂಡಿಟ್ಟಿದ್ದಾರೆ .

ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ನಬಾ ಕಿಶೋರ್ ದಾಸ್ ಅವರು ವಾಹನದಿಂದ ಇಳಿಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ ತಿಳಿದುಬಂದಿಲ್ಲ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ದಾಸ್​ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು. ಗುಂಡಿನ ದಾಳಿಯ ನಂತರ ಬಿಜೆಡಿ ಕಾರ್ಯಕರ್ತರು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Related posts

ಮುದುಕರನ್ನು ಯುವಕರನ್ನಾಗಿಸುವ ಟೈಂ ಮೆಷಿನ್..! 35 ಕೋಟಿ ರೂಪಾಯಿ ವಂಚಿಸಿದ ದಂಪತಿಯ ಕಹಾನಿ ಇಲ್ಲಿದೆ..!

ಸುಳ್ಯ: ಪಯಸ್ವಿನಿ ನದಿ ತಟದಲ್ಲಿ ಚಪ್ಪಲಿ ಇಟ್ಟು ವ್ಯಕ್ತಿ ನಾಪತ್ತೆ ಹಿನ್ನೆಲೆ, ನೀರಿಗಿಳಿದ ಮುಳುಗು ತಜ್ಞರು, ಕಾರ್ಯಾಚರಣೆ ಆರಂಭ

ಕಾಂತಾರ ಚಿತ್ರದ ದೃಶ್ಯ ಕಳುಹಿಸಿ, “ಇದೇ ರೀತಿ ಸಾಯ್ತೀಯ” ಎಂದು ಕೊಲೆ ಬೆದರಿಕೆ! ಇಲ್ಲಿದೆ ವಿಚಿತ್ರ ಪ್ರಕರಣ!