Uncategorized

ಪರೀಕ್ಷೆಗೆಂದು ಬಂದಿದ್ದ ಒಂದೇ ಕಾಲೇಜಿನ 21 ನರ್ಸಿಂಗ್‌ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್..! ಬೆಚ್ಚಿ ಬೀಳಿಸಿದ ವರದಿ

ಹಾಸನ : ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ ಎಂಬ ಭೀತಿ ಮಧ್ಯೆಯೇ ಬೆಚ್ಚಿ ಬೀಳುವಂತಹ ಘಟನೆಯೊಂದು ವರದಿಯಾಗಿದೆ. ಇತ್ತೀಚೆಗೆ  ಕೇರಳದಿಂದ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಒಂದೇ ಕಾಲೇಜಿನ 21 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಆತಂಕ ಸೃಷ್ಟಿಸಿದೆ. ಹಾಸನ ನಗರದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಓದುತ್ತಿರುವ ಕೇರಳ ಮೂಲದ 21 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ವರದಿಯಾಗಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರೇ ಇದನ್ನು ಖಚಿತಪಡಿಸಿದ್ದಾರೆ.ಹಾಸನ ಜಿಲ್ಲೆಯಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇದೀಗ ಈ ಪ್ರಕರಣ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಎಲ್ಲಾ ವಿದ್ಯಾರ್ಥಿಗಳು ಕೆ.ಆರ್ ಪುರಂನಲ್ಲಿ ಇರುವಂತಹ ಖಾಸಗಿ ಪಿಜಿಯಲ್ಲಿ ಇದ್ದುಕೊಂಡು ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ . ಎಲ್ಲಾ ವಿದ್ಯಾರ್ಥಿಗಳೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 27 ವಿದ್ಯಾರ್ಥಿನಿಯರನ್ನು ಈಗಾಗಲೇ ಖಾಸಗಿ ವಸತಿಗೃಹದಲ್ಲಿ ಕ್ವಾರಂಟೈನಲ್ಲಿ ಇಡಲಾಗಿದ್ದು ಇವರನ್ನು ಕೂಡ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

Related posts

ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ಬೆಂಕಿಗಾಹುತಿಯಾದ ಐಷಾರಾಮಿ ಪೋರ್ಷೆ ಕಾರು ..!

ಮದುವೆಗೆ ಬಂದಿದ್ದ ಸ್ನೇಹಿತ ಮಂಟಪದಲ್ಲೇ ಕುಸಿದು ಬಿದ್ದು ಸಾವು..! ಇಲ್ಲಿದೆ ವೈರಲ್ ವಿಡಿಯೋ

ರಾಮನ ದೇವಸ್ಥಾನದಲ್ಲಿ ಸಿಎಂ ಎದುರೇ ಮೊದಿ..ಮೋದಿ ಘೋಷಣೆ