ಕರಾವಳಿಸುಳ್ಯ

ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಹಾಸ್ಪಿಟಲ್ ನಲ್ಲಿ ಡಾ. ಮಹಂತ ದೇವರು ಗೆ ನುಡಿ ನಮನ ಕಾರ್ಯಕ್ರಮ

ನ್ಯೂಸ್ ನಾಟೌಟ್ : ಕೆವಿಜಿ ಆಸ್ಪತ್ರೆಯ ರಕ್ತ ನಿಧಿ ಘಟಕದ ಅಧಿಕಾರಿ ಹಾಗೂ ಪೆಥೋಲೊಜಿ ಎಮ್.ಡಿ ಡಾ. ಮಹಂತ ದೇವರು ನಿನ್ನೆ ನಿಧನರಾದರು. ಇವರು ಕೆವಿಜಿ ಆಸ್ಪತ್ರೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರಿಗೆ ಕೆವಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಇಂದು ನುಡಿ ನಮನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನಿಲಾಂಬಿಕೈ ನಟರಾಜನ್ ಮಾತನಾಡಿ “ನಾವು ನಿಜವಾಗಲೂ ಮಹಂತ ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರು ಸರಳ ನಡೆ-ನುಡಿಗಳಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.ಅವರ ಅಗಲುವಿಕೆ ನಮಗೆಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದರು. ಪೆಥೋಲೊಜಿ ವಿಭಾಗದ ಪ್ರೊ. ಡಾ. ಸತ್ಯವತಿ ಆಳ್ವ ಹಾಗೂ ಸರ್ಜರಿ ವಿಭಾಗದ ಪ್ರೊ ಡಾ. ಜಗದೀಶ್ ಬಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು , ಅಧ್ಯಾಪಕ ವೃಂದದವರು ,ವಿದ್ಯಾರ್ಥಿಗಳು ಹಾಗೂ ಸ್ನಾತಕೊತ್ತರ ವ್ಯೆದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಪೆಥೋಲೊಜಿ ವಿಭಾಗದ ಪ್ರೊ.ಡಾ. ನವ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಮಡಿಕೇರಿ: ನಿರಂತರ ಜಡಿಜಡಿ ಮಳೆ, ಮದೆನಾಡು ಬಳಿ ಕರ್ತೊಜಿ ಗುಡ್ಡ ರಾಷ್ಟ್ರೀಯ ಹೆದ್ದಾರಿಗೆ ಕುಸಿಯುವ ಭೀತಿ, ವಾಹನ ಸವಾರರೇ ಇರಲಿ ಎಚ್ಚರ, ವಿಡಿಯೋ ವೀಕ್ಷಿಸಿ

ಕಲ್ಲಡ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನಲೆ: ಫ್ಲೈಓವರ್ ಗುಂಡಿಗೆ ಬಿದ್ದ ರಿಕ್ಷಾ-ಚಾಲಕ ಪಾರು

ಪ್ರೊ.ಎಂ.ಶಿವಣ್ಣ ನೆಲಮನೆ ಅಮರವಾದರು: ಪೂವಪ್ಪ ಕಣಿಯೂರು ನೆನಪಿನಂಗಳದಿಂದ