Uncategorized

‘ದೇಗುಲಕ್ಕೆ ಕನ್ನ ಹಾಕೋದು ಬಿಟ್ಟು ವಿಧಾನಸೌಧದ ಮುಂದೆ ಹುಂಡಿ ಇಟ್ಟು ಬಿಡಿ’ ಹೇಳಿದ್ಯಾಕೆ ಬಿಜೆಪಿ ರಾಜ್ಯಾಧ್ಯಕ್ಷ?ಸಿ.ಎಂ.ಸಿದ್ದು ತಮ್ಮ ಮನೆ ಶೃಂಗಾರಕ್ಕೂ 9 ಕೋಟಿ ನುಂಗಿದ್ದಾರಂತೆ..!

ನ್ಯೂಸ್‌ ನಾಟೌಟ್‌ : ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಿಂದಲೂ ಸರ್ಕಾರದ ೫ ಗ್ಯಾರಂಟಿಗಳನ್ನು ಲೇವಡಿ ಮಾಡಿಕೊಂಡು ಬಂದಿದ್ದ ಬಿಜೆಪಿಗೆ ಯಾವುದಾದರೂ ಹೊಸ ಅಸ್ತ್ರ ಸಿಗುತ್ತಾ ಅನ್ನೋದನ್ನು ಕಾಯುತ್ತಲೇ ಇದೆ.ಇದೀಗ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ಶ್ರೀಮಂತ ದೇವಾಲಯಕ್ಕೆ ಸರಕಾರ ಕನ್ನ ಹಾಕಲು ಮುಂದಾಗಿದೆ. ದೇವಾಲಯಕ್ಕೆ ಕನ್ನ ಹಾಕುವ ಬದಲು ವಿಧಾನಸೌಧದ ಮುಂದೆ ಒಂದು ಹುಂಡಿ ಇಟ್ಟು ಬಿಡಿ. ದಾನಿಗಳು ಅಲ್ಲೇ ಬಂದು ದಾನ ಮಾಡುತ್ತಾರೆ ಎಂದು ಟೀಕಿಸಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು 224 ಕ್ಷೇತ್ರಕ್ಕೆ ಒಂದೇ ಒಂದು ರೂಪಾಯಿ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಈ ಸರ್ಕಾರದ ದುರಾಡಳಿತದಿಂದಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನೂ ಕೊಡಲು ಕಷ್ಟವಾಗುವ ಸ್ಥಿತಿ ಬಂದಿದೆ. ರಾಜ್ಯದ ಹಣೆಬರಹ ಏನಾಗುತ್ತಿದೆ ನೋಡಿ ಎಂದು ಆರೋಪಿಸಿದ್ದಾರೆ.

ನಾಡಗೀತೆ ವಿಚಾರದಲ್ಲಿ ಸರ್ಕಾರ ಎಡವಟ್ಟುಗಳನ್ನು ಮಾಡಿದೆ. ಈ ಸರ್ಕಾರದ ಕಾರ್ಯಸೂಚಿ ಏನು ಎಂಬುದು ಈ ಆದೇಶಗಳಿಂದ ಗೊತ್ತಾಗುತ್ತದೆ. ಕನ್ನಡ ವಿರೋಧಿ ಚಿಂತನೆಯಲ್ಲಿದೆ. ಕನ್ನಡ ನಾಡು – ನುಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು,ಕಾಂಗ್ರೆಸ್ ಪ್ರಕಾರ ರಾಜ್ಯದಲ್ಲಿ ಬರ ಪರಿಸ್ಥಿತಿ ಇಲ್ಲ. ಅದೇ ಭ್ರಮೆಯಲ್ಲೇ ಮುಖ್ಯಮಂತ್ರಿಯೂ ಇದ್ದಾರೆ. ಹೀಗಾಗಿಯೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ​ಮಾಡಿರುವ ಅವರು, ಜನ ಜಾನುವಾರುಗಳಿಗೆ ನೀರು, ಮೇವಿಗೆ ಹಾಹಾಕರ ಉಂಟಾಗಿ ನಾಡಿನೆಲ್ಲೆಡೆ ತೀವ್ರ ಬರ ಎದುರಿಸುತ್ತಿರುವ ಹೊತ್ತಲ್ಲಿ ತಮ್ಮ ಮನೆಯ ಶೃಂಗಾರಕ್ಕೆ ಬರೊಬ್ಬರಿ 9 ಕೋಟಿ ದುಂದು ವೆಚ್ಚ ಮಾಡುವ ಜರೂರು ಮುಖ್ಯಮಂತ್ರಿಗಳಿಗಿತ್ತೆ? ಎಂದು ಗುಡುಗಿದ್ದಾರೆ.

ಹೀನಾಯ ಆರ್ಥಿಕ ಪರಿಸ್ಥಿತಿಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ, ಸಂಕಷ್ಟದ ಕಾಲದ ಪರಿಹಾರ ಕಾರ್ಯವೂ ಸ್ಥಗಿತಗೊಂಡಿದೆ, ಇಂತಹ ಪರಿಸ್ಥಿತಿಯಲ್ಲೂ ಮನೆ ಶೃಂಗಾರದ ಆದ್ಯತೆ ಪಡೆದು 9 ಕೋಟಿ ನುಂಗಿದರೆ “ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು”..ಎಂಬ ಗಾದೆ ಮಾತು ನೆನಪಿಗೆ ಬರುತ್ತದೆ ಎಂದು ಲೇವಡಿ ಮಾಡಿದ್ದಾರೆ.

Related posts

ಕೇರಳದ ಮದುವೆ ಮನೆಯಲ್ಲಿ ಗುದ್ದಾಟ!, ಒಂದೇ ಒಂದು ಹಪ್ಪಳಕ್ಕಾದ ಜಗಳ ನಿಲ್ಲಿಸಲು ಪೊಲೀಸರ ಆಗಮನ !

ಮಡಪ್ಪಾಡಿಯಲ್ಲಿ ಲಘು ಭೂಕಂಪ, ಹೆದರಿದ ಗ್ರಾಮಸ್ಥರು..!

ನಟ ನಾಗ ಚೈತನ್ಯ ಶೋಭಿತಾ ಜೊತೆ ನಿಶ್ಚಿತಾರ್ಥ..! ಕುತೂಹಲ ಮೂಡಿಸಿದ ಮಾಜಿ ಪತ್ನಿ ನಟಿ ಸಮಂತಾ ಪ್ರತಿಕ್ರಿಯೆ..!