ಕೆವಿಜಿ ಕ್ಯಾಂಪಸ್‌

ಸುಳ್ಯ: ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅಭ್ಯುದಯ-ಮ್ಯಾನೇಜ್‌ಮೆಂಟ್ ಫೆಸ್ಟ್ ಉದ್ಘಾಟನೆ

135

ನ್ಯೂಸ್ ನಾಟೌಟ್ : ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಫಾರಮ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವತಿಯಿಂದ ಅಭ್ಯುದಯ- ಇಂಟರ್ ಕ್ಲಾಸ್ ಮ್ಯಾನೇಜ್‌ಮೆಂಟ್ ಫೆಸ್ಟ್ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಮುಖ್ಯ ಅತಿಥಿ ಸೈಂಟ್ ಫಿಲೋಮಿನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಇರಬೇಕಾದ ಆತ್ಮ ವಿಶ್ವಾಸ, ಕಾರ್ಯಸಾಧನೆಯ ಬಗ್ಗೆ ವಿವರಿಸಿದರು.

ಬಿ.ಬಿ.ಎ ವಿಭಾಗದ ಮುಖ್ಯಸ್ಥೆ ಅನಂತಲಕ್ಷ್ಮಿ ಪ್ರಾಸ್ತಾವಿಕ ಮಾತನಾಡಿದರು. ಮಿಥಾಲಿ ರೈ ಎನ್.ಎಂ.ಪಿ.ಯು.ಸಿ ಪ್ರಾಂಶುಪಾಲರು, ರತ್ನಾವತಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ಐಕ್ಯೂಎಸಿ ಸಂಯೋಜಕರಾಗಿರುವ ಡಾ. ಮಮತಾ ಕೆ ಉಪಸ್ಥಿತರಿದ್ದರು. ಫೆಸ್ಟ್ ಕನ್ವೇನರ್ ಹರಿಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ತೃತೀಯ ಬಿ.ಬಿ.ಎ ಮೇಘನಾ ಸ್ವಾಗತಿಸಿ, ಜೀತೆಶ್ ವಂದಿಸಿ, ಶ್ರೀಜಾ ನಿರೂಪಿಸಿದರು.

See also  ಕೆವಿಜಿ ಭೌತಚಿಕಿತ್ಸಾ ವಿಭಾಗದ ವಿದ್ಯಾರ್ಥಿಗೆ ಬಾಡಿ ಬಿಲ್ಡರ್ಸ್" ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ..! ಚಿನ್ನದ ಪದಕ ಪಡೆದ ಅನುರಾಗ್ ಗೆ ಕಾಲೇಜು ವತಿಯಿಂದ ಅಭಿನಂದನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget