ಬೆಂಗಳೂರು: ನ್ಯೂಸ್ ನಾಟೌಟ್ ಚಾನಲ್ ಹಾಗೂ ವೆಬ್ ಸೈಟ್ ವೃತ್ತಿಪರ ಪತ್ರಕರ್ತರು ಸೇರಿ ಪ್ರಾಮಾಣಿಕತೆಯ ಸೌದದ ಮೇಲೆ ಕಟ್ಟಿದ ಸಂಸ್ಥೆ. ಕೆಲವು ಕಿಡಿಗೇಡಿಗಳು ಸಂಸ್ಥೆಯ ಹೆಸರನ್ನು ಹಾಳು ಮಾಡುವುದಕ್ಕಾಗಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಸುಳ್ಳು ಸುದ್ದಿ ಹರಡಲು ಆರಂಭಿಸಿಕೊಂಡಿದ್ದಾರೆ. ಧರ್ಮ, ಜಾತಿಯ ಆಧಾರದಲ್ಲಿ ಕಿಡಿಗೇಡಿಗಳು ಇಂತಹ ವರ್ತನೆಯನ್ನು ತೋರಿರುವುದು ವಿಪರ್ಯಾಸವೇ ಸರಿ. ಅಂತಹ ಕಿಡಿಗೇಡಿಗಳ ವಿರುದ್ಧ ನ್ಯೂಸ್ ನಾಟೌಟ್ ತಂಡ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಿದೆ ಅನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.
ಸಂಪಾದಕ