ಕ್ರೈಂ

ಜನ್ಮ ಕೊಟ್ಟ ಮಗನನ್ನೇ ಹೊಡೆದು ಕೊಂದ ಅಪ್ಪ..!

587

ವಿಟ್ಲ: ಕುಡಿತದ ಮತ್ತಿನಲ್ಲಿ ಜನ್ಮ ಕೊಟ್ಟ ಮಗನನ್ನೇ ಹೊಡೆದು ಕೊಲೆಗೈದ ಹೃದಯವಿದ್ರಾವಕ ಘಟನೆ ವಿಟ್ಲ ಮುಡ್ನೂರು ಗ್ರಾಮದ ಕಾಂತಮೂಲೆ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.

ವಿಟ್ಲಮುಡ್ನೂರು ಗ್ರಾಮದ ಕಾಂತಮೂಲೆ ನಿವಾಸಿ ದಿನೇಶ್(೪೦ ವ.)ಕೊಲೆಯಾದವರು. ತಂದೆ ವಸಂತ ಗೌಡ ಪ್ರಕರಣದ ಆರೋಪಿಯಾಗಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ದಿನೇಶ್ ವಿವಾಹಿತರಾಗಿದ್ದು ಸಾಂಸಾರಿಕ ಕಲಹಗಳಿಂದಾಗಿ ಅವರ ಪತ್ನಿ ಕೆಲ ವರ್ಷಗಳ ಹಿಂದೆಯೇ ಅವರನ್ನು ತೊರೆದು ಹೋಗಿದ್ದಾರೆ. ಕಾಂತಮೂಲೆಯ ಮನೆಯಲ್ಲಿ ತಂದೆ, ಮಗ ಮಾತ್ರವೇ ವಾಸವಾಗಿದ್ದು, ಅವರಿಬ್ಬರ ನಡುವೆ ಆಗಾಗ ಸಣ್ಣಪುಟ್ಟ ಗಲಾಟೆ ನಡೆಯುತ್ತಿತ್ತು.

ಫೆ.೨೩ರಂದು ಕೂಡಾ ಅವರಿಬ್ಬರ ಮಧ್ಯೆ ಜಗಳ, ಗಲಾಟೆ ನಡೆದಿತ್ತು.ಗಲಾಟೆ ತಾರಕಕ್ಕೇರಿ ಮನೆಯಲ್ಲಿದ್ದ ಮರದ ತುಂಡಿನಿಂದ ವಸಂತ ಗೌಡರು ಮಗ ದಿನೇಶ್ ಅವರಿಗೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತಲೆಯ ಭಾಗಕ್ಕೆ ಗಂಭೀರ ಗಾಯಗೊಂಡಿದ್ದರಿಂದ ರಕ್ತ ಸ್ರಾವವಾಗಿ ದಿನೇಶ್ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು  ಮೃತದೇಹವು ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿದೆ . ಘಟನೆ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿ ವಸಂತ ಗೌಡರನ್ನು ಬಂಧಿಸಿದ್ದಾರೆ .ಪೊಲೀಸರು ವಿಚಾರಣೆ ವೇಳೆ  .ಫೆ.೨೩ರಂದು ರಾತ್ರಿ ನಮ್ಮಿಬ್ಬರ ಮಧ್ಯೆ ಕಲಹ ನಡೆದಿರುವುದಾಗಿ ಆರೋಪಿ ವಸಂತ ಗೌಡರು ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

See also  ಮಡಿಕೇರಿ: ಕಾಟಗೇರಿ ಬಳಿ ಭೀಕರ ಅಪಘಾತಕ್ಕೆ MBBS ವಿದ್ಯಾರ್ಥಿ ಬಲಿ, ಲಾರಿಗೆ ಡಿಕ್ಕಿಯಾಗಿ ಛಿದ್ರಗೊಂಡ ಜೀವ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget