ನ್ಯೂಸ್ ನಾಟೌಟ್: ಕೊಡಗು ಜಿಲ್ಲೆ ದೇವರಕೊಲ್ಲಿ ಸಮೀಪ ಸ್ಕಾರ್ಫಿಯೋ ಕಾರ್ ವೊಂದಕ್ಕೆ ಡಿಕ್ಕಿ ಹೊಡೆದು ವ್ಯಾನ್‌ವೊಂದು ಪಲ್ಟಿಯಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ವ್ಯಾನ್ ಮಗುಚಿ ಬಿದ್ದಿದೆ. ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಮಂಗಳೂರು ಮೂಲದವರು ಅಪಘಾತಕ್ಕೆ ತುತ್ತಾದವರು ಎನ್ನಲಾಗಿದೆ. ಎಮ್ಮೆಮಾಡಿಗೆ ಭೇಟಿ ನೀಡಿ ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸಾರ್ವಜನಿಕರು ಸುಳ್ಯದ ಕೆವಿಜಿ ಆಸ್ಪತ್ರೆಗೆ ರವಾನಿಸಿದರು. ಬ್ರೇಕ್ ಸಿಗದ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ವಾಹನದೊಳಗೆ ತಿಂಗಳಾಡಿ, ಬದಿಯಡ್ಕ ಕಡೆಯ ಹೆಚ್ಚಿನ ಪ್ರಯಾಣಿಕರು ಇದ್ದರು ಎಂದು ಎನ್ನಲಾಗಿದೆ. ನಾಲ್ಕು ಮಕ್ಕಳಿಗೂ ಗಾಯಗಳಾಗಿದೆ.