ದೇಶ-ಪ್ರಪಂಚರಾಜಕೀಯ

ಪರ್ವೇಜ್ ಮುಷರಫ್ ನಿಧನದ ಬೆನ್ನಲ್ಲೇ ವೀಡಿಯೋ ವೈರಲ್, ರಾಹುಲ್ ಗಾಂಧಿಯನ್ನು ಹಾಡಿ ಹೊಗಳಿದ್ದರು ಪಾಕಿಸ್ತಾನದ ಮಾಜಿ ಅಧ್ಯಕ್ಷ

ನ್ಯೂಸ್ ನಾಟೌಟ್ : ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನರಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೆಲ ಕ್ಷಣದಲ್ಲೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪರ್ವೇಜ್ ಮುಷರಫ್ ಅವರ ಸಂದರ್ಶನದ ಹಳೆಯ ವಿಡಿಯೋ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುಣಗಾನ ಮಾಡಿದ್ದು, ಈ ವಿಡಿಯೋವನ್ನು ನೆಟ್ಟಿಗರು ಪರಸ್ಪರ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಪರ್ವೇಜ್ ಮುಷರಫ್ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಮಾಸ್ಟರ್ ಮೈಂಡ್ ಎಂದೇ ಕುಖ್ಯಾತರಾಗಿದ್ದರು.2019ರಲ್ಲಿ ನಡೆದ ಭಾರತದ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಾಧ್ಯಮದವರು ಅವರನ್ನು ಸಂದರ್ಶನ ನಡೆಸಿದಾಗ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದ್ದಾರೆ. ರಾಹುಲ್ ಗಾಂಧಿ ಸಂಭಾವಿತ ವ್ಯಕ್ತಿ ಎಂದು ಹೊಗಳಿದ್ದರು. ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರಿಗಿಂತ ಅತ್ಯುತ್ತಮ ನಾಯಕತ್ವ ಗುಣ ಹೊಂದಿದ್ದು, ಅವರಿಗೆ ಸದಾ ಕಾಲ ನಾನು ಬೆಂಬಲ ನೀಡುತ್ತೇನೆ ಎಂದು ಪರ್ವೇಜ್ ಮುಷರಫ್ ಹೇಳಿದ್ದರು.

ನರೇಂದ್ರ ಮೋದಿ ಅವರು ಶಾಂತಿ ಪ್ರಿಯ ನಾಯಕ ಅಲ್ಲ.

ಬಿಜೆಪಿಯು ಭಾರತದಲ್ಲಿ ಧರ್ಮದ ಆಧಾರದ ಮೇಲೆ ಸಮುದಾಯವನ್ನು ವಿಭಜನೆ ಮಾಡುತ್ತಿದೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಮೋದಿಯವರಿಗಿಂತ ರಾಹುಲ್ ಗಾಂಧಿ ಅತ್ಯುತ್ತಮ ನಾಯಕ. ಅವರಿಗೆ ನಾನು ಸದಾಕಾಲ ಬೆಂಬಲ ನೀಡುತ್ತೇನೆ ಎಂದು ಹೇಳಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Related posts

Budget: ಸಿಎಂ ಸಿದ್ದು ಲೆಕ್ಕಾಚಾರ, ಯಾವ ಇಲಾಖೆಗೆ ಎಷ್ಟು ಅನುದಾನ..? ಇಲ್ಲಿದೆ ಸಂಪೂರ್ಣ ವಿವರ

ಕಾಡಾನೆ(Elephant)ಗಳೊಂದಿಗೆ ಸೆಲ್ಪಿ ತೆಗೆದು ಕೊಳ್ಳಲು ಹೋಗಿ ಜಸ್ಟ್ ಮಿಸ್,ಎದ್ನೋ ಬಿದ್ನೋ ಓಡಿ ಬಂದು ಬಚಾವ್ ಆದ ಯುವಕರು :ವಿಡಿಯೋ ವೈರಲ್

ಅತಿಥಿಯಂತೆ ಬಂದ ವಧುವಿನ ಮಾಜಿ ಪ್ರಿಯಕರನಿಂದ ವರನಿಗೆ ಥಳಿತ..! ಇಲ್ಲಿದೆ ವೈರಲ್ ವಿಡಿಯೋ