ವೈರಲ್ ನ್ಯೂಸ್

ಸಾವಿನ ನಂತರವೂ ಒಂದು ಬದುಕಿದೆ,ಇದರಲ್ಲಿ ಯಾವುದೇ ಸಂಶಯ ಬೇಡ..!,ಸಾವಿನ ನಂತರವೂ ಬದುಕಿದೆಯೇ?ಇದೇನಿದು ಸಂಶೋಧನಾ ವೈದ್ಯರೊಬ್ಬರ ಅಚ್ಚರಿಯ ಹೇಳಿಕೆ?

ನ್ಯೂಸ್ ನಾಟೌಟ್ : ಈ ಜಗತ್ತೇ ಒಂದು ವಿಸ್ಮಯ .. ! ಕೆಲವೊಂದು ಘಟನೆಗಳು ಅಚ್ಚರಿಯನ್ನು ಮೂಡಿಸುತ್ತವೆ.ತರ್ಕಕ್ಕೂ ನಿಲುಕದ ಘಟನೆಗಳು ನಮ್ಮನ್ನು ಬೆರಗುಗೊಳಿಸುವಂತೆ ಮಾಡುತ್ತವೆ.ಇದೀಗ ವೈದ್ಯರೊಬ್ಬರ ಹೇಳಿಕೆಯು ಭಾರಿ ಆಶ್ಚರ್ಯವನ್ನುಂಟು ಮಾಡಿದೆ. “ಸಾವಿನ ನಂತರವೂ ಒಂದು ಬದುಕಿದೆ. ಇದರಲ್ಲಿ ಯಾವುದೇ ಸಂಶಯ ಬೇಡ” ಎಂದು ಹೇಳಿರುವುದು ಜನರಲ್ಲಿ ಈ ಬಗ್ಗೆ ದೀರ್ಘವಾಗಿ ಯೋಚಿಸುವಂತೆ ಮಾಡಿದೆ.

ಹಲವು ವರ್ಷಗಳಿಂದಲೂ ಈ ಒಂದು ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿತ್ತು.ಸಾವಿನಾಚೆಯ ಬದುಕು ಎಂಬುದು ಮಾನವನನ್ನೂ ಅನಾದಿ ಕಾಲದಿಂದಲೂ ಕಾಡುತ್ತಿರುವ ನಿಗೂಢ ವಿಷಯವೇ ಸರಿ. ಸಾವಿನ ಬಳಿಕದ ಬದುಕಿನ ಬಗ್ಗೆ, ಪುನರ್ಜನ್ಮ, ಆತ್ಮಗಳ ಇರುವಿಕೆಯ ಬಗ್ಗೆ ಧರ್ಮಗಳು ಪ್ರತಿಪಾದಿಸಿದರೆ ವಿಜ್ಞಾನ ಮಾತ್ರ ಅದನ್ನು ಒಪ್ಪೋದಕ್ಕೆ ರೆಡಿ ಇರಲಿಲ್ಲ.ತಲೆಗೆ ಹುಳ ಬಿಡುವಂತ ಇಂತಹ ಬೆಚ್ಚಿಬೀಳಿಸುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ಸಿಗಲೇ ಇಲ್ಲ.

ಆದರೆ ಇದೀಗ ಅದಕ್ಕೆ ವೈದ್ಯರೊಬ್ಬರು ರೋಚಕ ಹೇಳಿಕೆಯೊಂದನ್ನು ನೀಡಿದ್ದಾರೆ. ಇವರು ಸಾಮಾನ್ಯ ವೈದ್ಯರೂ ಅಲ್ಲ. ಸುಮಾರು 5000ಕ್ಕೂ ಅಧಿಕ ಸಾವಿನ ಸಮೀಪದ ಅನುಭವ(Near-Death Experiences-NDE)ಗಳ ಅಧ್ಯಯನ ನಡೆಸಿರುವ ಅಮೆರಿಕದ ಕೆಂಟುಕಿಯಲ್ಲಿ ರೇಡಿಯೋ ಆನ್ಕಾಲಜಿಸ್ಟ್ ಆಗಿರುವ ತಜ್ಞವೈದ್ಯ.ಹೀಗಾಗಿ ಅವರ ಮಾತಿನಲ್ಲಿ ತೂಕವಿರೋದಂತು ನಿಜ.ಅವರು ಹೇಳಿದ ಪ್ರಕಾರ , “ಸಾವಿನ ನಂತರವೂ ಒಂದು ಬದುಕಿದೆ. ಇದರಲ್ಲಿ ಯಾವುದೇ ಸಂಶಯ ಬೇಡ” ಎಂದು ಹೇಳಿದ್ದಾರೆ ಡಾ ಜೆಫ್ರಿ ಲಾಂಗ್ ಅವರು.

ಅಂದ ಹಾಗೆ ಅವರು ಎರಡೂವರೆ ದಶಕಗಳಿಂದ ಸಾವಿನ ಆಚೆಗಿನ ಬದುಕಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರಂತೆ..!1998ರಿಂದ ಡಾ.ಲಾಂಗ್ ಸಂಶೋಧನೆ 1998ರಲ್ಲಿ ಸಾವಿನ ಸಮೀಪದ ಅನುಭವ ಸಂಶೋಧನಾ ಪ್ರತಿಷ್ಠಾನ (Near-Death Experience Research Foundation)ವನ್ನು ಸ್ಥಾಪಿಸಿರುವ ಅವರು ಇತ್ತೀಚೆಗೆ ವೆಬ್ ಸೈಟ್ ಒಂದರಲ್ಲಿ ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿರುವ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಹಾಗಾದರೆ ಇದು ಎಲ್ಲರ ಸಾವಲ್ಲೂ ಸಾಧ್ಯವಿದೆಯೇ?ಯಾರೆಲ್ಲ ಇದಕ್ಕೆ ಅರ್ಹರು ಎಂಬ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ. “ಕೋಮಾಗೆ ಹೋಗಿರುವ ಅಥವಾ ಕ್ಲಿನಿಕಲಿ ಡೆಡ್ ಆಗಿರುವ, ಹೃದಯ ಬಡಿತ ನಿಂತಿರುವ ವ್ಯಕ್ತಿಗಳು ಅವರು ನೋಡುವ, ಕೇಳುವ, ಭಾವನೆಗಳನ್ನು ಅರಿಯುವ, ಇತರರೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ” ಎಂದು ಸ್ಪಷ್ಟಪಡಿಸಿದ್ದಾರೆ.

ಹಲವು ವರ್ಷಗಳ ಕಾಲ NDE ಬಗ್ಗೆ ಬಹಳ ಅಧ್ಯಯನ ನಡೆಸಿರುವ ಅವರು ಎಲ್ಲ ಅಧ್ಯಯನಗಳ ವರದಿಗಳನ್ನು ಒಟ್ಟುಗೂಡಿಸಿ ಪ್ರತಿಯೊಂದರ ವಿಶ್ಲೇಷಣೆ ನಡೆಸಿದ್ದಾರೆ ಎಂದು ಹೇಳುವ ಅವರು ,ಪ್ರತಿಯೊಂದು ವರದಿಯೂ ವಿಭಿನ್ನವಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ಕೆಲವೊಂದು ಪ್ರಕರಣಗಳಲ್ಲಿ ಒಂದೇ ಮಾದರಿಯ ಘಟನೆಗಳು ನಡೆದಿರುವುದನ್ನು ಅವರು ಕಂಡುಕೊಂಡಿದ್ದಾರಂತೆ.ಅವರ ಪ್ರಕಾರ NDE ಅಧ್ಯಯನದಲ್ಲಿ ಶೇ.45ರಷ್ಟು ಮಂದಿಗೆ ದೇಹದ ಹೊರಗಿನ ಅನುಭವ ಆಗಿದೆ ಎಂದಿದ್ದಾರೆ.

ಪ್ರಜ್ಞೆ(consciousness)ಯು ದೇಹದಿಂದ ಬೇರ್ಪಟ್ಟು ಸಾಮಾನ್ಯವಾಗಿ ಮೇಲೆ ತೇಲಾಡುತ್ತದೆ. ಈ ವೇಳೆ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದು ಅವರಿಗೆ ಕಾಣುತ್ತಿರುತ್ತದೆ ಮತ್ತು ಕೇಳಿಸುತ್ತಿರುತ್ತದೆ. ದೇಹದಿಂದ ಹೊರಬಂದ ಬಳಿಕ ಆ ಪ್ರಜ್ಞೆಯು ಬೇರೊಂದು ಸ್ಥಳಕ್ಕೆ ಸ್ಥಳಾಂತರವಾಗುತ್ತದೆ ಎಂದು ಡಾ.ಲಾಂಗ್ ತಿಳಿಸಿದ್ದಾರೆ.

ಇಷ್ಟಾಗಿಯೂ ಇದ್ಯಾವುದಕ್ಕೂ ವೈಜ್ಞಾನಿಕ ವಿವರಣೆ ನೀಡಲು ನನ್ನಿಂದ ಅಸಾಧ್ಯ ಎಂಬುದನ್ನು ಅವರು ಒಪ್ಪಿಕೊಂಡಿದ್ದು, ನಾನು ಮೆದುಳಿನ ಸಂಶೋಧನೆ ಮತ್ತು NDE ಎಲ್ಲಾ ಸಾಧ್ಯವಿರುವ ವಿವರಣೆಗಳನ್ನು ಓದಿ ಪರಿಗಣಿಸಿದ್ದೇನೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.ಇದೇ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಇತರೆ ವೈದ್ಯರು ಸಹ ಡಾ.ಲಾಂಗ್ ಅವರು ತಿಳಿಸಿದ್ದು, ಇತರರು ಕೂಡ ಈ ವಿಚಾರಗಳನ್ನು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಇವರಿಗೂ ಇದೇ ರೀತಿಯ ಅನುಭವಗಳಾಗಿವೆ ಎಂದು ತಿಳಿಸಿದ್ದಾರೆ.

Related posts

ಕಾಲ್ನಡಿಗೆ ಮೂಲಕ ಅಯೋಧ್ಯೆಗೆ ಬಂದ 350 ಮುಸಲ್ಮಾನರು..!ರಾಮ ಮಂದಿರ ತಲುಪಿ ಪ್ರಾರ್ಥನೆ ಸಲ್ಲಿಸಿ ‘ಜೈ ಶ್ರೀ ರಾಮ್’ ಘೋಷಣೆ ..!

ಬೆಳಿಗ್ಗೆ ಪೊಲೀಸ್, ರಾತ್ರಿಯಾಗ್ತಿದ್ದಂತೆ ಕಳ್ಳ..! ಏನಿದು ಮುಖ್ಯಪೇದೆಯ ಕಳ್ಳ-ಪೊಲೀಸ್ ಆಟ? ಈತನ ಬಂಧನವಾದದ್ದೇಗೆ?

ಉಡುಪಿಯ ಗರುಡ ಗ್ಯಾಂಗ್ ಗೆ ಹಣಕಾಸಿನ ನೆರವು ನೀಡಿದ್ದ ಉಪ್ಪಿನಂಗಡಿಯ ಮಹಿಳೆ..! ಆಕೆಯನ್ನು ಬಂಧಿಸಿ ಮಂಗಳೂರಿನ ಕಾರಾಗೃಹದಲ್ಲಿ ಇರಿಸಿದ ಪೊಲೀಸರು..!