ಕ್ರೈಂ

ಉಡುಪಿಯಲ್ಲಿ ನಾಲ್ವರ ಭೀಕರ ಕಗ್ಗೊಲೆ ಪ್ರಕರಣ:ವೃತ್ತಿ ತರಬೇತಿಯನ್ನೇ ಪ್ರಯೋಗಿಸಿದ್ದ ಪಾಪಿ ಹಂತಕ..!

ನ್ಯೂಸ್ ನಾಟೌಟ್:ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ಉಡುಪಿಯಲ್ಲಿ ನಾಲ್ವರ ಭೀಕರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಪ್ರವೀಣ್ ಚೌಗುಲೆ ಒಂದೊಂದೇ ವಿಚಾರಗಳು ಮತ್ತಷ್ಟು ಬಯಲಿಗೆ ಬರುತ್ತಿದೆ.ನಾಲ್ವರನ್ನು ಕ್ಷಣ ಮಾತ್ರದಲ್ಲೇ ಕೊಂದಿದ್ದ ಪಾಪಿ ಹಂತಕ ವೃತ್ತಿ ನಿರತನಾಗಿದ್ದಾಗ ನೀಡಿದ ಆತ್ಮರಕ್ಷಣೆ ಸಹಿತ ಅನ್ಯರನ್ನು ಮಟ್ಟಹಾಕಲು ನೀಡಿದ ತರಬೇತಿಯನ್ನೇ ಉಡುಪಿಯ ನೇಜಾರಿನ ಆ ಭಯಾನಕ ಘಟನೆಗೂ ಪ್ರಯೋಗಿಸಿದ್ದಾನೆ ಎನ್ನುವುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿಯಾಗಿದೆ..!

ಹೌದು,ಏರ್‌ ಇಂಡಿಯಾದಲ್ಲಿ ಪ್ರಯಾಣಿಕರಿಗಾಗಿ ಸುರಕ್ಷತೆಯ ಪಾಠ ಹೇಳುತ್ತಿದ್ದ ಪ್ರವೀಣ್‌, ಮಹಾರಾಷ್ಟ್ರ ಪೊಲೀಸ್‌ ಇಲಾಖೆಯಲ್ಲಿ ಕೆಲ ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದ್ದ.ಈ ಸಂದರ್ಭ ಹಲವು ರೀತಿಯ ತರಬೇತಿ ಪಡೆದಿದ್ದ. ಇದರಲ್ಲಿ ಚಾಕು ಪ್ರಯೋಗವೂ ಒಂದಾಗಿದೆ.ತಾಯಿ ಹಸೀನಾ (51) ಕಿಚನ್‌ ಪಕ್ಕದ ಕೋಣೆ, ಬಾತ್‌ ರೂಮಲ್ಲಿಅಫ್ನಾನ್‌(23), ಬೆಡ್‌ ರೂಮಲ್ಲಿಗಗನಸಖಿ ಐನಾಜ್‌ (21) ಹಾಗೂ ಆಟವಾಡಿ ಅಂಗಳದಲ್ಲಿ ಸೈಕಲನ್ನು ಬಿಟ್ಟು ಬಂದ ಆಸೀಮ್‌ (13) ಹಾಲ್‌ನಲ್ಲಿ ಚಾಕು ಇರಿತಕ್ಕೊಳಗಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಎಲ್ಲರಿಗೂ ಮುಖ್ಯವಾಗಿ ಎದೆ ಹಾಗೂ ಹೊಟ್ಟೆಗೆ ಇರಿದ ಆರೋಪಿಯು ಹೆಚ್ಚು ರಕ್ತಸ್ರಾವವಾಗುವ ಶರೀರದ ಭಾಗಗಳ ಗುಟ್ಟನ್ನೂ ಅರಿತೇ ಚಾಕುವಿನಿಂದ ಇರಿದಿದ್ದಾನೆ ಎನ್ನುವ ಅಂಶ ಬಯಲಾಗಿದೆ. ಮನೆಯೊಳಗೆ ಕಾಲಿಟ್ಟರೆ ಬೆಚ್ಚಿ ಬೀಳಿಸುವ ಹಾಗೂ ಎಂಥವರ ಮನಸ್ಸನ್ನು ಕರಗಿಸುವಂತೆ ಮಾಡುವ ಆ ದೃಶ್ಯವನ್ನು ಕಂಡು ಹಿಂದೆಂದೂ ನೋಡಿಲ್ಲ ಅಂತಾರೆ ಅಲ್ಲಿನ ಜನರು..!

ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡುವ ವೇಳೆ ಪ್ರವೀಣ್‌ ಅರುಣ್‌ ಚೌಗುಲೆ ಬಲಗೈಯ ಎರಡು ಬೆರಳುಗಳಿಗೆ ಗಾಯವಾಗಿದ್ದು, ನಾಲ್ವರೂ ಚಾಕು ಇರಿತದಿಂದಾಗಿ ರಕ್ತ ಸೋರಿ ಸೋರಿ, ಬಿದ್ದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಬೊಬ್ಬೆ ಹಾಕಿದರೂ ಅದು ಹೊರಜಗತ್ತಿಗೆ ಕೇಳಿಸಿಲ್ಲ ಅನ್ನೋದು ತುಂಬಾ ನೋವಿನ ವಿಚಾರ…

ಕ್ರಿಮಿನಲ್‌ ಮನಸ್ಥಿತಿಯುಳ್ಳವರಿಗೆ ಸಂಸ್ಥೆಗಳು ಕೆಲಸ ಕೊಡಬಾರದು ಎನ್ನುವ ಆಗ್ರಹ ಮುಂದಿಟ್ಟ ಐನಾಝ್ ತಂದೆ ನೂರ್‌ ಮಹಮ್ಮದ್‌ ನನ್ನ ಮಗಳು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಉದ್ಯೋಗಿ, ಗಗನಸಖಿಯಾಗಿದ್ದಳು. ನಾಲ್ವರನ್ನು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿ ಪ್ರವೀಣ್‌ ಅರುಣ್‌ ಚೌಗುಲೆ ಕೊಲೆ ಮಾಡಿದರೂ ಸಂಸ್ಥೆಯ ವತಿಯಿಂದ ಯಾರೂ ಸಂಪರ್ಕಿಸಿಲ್ಲ, ಒಂದು ಸಾಂತ್ವನದ ಮಾತನ್ನೂ ಹೇಳಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರವೀಣ್‌ ಒಬ್ಬ ರಾಕ್ಷಸ, ಮೃಗಕ್ಕಿಂತಲೂ ಕಡೆ, ನನ್ನ ಪತ್ನಿ, ಮಕ್ಕಳಿಗೆ ಬಂದೊದಗಿದಂತಹ ಕ್ರೂರ ಸಾವು ಅನ್ಯರಿಗೆ ಬರಬಾರದು ಎಂದಿದ್ದಾರೆ.**** ಏರ್‌ ಇಂಡಿಯಾ ಉದ್ಯೋಗಿ, 39 ಹರೆಯದ ಪ್ರವೀಣ್‌ ಅರುಣ್‌ ಚೌಗುಲೆಗೆ ಮದುವೆಯಾಗಿ ಎರಡು ಮಕ್ಕಳಿದ್ದರೂ ತನಗಿಂತ 18 ವರ್ಷ ಕಿರಿಯಳಾದ ಏರ್‌ ಇಂಡಿಯಾ ಸಹೋದ್ಯೋಗಿ ಐನಾಜ್‌ಗೆ ಕಿರುಕುಳ ಕೊಟ್ಟಿದ್ದರಿಂದಲೇ ಆಕೆ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಿರಬಹುದೆನ್ನುವ ಸಹೋದರ ಅಸಾದ್‌ (27) ಪ್ರಕಾರ ಹೆಣ್ಮಕ್ಕಳು ಕೆಲಸದ ಸ್ಥಳದಲ್ಲಿಎದುರಾಗುವ ದೌರ್ಜನ್ಯವನ್ನು ಧೈರ್ಯವಾಗಿ ವಿರೋಧಿಸಬೇಕು. ಸಂಬಂಧಿತರಿಗೆ, ಹೆಲ್ಪ್‌ಲೈನಿಗೆ ದೂರು ಕೊಡಬೇಕು. ದೌರ್ಜನ್ಯವನ್ನು ಮೆಟ್ಟಿ ನಿಂತು ಉದ್ಯೋಗ ನಿರ್ವಹಿಸಬೇಕಾದ ಸವಾಲು ನಮ್ಮ ಮನೆಯ ಹೆಣ್ಮಕ್ಕಳಂತೆ ಎಲ್ಲಮನೆಯ ಹೆಣ್ಮಕ್ಕಳಿಗಿದೆ ಎಂದು ಹೇಳಿದ್ದಾರೆ.ನೇಜಾರಿನಲ್ಲಿ ಭಾನುವಾರ ನಡೆದ ತಾಯಿ ಮತ್ತು ಮೂವರು ಮಕ್ಕಳ ಹತ್ಯಾ ಪ್ರಕರಣದ ಆಘಾತದಲ್ಲಿರುವ ನೂರ್ ಮುಹಮ್ಮದ್ ಕುಟುಂಬವನ್ನು ಶುಕ್ರವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ಮಾಡಿ ಧೈರ್ಯ ತುಂಬಿದರು, ಸಾಂತ್ವನ ಹೇಳಿದರು.

Related posts

ಕುಶಾಲನಗರ: ಸಂಪೂರ್ಣ ಬೆಂಕಿಗಾಹುತಿಯಾದ ಗುಜುರಿ ತುಂಬಿದ್ದ ಲಾರಿ

ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ವೈದ್ಯ..!

ಗಡ್ಡ, ಮೀಸೆ ಬಿಟ್ಟಿದ್ದಕ್ಕೆ ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ..! 80 ಮಂದಿ ಬೀದಿ ಪಾಲು..?