ಕರಾವಳಿಕ್ರೈಂವೈರಲ್ ನ್ಯೂಸ್

ಬೆಳ್ತಂಗಡಿ: ವಿಷವಿಟ್ಟು 10 ಕ್ಕೂ ಹೆಚ್ಚು ನಾಯಿಗಳ ಹತ್ಯೆ..! ಆ ರಾತ್ರಿ ನಡೆದದ್ದೇನು..?

ನ್ಯೂಸ್ ನಾಟೌಟ್: ಯಾರೋ ವಿಷವಿಕ್ಕಿದ ಪರಿಣಾಮ ಸಾಕುನಾಯಿಗಳು ಸೇರಿದಂತೆ 10ಕ್ಕಿಂತ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ನಡೆದಿದೆ.

ಶನಿವಾರ(ಮಾ.30) ರಾತ್ರಿ ಈ ರಸ್ತೆಯುದ್ದಕ್ಕೂ ಯಾರೋ ಯಾವುದು ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಅವುಗಳನ್ನು ತಿಂದಿರುವ ನಾಯಿಗಳು ಅಲ್ಲಲ್ಲಿ ಸತ್ತು ಬಿದ್ದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಜನರು ಇದನ್ನು ಗಮನಿಸಿ ಪಂಚಾಯತ್ ಅಧ್ಯಕ್ಷರ ಗಮನಕ್ಕೆ ತಂದಿದ್ದಾರೆ. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ ಅಂಗಳದಲ್ಲೂ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಸಾವನ್ನಪ್ಪಿದ ನಾಯಿಗಳನ್ನು ಪಂಚಾಯತ್ ವತಿಯಿಂದ ಹೂಳುವ ವ್ಯವಸ್ಥೆ ಮಾಡಲಾಯಿತು ಎಂದು ವರದಿ ತಿಳಿಸಿದೆ.

Related posts

ಮಹಿಳಾ ಹಾಸ್ಟೆಲ್ ​ನಲ್ಲಿದ್ದ 47 ವಿದ್ಯಾರ್ಥಿನಿಯರು ದಿಢೀರ್ ಅಸ್ವಸ್ಥ..! ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯರಿಗೇನಾಯ್ತು..?

ಅಪ್ರಾಪ್ತ ಬಾಲಕಿಯ ಮೇಲೆ ಸ್ವಯಂಘೋಷಿತ ದೇವಮಾನವನಿಂದ ಲೈಂಗಿಕ ದೌರ್ಜನ್ಯ! ಯಾರು ಈ ಸ್ವಯಂಘೋಷಿತ ಸ್ವಾಮಿ?

ಕಡಬ: ಆಟೋ ಚಾಲಕರೊಬ್ಬರಿಂದ ಅಧಿಕ ದರ ಪಡೆದು ವಾಗ್ವಾದ,ಪಂಪ್ ಕಚೇರಿಯತ್ತ ಅಟೋಚಾಲಕರು ಜಮಾವಣೆ