ಕ್ರೀಡೆ/ಸಿನಿಮಾ

ವೇದ ಸಿನಿಮಾದಲ್ಲಿ ಶಿವಣ್ಣನ ಆರ್ಭಟ:ಹುಚ್ಚೆದ್ದು ಕುಣಿದ ಸಿನಿ ಅಭಿಮಾನಿಗಳು

ನ್ಯೂಸ್ ನಾಟೌಟ್ : ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ‘ವೇದ’ ಇಂದು ಬಿಡುಗಡೆಯಾಗಿದೆ. ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ವೇದ’ ಅರ್ಭಟ ಶುರುವಾಗಿದೆ.

ಅಭಿಮಾನಿಗಳು ಖುಷ್ :

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ನಟನೆ ನೋಡಿದ್ರೆ ಬೆರಗಾಗೋದು ಗ್ಯಾರಂಟಿ. 60ರ ವಯಸ್ಸಲ್ಲೂ ಶಿವಣ್ಣ ಅವರದ್ದು ಎಂಥಾ ಆ್ಯಕ್ಟಿಂಗ್ ಕಣ್ರಿ. ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಜುಂಜಪ್ಪ ಹಾಡಿನ ಜೊತೆ ಫೈಟಿಂಗ್ ಸೀನ್ ಮೂಲಕ ಶಿವರಾಜ್ ಕುಮಾರ್ ಎಂಟ್ರಿ ಕೊಡ್ತಾರೆ. ಶಿವಣ್ಣ ಮಾಸ್ ಲುಕ್ ನೋಡಿ ಅಭಿಮಾನಿಗಳು ಶಿಳ್ಳೆ,ಚಪ್ಪಾಳೆ ಹೊಡೆದು ಕುಣಿದಾಡಿದರು.

ಗಮನ ಸೆಳೆದ ಚಿತ್ರ:


ಈ ಸಿನಿಮಾ 1965, 1985 ಹಾಗೂ 2021ರ ಕಾಲಘಟ್ಟಗಳಲ್ಲಿ ನಡೆಯೋ ಕಥೆಯಾಗಿದೆ. ಸಾಮಾಜಿಕ ಸಂದೇಶವನ್ನು ತಿಳಿಸುವ ಒಂದು ಅದ್ಭುತ ಸಿನಿಮಾ ಆಗಿದೆ. ಇನ್ನು ಶಿವರಾಜ್ ಕುಮಾರ್ ಸಿನಿಮಾ ಅಂದ್ರೆ ಫೈಟ್ಸ್ ಗೆ ಕಡಿಮೆ ಇರುತ್ತಾ? ವೇದ ಸಿನಿಮಾದಲ್ಲೂ ಅತ್ಯದ್ಭು ಫೈಟಿಂಗ್ ಸೀನ್ ಗಳಿವೆ. ತನ್ನ ಆ್ಯಕ್ಷನ್ ಮೂಲಕ ಶಿವಣ್ಣ ಎಲ್ಲರ ಗಮನ ಸೆಳೆಯುತ್ತಾರೆ. ಹ್ಯಾಟ್ರಿಕ್ ಹೀರೋ ಜೊತೆ ಫೈಟಿಂಗ್ ಸೀನ್ ನಲ್ಲಿ ಅದಿತಿ ಸಾಗರ್ ಕೂಡ ಸಾಥ್ ನೀಡಿದ್ದಾರೆ.

ನಟಿ ಮಣಿಯರ ಅಭಿನಯ ಸೂಪರ್ :


ಅದಿತಿ ಸಾಗರ್ ತಮ್ಮ ಮೊದಲ ಸಿನಿಮಾದಲ್ಲೇ ಭರ್ಜರಿಯಾಗಿ ಮನರಂಜಿಸಿದ್ದಾರೆ. ನಟಿ ಗಾನವಿ ಲಕ್ಷ್ಮಣ್ ಅವರಿಗೆ ಎರಡು ಶೇಡ್ ನ ಪಾತ್ರ ಇದೆ. ವೇಶ್ಯೆ ಪಾತ್ರದಲ್ಲಿ ಶ್ವೇತ ಚಂಗಪ್ಪ ನಟಿಸಿ ಧೂಳೆಬ್ಬಿಸಿದ್ದಾರೆ. ಹೆಣ್ಣಿನ ಮಹತ್ವ ಸಾರುವ ಸಿನಿಮಾ ವೇದ ಅಂದ್ರೆ ತಪ್ಪಾಗಲ್ಲ . ಶಿವಣ್ಣನ ಅಭಿಮಾನಿಗಳು ಸಿನಿಮಾ ನೋಡಲು ಕಾತುರದಿಂದ ಬೆಳ್ಳಂ ಬೆಳಗ್ಗೆ ಥಿಯೇಟರ್ ಬಳಿ ಬಂದು ನಿಂತಿದ್ದರು. ಮೂವಿ ನೋಡಿದ ಮೇಲಂತು ಫ್ಯಾನ್ಸ್ ‘ಈ ಸಿನಿಮಾ ನೋಡೋಕೆ ಡಬಲ್ ಮೀಟರ್ ಬೇಕು ‘ ಎಂದು ರಿಯಾಕ್ಷನ್ ಮಾಡಿದ್ದಾರೆ.

Related posts

ಹಿರಿಯ ಹಾಸ್ಯ ಕಲಾವಿದ ಮಂದೀಪ್ ರಾಯ್ ಇನ್ನಿಲ್ಲ, ತಡರಾತ್ರಿ ಹೃದಯಾಘಾತದಿಂದ ವಿಧಿವಶ

ಸೋನಾಕ್ಷಿ ಸಿನ್ಹಾ ಜಹೀರ್ ಇಕ್ಬಾಲ್ ಜೊತೆ ಇಂದು(ಜೂ.23) ವಿವಾಹ..! ಇಸ್ಲಾಂಗೆ ಮತಾಂತರವಾಗ್ತಾರಾ ಬಾಲಿವುಡ್ ನಟಿ..? ಈ ಬಗ್ಗೆ ವರನ ತಂದೆ ಹೇಳಿದ್ದೇನು..?

IPL 2022: ಮೆಗಾ ಹರಾಜು ಬೆಂಗಳೂರಿನಿಂದ ಶಿಫ್ಟ್?