ಕೃಷಿ ಸಂಪತ್ತುಜೀವನಶೈಲಿದೇಶ-ಪ್ರಪಂಚ

ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ! ಏನಿದು ವ್ಯಾಪಾರಿಗಳ ಹೊಸ ಪ್ಲಾನ್!

ನ್ಯೂಸ್ ನಾಟೌಟ್: ಈಗ ಮಾವಿನಹಣ್ಣಿನ ಸೀಸನ್ ಶುರುವಾಗಿದೆ. ಮಾವಿನ ಹಣ್ಣುಗಳಲ್ಲಿ ದೇವಗಡ ಮತ್ತು ರತ್ನಗಿರಿಯ ಅಲ್ಫೋನ್ಸೊ(alphonso) ಮಾವು ಅತ್ಯುತ್ತಮ ಜಾತಿ ಎನಿಸಿಕೊಂಡಿವೆ. ಇದರ ಬೆಲೆ ಕೂಡ ಹೆಚ್ಚಾಗಿಯೆ ಇದ್ದು, ಸದ್ಯ ಈ ಅಲ್ಫೋನ್ಸೊ ಹಣ್ಣುಗಳನ್ನು ವ್ಯಾಪಾರಿಯೊಬ್ಬರು ಇಎಂಐ ಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆ.

ಪುಣೆಯ ಹಣ್ಣು ಮಾರಾಟಗಾರರೊಬ್ಬರು ಮಾವಿನ ಹಣ್ಣು ಮಾರಾಟ ಹೆಚ್ಚು ಮಾಡಲು ಹೊಸ ಟ್ರಿಕ್ ಉಪಯೋಗಿಸಿದ್ದು, ಇಎಂಐನಲ್ಲಿ ಹಣ್ಣಿನ ಮಾರಾಟ ಮಾಡುವಂಥ ಯೋಜನೆ ಕಾರ್ಯಗತಗೊಳಿಸಿದ್ದಾರೆ.

ಅಲ್ಫೋನ್ಸೊ ಮಾವಿನ ಹಣ್ಣುಗಳನ್ನು ಮಾಸಿಕ ಕಂತುಗಳು ಅಥವಾ EMI ಗಳಲ್ಲಿ ಮಾರಾಟ ಮಾಡಲು ಒಂದು ಪ್ರಯೋಗ ನಡೆಸಿದ್ದಾರೆ ಎನ್ನಲಾಗಿದ್ದು. ಗುರುಕೃಪಾ ಟ್ರೇಡರ್ಸ್ ಮತ್ತು ಫ್ರೂಟ್ ಪ್ರಾಡಕ್ಟ್ಸ್ ನ ಗೌರವ್ ಸನಾಸ್ ಈ ಉಪಾಯ ಜಾರಿಗೆ ತಂದಿದ್ದಾರೆ.

ಅವರ ಪ್ರಕಾರ ಈ ಯೋಜನೆಯಿಂದ ಸಾಮಾನ್ಯವಾಗಿ ಅಲ್ಪಾನ್ಸೊವನ್ನು ಖರೀದಿಸಲು ಸಾಧ್ಯವಾಗದ ಸಾಮಾನ್ಯ ಜನರು ಸಹ ಈ ವರ್ಷ ಅದನ್ನು ಖರೀದಿಸಬಹುದು. ನಂತರ ನಿಧಾನವಾಗಿ ಇಎಂಐ ತುಂಬಬಹುದು ಎಂದು ಹೇಳುತ್ತಿದ್ದಾರೆ.

ಬೆಲೆ ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಮಾವಿನ ಹಣ್ಣನ್ನು ಖರೀದಿ ಮಾಡದೆ ಇರುವುದಿಲ್ಲ. ಈ ಪ್ರಯೋಗದ ಯಶಸ್ವಿಯಾದರೆ ಮುಂದೆ ದೊಡ್ಡ ಮಟ್ಟದಲ್ಲಿ ಯೋಜಿಸಲು ಇವರು ನಿರ್ಧರಿಸಿರುವುದಾಗಿ ವರದಿ ತಿಳಿಸಿದೆ.

Related posts

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟವನು ತೀರ್ಥಹಳ್ಳಿ ವ್ಯಕ್ತಿಯೇ?ಈ ಪ್ರಕರಣಕ್ಕೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇದೆಯಾ?

4ನೇ ಬಾರಿ CM ಆಗಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು..! ಆಂಧ್ರಕ್ಕೆ ಬಂದ ನರೇಂದ್ರ ಮೋದಿ, ಇಲ್ಲಿದೆ ವಿಡಿಯೋ

ಏ.27ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಂಗಳೂರು ಭೇಟಿ