ಕೊಡಗು

ಮಡಿಕೇರಿ/ಬೆಂಗಳೂರು: ತಂದೆಯ ಗನ್‌ನಿಂದಲೇ ಗುಂಡು ಹಾರಿಸಿಕೊಂಡು ಫೋನ್ ಮಾಡಿದ ಮಗ..! ‘ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ’ವೆಂದು ಆತ್ಮಹತ್ಯೆಗೆ ಶರಣಾಗಿದ್ದೇಕೆ?

ನ್ಯೂಸ್ ನಾಟೌಟ್ : ತಂದೆ ಬಳಿಯಿದ್ದ ಗನ್‌ನಿಂದಲೇ ಎದೆಯ ಭಾಗಕ್ಕೆ ಗುಂಡು ಹಾರಿಸಿಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭವಾನಿನಗರದಲ್ಲಿ ನಡೆದಿದೆ. ವಿಶು ಉತ್ತಪ್ಪ (19) ಆತ್ಮಹತ್ಯೆ ಮಾಡಿಕೊಂಡ ಬಿಇ ಪ್ರಥಮ ವರ್ಷದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಕೊಡಗು ಮೂಲದ ತಮ್ಮಯ್ಯ ಎಂಬುವವರು ನೈಸ್ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದು, ಕಳೆದ 15 ವರ್ಷದಿಂದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭವಾನಿನಗರದಲ್ಲಿ ಕುಟುಂಬ ಸಹಿತ ವಾಸವಿದ್ದರು.

ತಂದೆ ರೇಷನ್ ತರಲೆಂದು ಹೊರಗಡೆ ಹೋಗಿದ್ದಾಗ ವಿಶು ಗನ್ನಿಂದ ಫೈಯರ್ ಮಾಡಿಕೊಂಡು ತಂದೆಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ. ನಾನು ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾನೆ. ಗಾಬರಿಗೊಂಡ ತಂದೆ ಮನೆಗೆ ದೌಡಾಯಿಸಿ ಬಂದು ನೋಡಿದಾಗ ವಿಶು ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ವಿಶು ಉತ್ತಪ್ಪ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

Related posts

ಕೊಡಗು: ಬಣ್ಣದ ಅಂಗಡಿಯೊಂದರಲ್ಲಿ ಆಕಸ್ಮಿಕ ಬೆಂಕಿ,ಬಣ್ಣ ಹಾಗೂ ಇತರೆ ಪರಿಕರಗಳು ಸುಟ್ಟು ಭಸ್ಮ,ನಷ್ಟ

ಸಂಸತ್​ ಒಳಗೆ ಕಿಡಿಗೇಡಿಗಳು ನುಗ್ಗಿದ ಪ್ರಕರಣಕ್ಕೆ ಮೊದಲ ಪ್ರತಿಕ್ರಿಯೆ,ದೇಶ ದ್ರೋಹಿ ಎಂದಿದ್ದಕ್ಕೆ ಸಂಸದ ಪ್ರತಾಪ್​ ಸಿಂಹ ಹೇಳಿದ್ದೇನು?

ಕೊಡಗು :ನಿಫಾ ವೈರಸ್ ಹರಡುವ ಭೀತಿ, ಕೊಡಗು ಜಿಲ್ಲೆಯಲ್ಲಿ ಹೈ ಅಲರ್ಟ್:ಜಿಲ್ಲಾಸ್ಪತ್ರೆ, ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಸಿದ್ಧತೆ ಹೇಗಿದೆ?ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ?