ಕರಾವಳಿದೇಶ-ಪ್ರಪಂಚ

ಇಂಡಿಗೋ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಕರಾವಳಿಯ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿ!

ನ್ಯೂಸ್‌ನಾಟೌಟ್‌: ಇಂಡಿಗೋ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮಂಗಳೂರಿಗೆ ಗುರುವಾರ ಬೆಳಗ್ಗೆ ತಲುಪಬೇಕಾಗಿದ್ದ ಸುಮಾರು 12 ಮಂದಿ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿಯಾಗಿದ್ದಾರೆ. ಅಗತ್ಯ ಕೆಲಸಗಳಿಗಾಗಿ ಊರಿಗೆ ಬರಬೇಕಾಗಿದ್ದವರು ಈಗ ಮುಂಬಯಿಯಲ್ಲಿ ಸಿಕ್ಕಿಬಿದ್ದಿದ್ದು, ಇಂಡಿಗೋ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬಹರೈನ್‌ನಿಂದ ಬಂದಿದ್ದ ವಿಮಾನ ಮುಂಬಯಿ ತಲುಪುವಾಗ ಎರಡು ಗಂಟೆ ತಡವಾಗಿದ್ದು ಮತ್ತು ಮುಂಬಯಿಯಿಂದ ಮಂಗಳೂರಿಗೆ ಬರುವ ಕನೆಕ್ಟಿಂಗ್‌ ವಿಮಾನ 12 ಮಂದಿ ಪ್ರಯಾಣಿಕರನ್ನು ಬಿಟ್ಟೇ ಹಾರಾಟ ನಡೆಸಿದ ಈ ಸಮಸ್ಯೆಗೆ ಮೂಲ ಕಾರಣವಾಗಿದೆ.

ಬಹರೈನ್‌ನಿಂದ 12 ಮಂದಿ ಪ್ರಯಾಣಿಕರು ಊರಿಗೆ ವಾಪಾಸಾಗಲು ಬುಧವಾರ ರಾತ್ರಿ ಹೊರಡುವ ವಿಮಾನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಎಲ್ಲರೂ ವಿಮಾನ ಹತ್ತಿ ಕುಳಿತಿದ್ದರೂ ಓರ್ವ ಪ್ರಯಾಣಿಕ ಮಾತ್ರ ನಾಪತ್ತೆಯಾಗಿದ್ದ. ಬೋರ್ಡಿಂಗ್‌ನಲ್ಲಿ ಚೆಕ್ ಇನ್ ಮಾಡಿ ಲಗೇಜ್ ದಾಟಿಸಿದ್ದರೂ ಆತ ಮಾತ್ರ ಕಾಣಿಸಿರಲಿಲ್ಲ. ಬಳಿಕ ಎಲ್ಲ ಕಡೆ ತಪಾಸಣೆ ನಡೆಸಿ ಮೈಕ್‌ನಲ್ಲಿ ಘೋಷಿಸಿದರೂ ಸಿಗಲಿಲ್ಲ. ಸುಮಾರು ಎರಡು ಗಂಟೆ ಕಾದ ಬಳಿಕ ಆತನ ಲಗೇಜನ್ನು ಕೆಳಗಿಳಿಸಿ ವಿಮಾನ ಮುಂಬಯಿಗೆ ಹೊರಟಿತು. ಇದರಿಂದ ಮುಂಬಯಿಗೆ ಬೆಳಗ್ಗೆ 5.30ಕ್ಕೆ ತಲುಪಬೇಕಾಗಿದ್ದ ವಿಮಾನ ಎರಡು ಗಂಟೆ ತಡವಾಗಿ 7.30ಕ್ಕೆ ತಲುಪಿದೆ. ಆಗ ಮುಂಬಯಿಯಿಂದ 7.45ಕ್ಕೆ ಮಂಗಳೂರಿಗೆ ಹೊರಡುವ ಇಂಡಿಗೋ ಕನಕ್ಟೆಂಗ್‌ ವಿಮಾನ ಬಹರೈನ್‌ನಿಂದ ಬಂದ ವಿಮಾನ ತಡವಾಗಿ ಬಂದಿದೆ ಎನ್ನುವ ವಿಷಯ ತಿಳಿದಿದ್ದರೂ ಕರಾವಳಿ ಬರಬೇಕಾಗಿದ್ದ ಪ್ರಯಾಣಿಕರಿಗೆ ಕನೆಕ್ಟೆಂಗ್‌ ವಿಮಾನದಲ್ಲಿ ಅವಕಾಶ ಕಲ್ಪಿಸದೆ ನಿಗದಿತ ಸಮಯಕ್ಕೆ ಹೊರಟ ಕಾರಣ ಮಂಗಳೂರಿಗೆ ಬರಬೇಕಿದ್ದ ಪ್ರಯಾಣಿಕರು ಮುಂಬಯಿ ವಿಮಾನ ನಿಲ್ದಾಣದಲ್ಲೇ ಪರದಾಡಬೇಕಾಯಿತು.

ಬಹರೈನ್‌ನಲ್ಲಿ ಓರ್ವ ಪ್ರಯಾಣಿಕನಿಗಾಗಿ ಎರಡು ಗಂಟೆ ಕಾದ ವಿಮಾನಯಾನ ಸಂಸ್ಥೆ ಇಲ್ಲಿ ಒಂದರ್ಧ ಗಂಟೆ ಕಾಡಿದರೆ ಏನಾಗುತ್ತಿತ್ತು. ಎಂದು ಪ್ರಯಾಣಿಕರು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ 15 ನಿಮಿಷದಲ್ಲಿ ಒಂದು ವಿಮಾನದಿಂದ ಮತ್ತೊಂದು ವಿಮಾನಕ್ಕೆ ಶಿಫ್ಟ್‌ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ. ಈ ನಡುವೆ ಮುಂಬಯಿಯಿಂದ ಮಂಗಳೂರಿಗೆ ಇಂಡಿಗೊ ಸಂಸ್ಥೆಯ ಮುಂದಿನ ವಿಮಾನ ಇರುವುದು ಸಾಯಂಕಾಲ 7 ಗಂಟೆಗೆ. ಅಲ್ಲಿಯವರೆಗೆ ಪ್ರಯಾಣಿಕರು ಮುಂಬಯಿನಲ್ಲೇ ಪರದಾಡಬೇಕಾಗಿದೆ.

Related posts

ಸೇನಾ ವಿಮಾನ ಪತನ : ಪೈಲೆಟ್ ದುರಂತ ಅಂತ್ಯ !

ಪುತ್ತೂರಲ್ಲಿ ಸಾವಿನ ಮನೆಗೆ ತೆರಳಿ ಸಾಂತ್ವಾನ ಹೇಳಿದ ಪುತ್ತಿಲ ಬಗ್ಗೆ ಅಪಪ್ರಚಾರ..! ಬಕ್ರೀದ್ ಹಬ್ಬಕ್ಕೆ ಹೋದರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ವಿರೋಧಿಗಳು..!

ಮಡಿಕೇರಿ:ರಾಜಾರೋಷವಾಗಿ ತಿರುಗಾಡುತ್ತಿರುವ ಕಾಡಾನೆಗಳು,ಗೇಟು ಮುರಿದು ಅಂಗಳಕ್ಕೆ ನುಗ್ಗಿ ಕೃಷಿ ಬೆಳೆ ಹಾನಿ