ಕ್ರೈಂದೇಶ-ಪ್ರಪಂಚವಿಡಿಯೋವೈರಲ್ ನ್ಯೂಸ್

ಎನ್‌ ಸಿಸಿ ವಿದ್ಯಾರ್ಥಿಗಳನ್ನು ಕೆಸರು ತುಂಬಿದ ನೆಲದಲ್ಲಿ ಮಲಗಿಸಿ ಶಿಕ್ಷೆ..! ತರಬೇತುದಾರ ವಿಚಿತ್ರ ಶಿಕ್ಷೆ ನೀಡಿದ್ದೇಕೆ? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ತರಬೇತಿ ಪಡೆಯುತ್ತಿದ್ದ ಕೆಲ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿ ಶಿಕ್ಷಿಸಿದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿರುವ ವಿದ್ಯಾ ಪ್ರಸಾರಕ್ ಮಂಡಲ್ ಕಾಲೇಜಿನಲ್ಲಿ ವರದಿಯಾಗಿದೆ.

ಹಿರಿಯ ಎನ್‌ಸಿಸಿ ತರಬೇತುದಾರರು ಜೂನಿಯರ್ ವಿದ್ಯಾರ್ಥಿಗಳಿಗೆ ಕಾರ್ಪೋರಲ್ ಶೈಲಿಯಲ್ಲಿ ಥಳಿಸುವ ವಿಡಿಯೋ ಹೊರಬಂದಿದೆ. ವಿಡಿಯೋದಲ್ಲಿ ಎನ್‌ಸಿಸಿ ವಿದ್ಯಾರ್ಥಿಗಳನ್ನು ಮಳೆನೀರು ಮತ್ತು ಕೆಸರು ತುಂಬಿದ ನೆಲದ ಮೇಲೆ ಮಲಗಿಸಲಾಗಿದ್ದು, ಅವರಿಗೆ ಹಿರಿಯ ತರಬೇತುದಾರರು ಹಲ್ಲೆ ನಡೆಸಿದ್ದಾರೆ.

ಭಯಭೀತರಾದ ವಿದ್ಯಾರ್ಥಿಗಳು ಅಳುವುದು ವಿಡಿಯೋದಲ್ಲಿದ್ದು, ಹೊಡೆಯದಂತೆ ಗೋಗರೆಯುತ್ತಿದ್ದರು. ಈ ಘಟನೆ ವೈರಲ್‌ ಆಗುತ್ತಿದ್ದಂತೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಜಿತೇಂದ್ರ ಅವದ್ ಆಘಾತ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಈ ವಿಷಯದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Related posts

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ..! 6 ಶವ ಪತ್ತೆ, ಹಲವರು ಸಾವನ್ನಪ್ಪಿರುವ ಶಂಕೆ..!

ಕಾರು ಅಪಘಾತದಲ್ಲಿ ಜೋಡಿಯ ಪ್ರಾಣ ಉಳಿಸಿದ ಮೊಬೈಲ್

ಸೆಕೆಂಡ್ ಹ್ಯಾಂಡ್ ಮಂಚ ನೀಡಿದಕ್ಕೆ ಮದುವೆ ನಿರಾಕರಿಸಿದ ವರ, ಘಟನೆಗೆ ಟ್ವಿಸ್ಟ್ ನೀಡಿದ ವಧು !