Uncategorized

ಎನ್ ಸಿಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರಕಾರ 

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಸೌಧದಲ್ಲಿ ಓಬವ್ವ ಆತ್ಮ ರಕ್ಷಣಾ ಕಲಾ ಕೌಶಲ್ಯ ತರಬೇತಿ ಚಾಲನೆ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಹಾಗೂ ಕ್ರೈಸ್ತ ವಸತಿ ಶಾಲೆಗಳ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳಿಗೆ ಆತ್ಮ ರಕ್ಷಣೆ ಕಲೆಯನ್ನು ತರಬೇತಿ ನೀಡುವ ಕಾರ್ಯಕ್ರಮ ಇದಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಆತ್ಮರಕ್ಷಣೆ ಕಲೆಗಳ ಪ್ರದರ್ಶನ ಮಾಡಿದರು.

7,500 ಹೊಸ ಕೆಡೆಟ್ಸ್ ತೆಗೆದುಕೊಳ್ಳಲು ಸರ್ಕಾರ ನಿರ್ಧಾರ ಮಾಡಿದೆ. 44 ಸಾವಿರ ಶಾಲೆಗಳಲ್ಲಿ ಎನ್‌ಸಿಸಿ ಇದೆ. ಎನ್‌ಸಿಸಿ ಕೆಡೆಟ್ ಗಳ ಕಾರ್ಯಕ್ರಮ ಶೈಲಿ ಬದಲಾಯಿಸಿ ಹೊಸ ಪರಿವರ್ತನೆಗೆ ರಕ್ಷಣಾ ಮಂತ್ರಿಗಳ ಅನುಮತಿ ಕೇಳಿದ್ದೇವೆ. 50 ಸಾವಿರಕ್ಕೂ ಹೆಚ್ಚುಕೆಡಟ್ ಗಳಿಗೆ ರಾಜ್ಯದಿಂದ ಮಿಲಿಟ್ರಿ ಸಮಾನವಾದ ಶಿಕ್ಷಣ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Related posts

ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ‘ಜಾಗೃತಿ ಅರಿವು’ ಕಾರ್ಯಕ್ರಮ, ಮಾದಕ ವ್ಯಸನ,ಸೈಬರ್ ಅಪರಾಧ ಮತ್ತು ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ ಸುಳ್ಯ ಪೊಲೀಸ್ ಸಬ್ ಇನ್ಸ್‌ ಪೆಕ್ಟರ್

ಗುಜರಾತ್ ಚುನಾವಣೆ ಫಲಿತಾಂಶ: ಕ್ರಿಕೆಟರ್ ಜಡೇಜಾ ಪತ್ನಿ ಸಿಕ್ಸರ್..!

ಪತ್ರಕರ್ತ ಹೇಮಂತ್ ಸಂಪಾಜೆಗೆ ‘ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ’ ರಾಜ್ಯ ಪ್ರಶಸ್ತಿ