ವಿಡಿಯೋ

ಉದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿದ ಮತ್ತೊಂದು ವಿಡಿಯೋ ವೈರಲ್ ಭಾರತದ 51 ನದಿ ಹೆಸರಿರುವ ಅದ್ಭುತ ಮ್ಯೂಸಿಕ್ ವಿಡಿಯೋ

ನ್ಯೂಸ್ ನಾಟೌಟ್ : ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತ ದೇಶ ಹಲವು ವಿಶೇಷತೆಗಳನ್ನೊಳಗೊಂಡಿದೆ. ಇಲ್ಲಿ ನ ನೆಲ,ಜನ,ಜನ,ಸಂಸ್ಕೃತಿಗೆ ವಿದೇಶಿಗರು ಮಾರುಹೋಗುತ್ತಿದ್ದಾರೆ.ಇದೀಗ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಗಣ್ಯ ಉದ್ಯಮಿಗಳಲ್ಲೊಬ್ಬರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟ್ಟರ್ ಖಾತೆ ಮೂಲಕ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹೌದು,ಭಾರತದ 51 ನದಿಗಳ ಕುರಿತು ಮಾಹಿತಿಯನ್ನು ಹೊಂದಿರುವ ಮ್ಯೂಸಿಕ್ ವಿಡಿಯೋವೊಂದನ್ನು ಷೇರ್ ಮಾಡಿದ್ದು, ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಇದು ಸಾವಿರಾರು ಷೇರ್, ಕಮೆಂಟ್ಸ್ ಮತ್ತು ಲೈಕ್ಸ್ ಪಡೆದುಕೊಳ್ಳುತ್ತಿದೆ.ಟ್ವಿಟರ್‌ನಲ್ಲಿ ಸುಮಾರು ಒಂದೂ ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿರುವ ಆನಂದ್ ಮಹೀಂದ್ರಾ ಅವರು, ನೀರನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತದ ನದಿಗಳನ್ನು ಆಧರಿಸಿದ ಸಂಗೀತ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ‘ರಿವರ್ಸ್ ಆಫ್ ಇಂಡಿಯಾ’ ಶೀರ್ಷಿಕೆಯ ಹಾಡಿನಲ್ಲಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ ಭಾರತದಾದ್ಯಂತದ 51 ನದಿಗಳ ಹೆಸರುಗಳನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಸಂಗೀತವನ್ನು ಆಲಿಸುವಾಗಲೇ ನಮಗರಿವಿಲ್ಲದ ಹಾಗೆ ಮೈ ಮರೆತುಹೋಗುತ್ತೇವೆ.ಅಂದ ಹಾಗೆ ಈ ಹಾಡು ಅಮೂಲ್ಯ ಜಲ ಸಂಪನ್ಮೂಲದ ಬಗ್ಗೆ ಜಾಗೃತಿ ಮೂಡಿಸಲು ರಚಿಸಲಾಗಿದ್ದು,ಝುಳು ಝುಳು ಹರಿಯುವ ನೀರಿನ ನಿನಾದ ಹಾಗೂ ಅದಕ್ಕೆ ಸರಿಹೊಂದುವಂತಹ ಸಂಗೀತ ಕಿವಿಗೆ ಮುದ ನೀಡುತ್ತದೆ. ಬಾಂಬೆ ಜಯಶ್ರೀ (ಮತ್ತು ಅವರ ಮಗ ಅಮೃತ್) ಕೌಶಿಕಿ ಚಕ್ರವರ್ತಿ (ಮತ್ತು ಅವರ ಮಗ ರಿಷಿತ್) ಮತ್ತು ಇತರ ಅನೇಕರನ್ನು ಒಳಗೊಂಡ ಜಾಗತಿಕ ಸಹಯೋಗವನ್ನು ಇದು ಹೊಂದಿದೆ. ನದಿಯಂತೆ ಸಂಗೀತವು ನಿಮ್ಮ ಮೂಲಕ ಹರಿಯಲಿ, ಆನಂದಿಸಿ” ಎಂದು ಮಹೀಂದ್ರಾ ಹಂಚಿಕೊಂಡ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಮ್ಯೂಸಿಕ್ ವಿಡಿಯೋವನ್ನು 2021ರಲ್ಲಿ ರಚಿಸಲಾಗಿದೆ. ಮದ್ರಾಸ್ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯು ಈ ವಿಡಿಯೋವನ್ನು ಈ ಮೊದಲು ಷೇರ್ ಮಾಡಿತ್ತು. ಈಗ ಮಹೀಂದ್ರಾ ಅವರು ಈ ವಿಡಿಯೋ ಹಂಚಿಕೊಂಡಿದ್ದು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

Related posts

ಜಾನುವಾರುಗಳ ಮಾಂಸ, ಚರ್ಮ, ಎಲುಬು ಕೊಠಡಿಯೊಳಗೆ ಪತ್ತೆ..! 11 ಮನೆಗಳನ್ನು ಧ್ವಂಸಗೊಳಿಸಿದ ಅಧಿಕಾರಿಗಳು..! ಇಲ್ಲಿದೆ ವಿಡಿಯೋ

ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ ಮುತ್ತು ಕೊಡಲು ಯತ್ನಿಸಿದ ಮಹಿಳೆ..! ತಡೆದ ಭದ್ರತಾ ಸಿಬ್ಬಂದಿ..! ಇಲ್ಲಿದೆ ವೈರಲ್ ವಿಡಿಯೋ

‘ಜೇಂಟ್‌ ವೀಲ್ಹ್‌’ ನಲ್ಲಿ ಕುಳಿತು ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು..! ಇಲ್ಲಿದೆ ವೈರಲ್ ವಿಡಿಯೋ