ದೇಶ-ಪ್ರಪಂಚ

ಪಿಯುಸಿ ಫೇಲ್ ಆಗಿ ಟೆಂಪೋ ಓಡಿಸಲಾರಂಭಿಸಿದ ಯುವಕನೀಗ ಐಪಿಎಸ್ ಆಫೀಸರ್..!,ಈ ಯುವಕನ ಸ್ಪೂರ್ತಿದಾಯಕ ಕಥೆ ಕೇಳಿದ್ರೆ ನಿಮ್ಗೂ ಆಶ್ಚರ್ಯವಾಗುತ್ತೆ..

ನ್ಯೂಸ್ ನಾಟೌಟ್ :ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಂದು ತಿರುವುಗಳು ಕಾಣಿಸಿಕೊಳ್ಳುತ್ತವೆ. ಇಂದು ಕಷ್ಟ ಅನುಭವಿಸುತ್ತಿರುವ ಮನುಷ್ಯ ನಾಳೆ ದಿನ ಆ ಕಷ್ಟ ಮಾಯವಾಗಿ ನೆಮ್ಮದಿಯ ಜೀವನ ನಡೆಸಬಹುದು.ಇನ್ನೊಂದೆಡೆ ತಾನು ಏನಾದರೂ ಸಾಧಿಸಬೇಕೆಂದು ಹಠಕ್ಕೆ ಬಿದ್ರೆ ಆತನ ಬದುಕು ಬಂಗಾರವಾಗುವುದರಲ್ಲಿ ಅನುಮಾನನೇ ಇಲ್ಲ ಅನ್ನೊದಕ್ಕೆ ಈ ಯುವಕನೇ ನಿದರ್ಶನ.

ಹೌದು , ಮಧ್ಯಪ್ರದೇಶದ ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಶರ್ಮಾ ಅವರೇ ಇದ್ದಾರೆ. ಪಿಯುಸಿ ಫೇಲ್‌ ಆಗಿ, ಟೆಂಪೋ ಓಡಿಸಿ, ಕೊನೆಗೆ ಹಠದಿಂದ ಓದಿ ಈಗ ಯುಪಿಎಸ್‌ಸಿಯಲ್ಲಿ  ತೇರ್ಗಡೆ ಹೊಂದಿದ್ದಾರೆ. ಆ ಮೂಲಕ ಪ್ರತಿಯೊಬ್ಬರಿಗೂ ಮಾದರಿ ಎನಿಸಿದ್ದಾರೆ.

ಪಿಯುಸಿಯಲ್ಲಿ ಫೇಲಾದ ಅವರು ಮುಂದೆ ಏನ್ಮಾಡೋದು ಎಂದು ಯೋಚಿಸಿ ಅನಿವಾರ್ಯ ಕಾರಣಗಳಿಂದ ಗ್ವಾಲಿಯರ್‌ನಲ್ಲಿ ಟೆಂಪೋ ಓಡಿಸಬೇಕಾಯಿತು. ಕುಟುಂಬದ ಹಣಕಾಸು ಬಿಕ್ಕಟ್ಟು ನಿವಾರಿಸಲು ಅವರು ದೆಹಲಿ ಲೈಬ್ರರಿಯಲ್ಲಿ ಗುಮಾಸ್ತನಾಗಿಯೂ ಕೆಲಸ ಮಾಡಿದ್ದಾರೆ.

ಹೀಗೆ ಲೈಬ್ರೇರಿಯಲ್ಲಿ ಕೆಲಸ ಸಿಕ್ಕ ಬಳಿಕ ಒಳ್ಳೆಯ ಹವ್ಯಾಸ ಇವರನ್ನು ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿತು. ಓದಬೇಕು, ದೊಡ್ಡ ಅಧಿಕಾರಿಯಾಗಬೇಕು ಎಂಬ ಛಲ ಇದ್ದರೂ ಹಣಕಾಸು ಬಿಕ್ಕಟ್ಟಿನಿಂದಾಗಿ ಏನೂ ಮಾಡಲಾಗದೇ ದೆಹಲಿಯಲ್ಲಿ ಗ್ರಂಥಾಲಯವೊಂದರ ಗುಮಾಸ್ತರಾಗಿ ಮುಂದುವರಿದರು. ಹೀಗೆ, ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಲೇ ಪುಸ್ತಕಗಳ್ನು ಓದುವ ಹವ್ಯಾಸ ಬೆಳೆಸಿಕೊಂಡರು.ಮುಂದಕ್ಕೆ ಇದೆ ಅವರ ಬದುಕಿಗೆ ತಿರುವು ತಂದು ಕೊಟ್ಟಿತು.

ಶರ್ಮಾ ಅವರು ಸಾಧಕರ ಜೀವನ ಚರಿತ್ರೆಯನ್ನು ಓದುವುದಕ್ಕೆ ಶುರು ಮಾಡಿದರು. ಕಷ್ಟಪಟ್ಟು ಸಾಧನೆ ಮಾಡಿರುವ ಗಣ್ಯರ ಜೀವನ ಚರಿತ್ರೆ ಓದಿದರು. ಇದು ಅವರು ಏಳಿಗೆಯತ್ತ ಮುಖ ಮಾಡಲು ಕಾರಣವಾಯಿತು. ಅಲ್ಲಿಂದ ಕಷ್ಟಪಟ್ಟು ಓದಿದ ಮನೋಜ್‌ ಕುಮಾರ್‌ ಶರ್ಮಾ, ಮೂರು ಬಾರಿ ಪ್ರಯತ್ನಪಟ್ಟರೂ ಯುಪಿಎಸ್‌ಸಿಯಲ್ಲಿ ತೇರ್ಗಡೆ ಹೊಂದಿಲ್ಲ.

ಆದರೂ ಮರಳಿ ಪ್ರಯತ್ನವ ಮಾಡು ಎಂಬಂತೆ ಮತ್ತೆ ನಾಲ್ಕನೇ ಬಾರಿ ಅವರು ಯುಪಿಎಸ್‌ಸಿಯಲ್ಲಿ 121ನೇ ರ‍್ಯಾಂಕ್‌ ಗಳಿಸಿದರು.ಕೊನೆಗೂ ಅವರ ನೆನೆದ ಹಾಗೆ ಕೆಲಸವೂ ಸಿಕ್ಕಿತು. ಸದ್ಯ ಅವರು ಮುಂಬೈ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಂದ ಸಿಂಗಂ ಎಂಬ ಖ್ಯಾತಿಯನ್ನೂ ಗಳಿಸಿದ್ದಾರೆ.

Related posts

ನಡೆದುಕೊಂಡು ಹೋಗುತ್ತಿದ್ದ ವೃದ್ಧೆ ಮೇಲೆಯೇ ಬಸ್​​ ಹತ್ತಿಸಿದ ಡ್ರೈವರ್..!ಮುಂದೇನಾಯ್ತು?

2014ರಲ್ಲಿ ಎಂಜಿನಿಯರ್‌ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿದ್ದ ಯುವತಿ..! ಇಂದು(ಜೂ.27) ತೀರ್ಪು ಪ್ರಕಟಿಸಿದ ಕೋರ್ಟ್..! ದೂರು ನೀಡಿದಾಕೆ ಸೇರಿ 13 ಮಂದಿಯ ಜೈಲುಪಾಲು..!

ರೈಲ್ವೆ ಹಳಿ ಮೇಲೆ ಅಡುಗೆ,ಮಕ್ಕಳಿಗೆ ಪಾಠ,ಬಟ್ಟೆಯನ್ನೂ ಒಣಗಿಸಿದ ಜನ,..! ಬೆಚ್ಚಿ ಬೀಳಿಸುವಂತೆ ಮಾಡುವ ವಿಡಿಯೋ ವೈರಲ್..ಅಧಿಕಾರಿಗಳು ಹೇಳಿದ್ದೇನು?