ದೇಶ-ಪ್ರಪಂಚಬೆಂಗಳೂರುರಾಜಕೀಯವೈರಲ್ ನ್ಯೂಸ್

ರಕ್ಷಣೆ ನೀಡುವಂತೆ ಮೋದಿಗೆ ಪತ್ರ ಬರೆದ ಮುಡಾ ದೂರುದಾರ..! ಗನ್ ಮ್ಯಾನ್ ನೀಡುವಂತೆ ಪೊಲೀಸ್​ ಆಯುಕ್ತರಿಗೆ ಕೇಳಿದ್ದೆ ಎಂದ ಸ್ನೇಹಮಯಿ ಕೃಷ್ಣ ..!

ನ್ಯೂಸ್ ನಾಟೌಟ್ : ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮುಡಾ ಹಗರಣದ (Muda Scam) ದೂರುದಾರ ಸ್ನೇಹಮಯಿ ಕೃಷ್ಣ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಕುರಿತು ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ, ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ನೀಡುವಂತೆ ಮೈಸೂರು ಪೊಲೀಸ್​ ಆಯುಕ್ತರಿಗೆ ಮನವಿ ಮಾಡಿದ್ದೆ. ಗನ್ ಮ್ಯಾನ್ ನೀಡುವಂತೆ ಕೇಳಿದ್ದೆ. ಆದರೆ, ಯಾವ ಭದ್ರತೆಯನ್ನು ನೀಡಿಲ್ಲ ಎಂದು ಸ್ನೇಹಮಯಿ ಕೃಷ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗೆ ಮತ್ತು ತಮ್ಮ ಕುಟುಂಬಕ್ಕೆ ರಕ್ಷಣೆ ಕೋರಿ ಪತ್ರದ ಮೂಲಕ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಿದ್ದಾರೆ .

“ನನ್ನ ಮತ್ತು ನನ್ನ ಕುಟುಂಬದ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಗಂಭೀರ ಕಾಳಜಿಯಿಂದ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ. ನಮಗೆ ಅಗತ್ಯ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದರೂ, ನಮಗೆ ಯಾವುದೇ ಸಹಾಯವನ್ನು ನಿರಾಕರಿಸಲಾಗಿದೆ. ಮತ್ತು ಈಗ ನಮ್ಮ ಜೀವವು ಅಪಾಯದಲ್ಲಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಡಿಯಲ್ಲಿರುವ 14 ನಿವೇಶನಗಳನ್ನು ಕರ್ನಾಟಕದ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ ಇತರ ರಾಜಕೀಯ ಮುಖಂಡರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಅಕ್ರಮವಾಗಿ ಹಂಚಿಕೆ ಮಾಡಿರುವ ಬಗ್ಗೆ ನಾನು ದೂರು ದಾಖಲಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲು ಪ್ರಯತ್ನಿಸಿದರೂ ಅವರು ಕ್ರಮ ಕೈಗೊಳ್ಳಲು ನಿರಾಕರಿಸಿದರು. ಇದರಿಂದ ನಾನು ನ್ಯಾಯಾಲಯದ ಮೊರೆ ಹೋಗಿ ಖಾಸಗಿ ದೂರು ದಾಖಲಿಸಿದೆ.

ನನ್ನ ದೂರು ಮತ್ತು ಪೂರಕ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆಗೆ ಸೂಚಿಸಿದೆ. ಇದರ ನಂತರ, ಪ್ರಕರಣದಲ್ಲಿ ಎಫ್‌ಐಆರ್ (ಸಂ. 11/2024) ದಾಖಲಾಗಿದ್ದು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರೋಪಿ 1 ಎಂದು ಹೆಸರಿಸಲಾಗಿದೆ ಎಂದು ಇನ್ನೂ ಹಲವು ಮಾಹಿತಿಗಳ ಜೊತೆಗೆ ದೀರ್ಘ ಪತ್ರ ಬರೆದಿದ್ದಾರೆ.

Click

https://newsnotout.com/2024/12/kannada-news-dr-manamohan-singh-nomore-venugopal-announcement/
https://newsnotout.com/2024/12/uppinangady-sweets-shop-belthangady-kananda-news-puttur/
https://newsnotout.com/2024/12/kannada-news-arrest-issue-nomore-couple-d/
https://newsnotout.com/2024/12/nandhini-kananda-news-milk-rate-hike-kmf-v/
https://newsnotout.com/2024/12/annamalai-kananda-news-protest-issue-viral-news-bjp/

Related posts

ಗೀಸರ್ ನಲ್ಲಿ ರಹಸ್ಯ ಕ್ಯಾಮೆರಾ ಇಟ್ಟು ವಿಡಿಯೋ ತೋರಿಸಿ ಮಹಿಳೆಗೆ ಬೆದರಿಕೆ..! ಇಲ್ಲಿದೆ ವಿಡಿಯೋ

ರಾಹುಲ್‌ ಗಾಂಧಿ ವೇದಿಕೆಯ ಫ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿಯ ಫೋಟೋ, ಯಾರ ವಿರುದ್ಧವಾಗಿ ಪ್ರಚಾರ ಮಾಡಬೇಕಿತ್ತೋ ಅವರ ಫೋಟೋ ಕಾಂಗ್ರೆಸ್ ಫ್ಲೆಕ್ಸ್‌ನಲ್ಲಿ..!

ವಿದ್ಯಾರ್ಥಿನಿ ಆತ್ಮಹತ್ಯೆಯ ರಹಸ್ಯ ಬಯಲು..! ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದೇನು..?