Uncategorized

ಗ್ರಾಮ ದೇವತೆ ದೇವಸ್ಥಾನ ಧ್ವಂಸ, ಲೇಡಿ ತಹಶೀಲ್ದಾರ್ ಎತ್ತಂಗಡಿ

ನಂಜನಗೂಡು: ಊರಿನ ಜನರ ನಂಬಿಕೆಯಾಗಿದ್ದ ಗ್ರಾಮ ದೇವತೆ ದೇವಸ್ಥಾನವನ್ನು ಊರಿನವರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಧ್ವಂಸ ಮಾಡಿಸಿದ ನಂಜನಗೂಡು ತಹಶೀಲ್ದಾರ್ ಮೋಹನಕುಮಾರಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ತಾಲ್ಲೂಕಿನ ಉಚ್ಚಗಣಿ ಗ್ರಾಮಸ್ಥರು ಬಹಳ ವರ್ಷಗಳಿಂದ ತಮ್ಮ ಭಕ್ತಿ ನಂಬಿಕೆಗಳಿಂದ ಗ್ರಾಮದೇವತೆ ಮಹದೇವಮ್ಮಳನ್ನು ನಂಬಿಕೊಂಡು ಬಂದಿದ್ದರು. ಹಲವಾರು ದೇವಸ್ಥಾನಗಳನ್ನು ಕೆಡವಿ ರಾಜ್ಯ ಸರಕಾರ ಇಕ್ಕಟ್ಟಿಗೆ ಸಿಲುಕಿದ ನಡುವೆಯೇ ಈ ದೇವಸ್ಥಾನವನ್ನು ತಹಶೀಲ್ದಾರ್ ಊರಿನವರ ವಿರೋಧದ ನಡುವೆಯೂ ತಮ್ಮದೇ ಸ್ಟೈಲ್ ನಲ್ಲಿ ಕೆಡವಿಸಿದ್ದರು ಎನ್ನಲಾಗಿದೆ. ಇದು ಆಡಳಿತ ಪಕ್ಷಕ್ಕೆ ಮುಜುಗರ ತಂದಿದ್ದು ತಕ್ಷಣ ಆಕೆಯನ್ನು ವರ್ಗಾವಣೆ ಮಾಡುವಂತೆ ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಸೋಮವಾರ ವರ್ಗಾವಣೆ ಮಾಡಿ ಆದೇಶ ಹೊರಡಿಸುವ ಮೂಲಕ ಜನರ ಆಕ್ರೋಶವನ್ನು ತಹಬದಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

Related posts

ಅಯೋಧ್ಯೆಯ ಸೀತಾಮಾತೆಗೆ ಸ್ಪೆಷಲ್ ಸೀರೆ..!ಸೂರತ್‌ನಲ್ಲಿ ಸಿದ್ಧಗೊಂಡ ಈ ಸೀರೆಯ ವಿಶೇಷತೆಗಳೇನು?

ಎಂ.ಎಸ್‌.ಧೋನಿಗೆ ಅಂಬರೀಷ್ ಎರಡು ಲಕ್ಷ ನೀಡಿದ್ದರು: ಸುಮಲತಾ ಅಂಬರೀಷ್ ಟ್ವಿಟ್ ವೈರಲ್

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಮುರುಘಾ ಶ್ರೀಗಳ ಬಂಧನ