Uncategorized

ನಮಾಜ್ ಮಾಡುವುದು ಬಲ ಪ್ರದರ್ಶನ ಆಗಬಾರದು: ಹರಿಯಾಣ ಸಿಎಂ

ನವದೆಹಲಿ: ನಮಾಜ್ ಮಾಡುವುದು ಬಲ ಪ್ರದರ್ಶನ ಆಗಬಾರದು ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಪಟೌದಿಯಲ್ಲಿ ಕ್ರಿಸ್ ಮಸ್ ಆಚರಣೆಗೆ ಅಡ್ಡಿ ಪಡಿಸಿರುವುದು ದುರದೃಷ್ಟಕರ ಘಟನೆ ಎಂದಿದ್ದಾರೆ. ಗುರುಗ್ರಾಮದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲೀಮರು ನಮಾಜ್ ಮಾಡುವುದಕ್ಕೆ ಹಿಂದೂ ಸಂಘಟನೆಗಳು ಅಡ್ಡಿ ಪಡಿಸಿರುವುದು ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಖಟ್ಟರ್ ಅವರು ಈ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ಮಾಡುವುದು ಸರಿಯಾದುದಲ್ಲ. ನಮಾಜ್ ಮಾಡುವುದು ನಮಾಜ್ ಆಗಿ ಇರಬೇಕೆ ಹೊರತು ಬಲ ಪ್ರದರ್ಶನದಂತೆ ಆಗಬಾರದು ಎಂದು ಖಟ್ಟರ್ ಹೇಳಿದ್ದಾರೆ. ಎಲ್ಲ ಜನರೂ ಪೂಜೆ ಸಲ್ಲಿಸಲು ಮತ್ತು ಪ್ರಾರ್ಥನೆ ಮಾಡಲು ಸ್ವತಂತ್ರರು, ಆದರೆ ಅದು ನಿರ್ದಿಷ್ಟ ಸ್ಥಳದಲ್ಲಿ ನಡೆಯಬೇಕು. ಆ ಬಗ್ಗೆ ಯಾವುದೇ ತಾರತಮ್ಯತೆ ಎದುರಾದರೆ ಬೇರೆ ಧರ್ಮಗಳಲ್ಲಿ ನಂಬಿಕೆ ಇಟ್ಟಿರುವ ಜನರು ಸ್ಥಳೀಯ ಆಡಳಿತವನ್ನು ಮಧ್ಯ ಪ್ರವೇಶಿಸುವಂತೆ ಕೋರಬಹುದು ಎಂದು ವಿವರಿಸಿದ್ದಾರೆ.

Related posts

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ

ಪೊಲೀಸ್‌ ಠಾಣೆ ಎದುರೇ ಡಿಜೆ ಸಾಂಗ್, ಪ್ರಶ್ನಿಸಿದ ಬೆಂಗಳೂರು ಪೊಲೀಸರ ಮೇಲೆಯೇ ಆಫ್ರಿಕನ್‌ ಪ್ರಜೆಗಳ ದಾಳಿ..!

ಗರ್ಭಿಣಿ ಶ್ವಾನಕ್ಕೆ ಸೀಮಂತ, ಫೋಟೋ ವೈರಲ್