ಬೆಂಗಳೂರು: ವಿದೇಶದಿಂದ ಬಂದು ಬೆಂಗಳೂರಿನಲ್ಲಿ ವಾಸವಾಗಿರುವ ಆಫ್ರಿಕನ್ ಪ್ರಜೆಗಳ ಅಟ್ಟಹಾಸ ಮಿತಿ ಮೀರಿದೆ. ಮಂಗಳವಾರ ಉದ್ಯಾನನಗರಿಯ ಜೆಸಿ ನಗರದಲ್ಲಿ ಆಫ್ರಿಕನ್ ಪ್ರಜೆಗಳು ಪೊಲೀಸ್ ಠಾಣೆಯ ಎದುರು ಕಾರು ನಿಲ್ಲಿಸಿ ಡಿಜೆ ಸಾಂಗ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಕಾರಿನಲ್ಲೇ ಡ್ರಿಂಕ್ಸ್ ಮಾಡಿದಲ್ಲದೆ ಪೊಲೀಸರನ್ನೇ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ವೇಳೆ ಡಿಸಿಪಿ ಹಾಗೂ ಸಿಬ್ಬಂದಿ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ ಅದಕ್ಕೂ ಡೋಂಟ್ ಕೇರ್ ಎನ್ನದ ಆಫ್ರಿಕನ್ ಪ್ರಜೆಗಳು ತಮ್ಮ ಪುಂಡಾಟಿಕೆ ಮುಂದುವರಿಸಿದ್ದಾರೆ. ಠಾಣೆಯ ಎದುರು ಅಶ್ಲೀಲ ಬಟ್ಟೆಗಳನ್ನು ಹಾಕಿಕೊಂಡು ದುರ್ವರ್ತನೆ ಮಾಡಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡ ಜೆಸಿ ನಗರದ ಪೊಲೀಸರು ಭರ್ಜರಿಯಾಗಿ ಲಾಠಿ ರುಚಿ ತೋರಿಸಿದ್ದಾರೆ. ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಆಫ್ರಿಕನ್ ಪ್ರಜೆಗಳಿಗೆ ಬಾರಿಸಿದ್ದಾರೆ. ಇದೇ ವೇಳೆ ಹೈಡ್ರಾಮಾ ಮಾಡಿದ ಆಫ್ರಿಕನ್ ಪ್ರಜೆಗಳು ಪೊಲೀಸರೇ ನಮಗೆ ಹೊಡೆದಿದ್ದಾರೆ ಎಂದು ದೂರಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಒಟ್ಟು ಐದು ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.