ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಚಂದ್ರನ ಮೇಲೆ ಮತ್ತೊಮ್ಮೆ ಕಾಲಿಡುವ ಮುಂಚೆ ಭರ್ಜರಿ ತಯಾರಿ..! ನಾಸಾ ಮರುಭೂಮಿಯಲ್ಲಿ ಗಗನಯಾತ್ರಿಗಳಿಗೆ ತರಬೇತಿ ನೀಡುತ್ತಿರುವುದೇಕೆ..?

ನ್ಯೂಸ್ ನಾಟೌಟ್: ನಾಸಾ ಈಗ ಮತ್ತೆ ಚಂದ್ರನ ಮೇಲೆ ಮಾನವರ ಕಳುಹಿಸುವ ಯೋಜನೆಗೆ ಮುಂದಾಗಿದೆ. ಚಂದ್ರನ ಮೇಲೆ 2ನೇ ಬಾರಿಗೆ ಮಾನವರ ಕಳುಹಿಸಲು ನಾಸಾ ಮೂನ್ ಮಿಷನ್ ಆರ್ಟೆಮಿಸ್ 3 ಯೋಜನೆ ರೂಪಿಸಿದೆ. ಈ ಯೋಜನೆಗಾಗಿ ಒಂದು ವರ್ಷ ಮೊದಲೇ ಗಗನಯಾತ್ರಿಗಳಿಗೆ ತರಬೇತಿ ನೀಡುತ್ತಿದೆ. ಚಂದ್ರನ ಮೇಲೆ ತನ್ನ ಗಗನಯಾತ್ರಿಗಳು ಏನು ಮಾಡಬೇಕು ಎಂಬುದನ್ನು ತಿಳಿಸಿದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ತನ್ನ ಗಗನಯಾತ್ರಿಗಳು ಮೂನ್‌ವಾಕ್ ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಆದರೆ ಮರುಭೂಮಿಯಲ್ಲಿ ಗಗನಯಾತ್ರಿಗಳಿಗೆ ಅಭ್ಯಾಸ ನೀಡಲಾಗುತ್ತಿದೆ. ಚಂದ್ರನ ಮೇಲೆ ಯಾವ ರೀತಿಯ ಅನುಭವ ನೀಡಲಿದೆ ಎಂಬುದನ್ನು ಮರುಭೂಮಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಈ ರೀತಿಯ ತರಬೇತಿ ಅವರಿಗೆ ಚಂದ್ರನ ಮೇಲೆ ಇಳಿದಾಗ ಎದುರಾಗುವ ಸಮಸ್ಯೆಗಳಿಂದ ದೂರ ಇಡಲಿದೆಯಂತೆ. ಜೊತೆಗೆ ಚಂದ್ರನ ಮೇಲೆ ಯಾವ ರೀತಿಯ ಕಾರ್ಯಗಳನ್ನು ಮಾಡಬೇಕು. ಅಲ್ಲಿನ ಪರಿಸರ ಹೇಗಿರಲಿದೆ. ಅಷ್ಟು ತೂಕನ ಸೂಟ್ ಧರಿಸಿ ಚಂದ್ರನ ಮೇಲೆ ಇಳಿದಾಗ ಉಂಟಾಗುವ ಒತ್ತವನ್ನು ನಿಭಾಯಿಸಲು ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ.

ಅರಿಜೋನಾ ಮರುಭೂಮಿಯು ಚಾಲೆಂಜಿಂಗ್ ಭೂಪ್ರದೇಶವಾಗಗಿದೆ. ಆಸಕ್ತಿದಾಯಕ ಭೂವಿಜ್ಞಾನ ಮತ್ತು ಕನಿಷ್ಠ ಸಂವಹನ ಮೂಲಸೌಕರ್ಯ ಸೇರಿದಂತೆ ಚಂದ್ರನ ಪರಿಸರಕ್ಕೆ ಹೋಲುವ ಅನೇಕ ಗುಣಲಕ್ಷಣಗಳನ್ನು ಹೊಂದಿದೆ, ಇವೆಲ್ಲವೂ ಗಗನಯಾತ್ರಿಗಳು ಆರ್ಟೆಮಿಸ್ ಕಾರ್ಯಾಚರಣೆಯ ಸಮಯದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಅನುಭವಿಸುತ್ತಾರೆ. ಹೀಗಾಗಿ ತರಬೇತಿಗೆ ಇದೇ ಮರುಭೂಮಿ ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

Click 👇

https://newsnotout.com/2024/05/election-and-re-voting-misleading
https://newsnotout.com/2024/05/narendra-modi-and-teacher-rajak
https://newsnotout.com/2024/05/30-year-old-jyoti-amge-viral-video

Related posts

ಕುರ್ತಾ, ಪೈಜಾಮಾದಲ್ಲಿ ಇರುತ್ತಿದ್ದ ನರೇಂದ್ರ ಮೋದಿ ಪಂಚೆಯಲ್ಲಿ ಮಿಂಚಿದ್ದೇಕೆ..? ಇಲ್ಲಿದೆ ವೈರಲ್‌ ವಿಡಿಯೋ

ನದಿಯಲ್ಲಿ ಸ್ಫೋಟಕ ಬಳಸಿ ಮೀನುಗಾರಿಕೆ..! ಸಿಡಿಮದ್ದಿನ ಸ್ಫೋಟಕ್ಕೆ ಜಲಚರಗಳ ಮಾರಣ ಹೋಮ

ಇಂದೋರ್‌ ದೇಗುಲದಲ್ಲಿ ದುರ್ಘಟನೆ, 13 ಮಂದಿ ಬಲಿ