ವೈರಲ್ ನ್ಯೂಸ್ಸಾಧಕರ ವೇದಿಕೆ

ಅಯೋಧ್ಯೆಗೆ ಕರ್ನಾಟಕದ ರಾಮನೇ ಫೈನಲ್, ಮತದಾನದ ಮೂಲಕ ವಿಗ್ರಹದ ಆಯ್ಕೆ

ನ್ಯೂಸ್ ನಾಟೌಟ್: ಅಯೋಧ್ಯೆ ರಾಮಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಕೋಟ್ಯಾಂತರ ಹಿಂದೂಗಳ (Hindus) ಕನಸಾಗುವ ದಿನ ಹತ್ತಿರ ಬಂದಿದೆ. ಈ ವೇಳೆ ರಾಮಮಂದಿರದಲ್ಲಿ (Ram Mandir) ಜನವರಿ 22ರಂದು ರಾಮ ಲಲ್ಲಾನ (Ram Lalla Idol) ಪ್ರತಿಷ್ಠಾಪನೆಯೂ ಆಗಲಿದೆ. ಆದ್ರೆ ಇದಕ್ಕಾಗಿ ಈಗಾಗಲೇ ಮೂವರು ಶಿಲ್ಪಿಗಳು ಪ್ರತ್ಯೇಕವಾಗಿ 3 ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ.

ಇದೀಗ ಗರ್ಭಗುಡಿಯೊಳಗೆ ಇಡುವ ಬಾಲರಾಮನ ಮೂರ್ತಿ ಯಾವುದು ಎಂದು ನಿರ್ಧರಿಸಲಾಗಿದ್ದು, ಇದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೆತ್ತನೆ ಮೂರ್ತಿ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯೊಳಗೆ ಪ್ರತಿಷ್ಠಾಪನೆಯಾಗಲಿದೆ ಎಂದು ವರದಿ ತಿಳಿಸಿದೆ.

ರಾಮಜನ್ಮಭೂಮಿಯ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಟ್ರಸ್ಟ್‌ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸಭೆಯಲ್ಲಿ ಮೂರ್ತಿ ಆಯ್ಕೆಗೆ ಮತದಾನವನ್ನು ನಡೆಸಲಾಗಿತ್ತು.

ಪ್ರತ್ಯೇಕ ಶಿಲ್ಪಿಗಳಿಂದ ರಚಿಸಲಾದ ಮೂರು ವಿಭಿನ್ನ ವಿನ್ಯಾಸಗಳನ್ನು ಈ ಸಭೆಯಲ್ಲಿ ಪ್ರಸ್ತುತಪಡಿಸಲಾಗಿತ್ತು, ಪ್ರತಿಷ್ಠಾಪನಾ ಸಮಾರಂಭದ ಸಮಯದಲ್ಲಿ ಗರ್ಭಗುಡಿಯೊಳಗೆ ರಾಮ ಲಲ್ಲಾನ ವಿಗ್ರಹ ಪ್ರತಿಷ್ಠಾಪಿಸಲು ಯಾವ ವಿಗ್ರಹ ಉತ್ತಮ ಎಂದು ಇಲ್ಲಿ ನಿರ್ಧರಿಸಲಾಗಿದೆ. ಇದರಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರವರ ಕೆತ್ತನೆ ಮೂರ್ತಿ ಆಯ್ಕೆಯಾಗಿದೆ ಎನ್ನಲಾಗಿದೆ.

https://newsnotout.com/2024/01/student-and-perents-news-issue/

Related posts

‘ನನಗೆ ಮಾತ್ರವಲ್ಲ ನನ್ನೊಂದಿಗಿದ್ದ ಮೇಕೆಗೂ ಟಿಕೇಟ್ ಖರೀದಿಸಿದ್ದೇನೆ’,ವೃದ್ದೆಯ ಹೃದಯಸ್ಪರ್ಶಿ ವಿಡಿಯೋಗೆ ನೆಟ್ಟಿಗರು ಹೇಳಿದ್ದೇನು?

900 ಮೆಟ್ಟಿಲುಗಳನ್ನು ಹತ್ತಿ, ಇಳಿಯುವಾಗ 25 ವರ್ಷದ ಯುವಕ ಸಾವು..! ಮಹಾಲಕ್ಷ್ಮಿ ದೇವಿಯ ದರ್ಶನಕ್ಕೆ ತೆರಳಿದ್ದ ವೇಳೆ ಘಟನೆ..!

ಶಿವರಾಜ್ ಕುಮಾರ್ ಗೆ ಎಂಪಿ ಟಿಕೆಟ್ ಆಫರ್ ಕೊಟ್ರಾ ಡಿಕೆಶಿ..? ಮುತ್ತುರಾಜ್ ನ ಮಗ ಚುನಾವಣೆಗೆ ನಿಲ್ತಾರಾ..?