ಕ್ರೀಡೆ/ಸಿನಿಮಾ

ಮೈಸೂರು:ಮ್ಯೂಸಿಯಂನಲ್ಲಿ ಬಾಹುಬಲಿ ನಟ ಪ್ರಭಾಸ್ ಹೋಲುವ ಮೇಣದ ಪ್ರತಿಮೆ,ಈ ಪ್ರತಿಮೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದೇಕೆ?

ನ್ಯೂಸ್ ನಾಟೌಟ್ : ಟಾಲಿವುಡ್​​ ನಟ ಪ್ರಭಾಸ್ ಅಭಿನಯದ, ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಬಾಹುಬಲಿ’ ಸಿನಿಮಾ ಇಡೀ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿತು.ಈ ಮೂವಿಗೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಯಿತು.ಇದೀಗ ನೆರೆಯ ಮೈಸೂರಿನ ಮ್ಯೂಸಿಯಂನಲ್ಲಿ ನಟ ಪ್ರಭಾಸ್ ಹೋಲುವ ಮೇಣದ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ.ಆದರೆ ಈ ಕುರಿತಾಗಿ ನಿರ್ಮಾಪಕರು ಇದಕ್ಕೆ ತೀವ್ರ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಗೆ ಗೊತ್ತೆ ಇದೆ.ತೆರೆ ಮೇಲೆ ಬಂದಿರುವ ಚಿತ್ರಗಳು ಭರ್ಜರಿ ಯಶಸ್ವಿಯಾದ ಬಳಿಕ ಅಥವಾ ಕ್ರಿಕೆಟ್ ದಿಗ್ಗಜರ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಸೆಲೆಬ್ರಿಟಿಗಳ ಮೇಣದ ಪ್ರತಿಮೆಯನ್ನು ಲಂಡನ್‌ ಮೇಡಂ ಟುಸ್ಸಾಡ್‌ ಮ್ಯೂಸಿಯಂನಲ್ಲಿ ಪ್ರತಿಷ್ಠಾಪಿಸುವುದು ಸಾಮಾನ್ಯವಾಗಿದೆ.ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳೇ ಈ ಸ್ಥಾನವನ್ನು ತುಂಬುತ್ತಿದ್ದರು.ಆದರೀಗ ದಕ್ಷಿಣ ಭಾರತದ ನಟರ ಮೇಣದ ಪ್ರತಿಮೆಗಳು ಕೂಡಾ ಇವೆ ಅನ್ನೋದು ವಿಶೇಷ.

ಆದರೆ ಮೈಸೂರಿನಲ್ಲಿ ಬಾಹುಬಲಿ ಪ್ರಭಾಸ್‌ ಮೇಣದ ಪ್ರತಿಮೆ ಸ್ಥಾಪನೆ ಮಾಡಿದ್ದಕ್ಕೆ ಸ್ವತಃ ಬಾಹುಬಲಿ ಚಿತ್ರದ ನಿರ್ಮಾಪಕ ಹಾಗೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.ಅಷ್ಟಕ್ಕೂ ಆ ಆಕ್ರೋಶಕ್ಕೆ ಕಾರಣಗಳೇನು? ಎಂಬುದರ ಬಗ್ಗೆ ನೋಡೋದಾದ್ರೆ ,ಮೈಸೂರಿನ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್‌ ಮ್ಯೂಸಿಯಂನಲ್ಲಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಾಂ, ಪ್ರಧಾನಿ ನರೇಂದ್ರ ಮೋದಿ, ಕವಿ ರವೀಂದ್ರನಾಥ್‌ ಠಾಗೂರ, ಮದರ್‌ ಥೆರೇಸಾ, ವಿಜ್ಞಾನಿ ಆಲ್ಪರ್ಟ್‌ ಐನ್‌ಸ್ಟೀನ್‌, ಚಾರ್ಲಿ ಚಾಪ್ಲಿನ್‌, ಪುನೀತ್‌ ರಾಜ್‌ಕುಮಾರ್‌, ಸರ್‌.ಎಂ.ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಗಣ್ಯರ ಮೇಣದ ಪ್ರತಿಮೆ ಇದೆ.ಇದೀಗ ಬಾಹುಬಲಿ ಪ್ರಭಾಸ್‌ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಸದ್ಯ ಈ ಕುರಿತ ಪೋಸ್ಟ್‌ ಗೆ ಪರ ವಿರೋಧ ಚರ್ಚೆಗಳು ನಡಿತಿವೆ. ಈ ಪೋಸ್ಟ್‌ಗೆ ನೆಟಿಜನ್ಸ್‌ ಕಾಮೆಂಟ್‌ ಮಾಡಿ, ಇದು ಬಾಹುಬಲಿ ಪ್ರಭಾಸ್‌ ಅಲ್ಲ, ಕ್ರಿಕೆಟಿಗ ಡೇವಿಡ್‌ ವಾರ್ನರ್‌ಗೆ ಪ್ರಭಾಸ್‌ ವೇಷ ಭೂಷಣ ತೊಡಿಸಿದಂತೆ ಕ್ರಿಯೇಟ್‌ ಮಾಡಲಾಗಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಈ ಮೇಣದ ಪ್ರತಿಮೆ, ಮೆಚ್ಚುಗೆಗಿಂತ ಹೆಚ್ಚಾಗಿ ಟ್ರೋಲ್‌ ಆಗುತ್ತಿದೆ ಅನ್ನೋದು ನಿಜ.

ಈ ಬಗ್ಗೆ ಸಿನಿಮಾ ನಿರ್ಮಾಪಕ ಶೋಬು ಯರ್ಲಗಡ್ಡ ಪ್ರತಿಕ್ರಿಯಿಸಿ ಹೇಳಿದ್ದು ಹೀಗೆ ”ಇದು ಅಧಿಕೃತ ಅಲ್ಲ. ಲೈಸನ್ಸ್‌ ಪಡೆದು ಮಾಡುತ್ತಿರುವ ಕೆಲಸವಾದರೆ ಹೀಗಾಗುತ್ತಿರಲಿಲ್ಲ.ಹಾಗೇ ನಮ್ಮ ಅನುಮತಿ ಇಲ್ಲದೆ ಈ ಮೇಣದ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಇದನ್ನು ತೆರೆವುಗೊಳಿಸುವ ಸಂಬಂಧ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಅಸಮಾಧಾನ ಹೊರ ಹಾಕಿದ್ದಾರೆ.

Related posts

‘ಕಾಶ್ಮೀರ ಫೈಲ್ಸ್‌’, ‘ಕೇರಳ ಸ್ಟೋರಿ’ ಬಳಿಕ ಬರುತ್ತಿದೆ ‘ಕರಾವಳಿ ಸ್ಟೋರಿ’..! ದಕ್ಷಿಣ ಕನ್ನಡದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ಕಥೆಯುಳ್ಳ ಸಿನಿಮಾ ಶೀಘ್ರ ತೆರೆಗೆ

ನಟಿ ಲೀಲಾವತಿಯನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ..! ಹಿರಿಯ ನಟಿಯ ಆಪ್ತೆ ಕ್ಯಾನ್ಸರ್ ನಿಂದ ಬಳಲುತ್ತಿದ್ದರಾ..?

ಲೆನ್ಸ್‌ ಧರಿಸಿ ಎಡವಟ್ಟು ಮಾಡಿಕೊಂಡ ಖ್ಯಾತ ನಟಿ..! ಮುಂದೇನಾಯ್ತು..? ಇಲ್ಲಿದೆ ಸಂಪೂರ್ಣ ವಿವರ