ಕ್ರೀಡೆ/ಸಿನಿಮಾ

3000 ಕೋಟಿ ರೂ. ನುಂಗಿ ನೀರು ಕುಡಿದ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾ, ಏನಿದು ಮತ್ತೊಂದು ಪ್ರಕರಣ?

ಮುಂಬೈ :  ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಜೈಲು ಸೇರಿರುವ ಮಂಗಳೂರು ಬೆಡಗಿ ಹಾಗೂ ಬಾಲಿವುಡ್ ಖ್ಯಾತ ನಟಿ  ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಇದೀಗ 3000 ಕೋಟಿ ರು.ಗಳ ಮತ್ತೊಂದು ವಂಚನೆ ಆರೋಪ ಕೇಳಿಬಂದಿದೆ.

ರಾಜ್ ಕುಂದ್ರಾ ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿದ್ದು ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ್ ಕದಂ ಈ ಆರೋಪ ಮಾಡಿದ್ದು, ರಾಜ್ ಕುಂದ್ರಾ ಅವರ ಒಡೆತನದ ವಿಯಾನ್ ಇಂಡಸ್ಟ್ರೀಸ್ ಕಂಪನಿಯು ‘ಗೇಮ್ ಆಫ್ ಡಾಟ್’ ಎಂಬ ಆನ್ಲೈನ್ ಗೇಮ್ ಬಿಡುಗಡೆ ಮಾಡಿತ್ತು. ದೇಶಾದ್ಯಂತ ಅದರ ವಿತರಣೆಯ ಹಕ್ಕುಗಳನ್ನು ನೀಡುವುದಾಗಿ ಅನೇಕ ಡಿಸ್ಟ್ರಿಬ್ಯೂಟರ್ಗಳಿಂದ ಹಣ ಸಂಗ್ರಹಿಸಿ, ನಂತರ ವಂಚನೆ ಎಸಗಿದೆ ಎಂದು  ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಬಂದಂತಾಗಿದೆ.

ಇನ್ನು,ರಾಜ್ ಕುಂದ್ರಾ ವಿರುದ್ಧ ನಟಿ ಹಾಗೂ ಮಾಡೆಲ್ ಒಬ್ಬರು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೈಹಿಕ ಕಿರುಕುಳದ ದೂರು ನೀಡಿದ್ದರು. ಆದರೆ ನಂತರ ಆಕೆಯ ಮೇಲೆ ಮತ್ತು ಪೊಲೀಸರ ಮೇಲೆ ಒತ್ತಡ ತಂದು ಆ ದೂರಿನ ತನಿಖೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದೂ ಆರೋಪಿಸಿದ್ದಾರೆ.ಎರಡು ದಿನದ ಹಿಂದಷ್ಟೇ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಅವರು ಕುಂದ್ರಾ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಒಟ್ಟಿನಲ್ಲಿ ಈ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡ್ಕೊಳ್ತಾ ಇದೆ.‌

Related posts

Poonam Pandey:ಖ್ಯಾತ ನಟಿ ಪೂನಂ ಪಾಂಡೆ ಕ್ಯಾನ್ಸರ್​ನಿಂದ ನಿಧನ, ಕೇವಲ 32 ವರ್ಷಕ್ಕೆ ದುರಂತ ಅಂತ್ಯ!

ಕ್ರಿಕೆಟ್‌ ವಿಚಾರದಲ್ಲಿ ಭಾರತ ಹಠ ಬಿಡದಿದ್ದರೆ ನಾವೂ ಹಠ ಬಿಡಲ್ಲ,ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾ ಹೀಗೆ ಹೇಳಿದ್ಯಾಕೆ?

ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ ಎಂದದ್ದೇಕೆ? ಪೊಲೀಸರ ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?