Uncategorized

ಇಟಲಿಯ ಜಲಪಾತದಿಂದ ಜಾರಿಬಿದ್ದು ಮೈಸೂರು ಮೂಲದ ಫುಟ್ಬಾಲಿಗ ಸಾವು

ಮೈಸೂರು: ಮೈಸೂರಿನ ನಿವಾಸಿ, ಉದಯೋನ್ಮುಖ ಫುಟ್ಬಲ್ ಆಟಗಾರ 24 ವರ್ಷದ ಯಶವಂತ ಕುಮಾರ್ ಇಟಲಿಯ ರೋಮ್ ನ  ಜಲಪಾತದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಎನ್‌.ಆರ್‌.ಮೊಹಲ್ಲಾದ ಎನ್‌.ಕುಮಾರ್‌ ಮತ್ತು ಎನ್‌.ರೂಪಾ ದಂಪತಿ ಪುತ್ರರಾದ ಅವರು ಇಟಲಿಯ ‘ಸೀರಿ ಬಿ ಫುಟ್ಸಲ್  ಲೀಗ್‌’ನಲ್ಲಿ ಕ್ಯಾಲ್ಸಿಯೊ ಸಿ5 ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದದ ಮೇಲೆ 2019 ರಲ್ಲಿ ಇಟಲಿಗೆ ಹೋಗಿದ್ದರು ಕಳೆದ ಮೂರು ನಾಲ್ಕು ದಿನಗಳಿಂದ ಅವರ ಮೊಬೈಲ್‌ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆ.6 ರಂದು ತಂಡದ ಸಹ ಆಟಗಾರರಿಗೆ ಕರೆ ಮಾಡಿ ವಿಚಾರಿಸಿದಾಗ ಮೃತಪಟ್ಟ ವಿವರ ಲಭಿಸಿದೆ. ಜಲಪಾತದಲ್ಲಿ ಬಿದ್ದು ಮೃತಪಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ಶವ ದೊರಕಿರುವುದಾಗಿ ಅಲ್ಲಿನ ಪೊಲೀಸರೂ ಖಚಿತಪಡಿಸಿದ್ದಾರೆ. ಆ.31ರ ವರೆಗೆ ಅಲ್ಲಿಗೆ ವಿಮಾನ ಸೌಲಭ್ಯ ಇಲ್ಲವಾಗಿರುವುದರಿಂದ  ಅಲ್ಲಿ ರುವ ಕನ್ನಡಿಗರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Related posts

ಪತಿಯ ಗುಪ್ತಾಂಗಕ್ಕೆ ಬಿಸಿ ನೀರು ಎರಚಿದ ಪತ್ನಿ

ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಗೆ ‘ಕರ್ನಾಟಕ ಎಜ್ಯುಕೇಶನಲ್ ಅವಾರ್ಡ್-2023’,ಐ.ಆರ್.ಸಿ.ಎಂ.ಡಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಸಂಸ್ಥೆಯಾಗೋದಕ್ಕೆ ಕಾರಣವೇನು ?

ಉದ್ಯೋಕಾಂಕ್ಷಿಗಳಿಗೆ ಸಿಹಿ ಸುದ್ದಿ, 1 ಲಕ್ಷ ಖಾಲಿ ಹುದ್ದೆ , ಕೂಡಲೇ ಅರ್ಜಿ ಸಲ್ಲಿಸಿ