ಕರಾವಳಿಸುಳ್ಯ

ಸುಳ್ಯದ ಮುತ್ತು ಕೃಷಿಕನಿಗೆ ‘ಜಿಲ್ಲಾ ಪ್ರಗತಿಪರ ಕೃಷಿಕ ಪುರಸ್ಕಾರ’;ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ, ತೋಟಗಾರಿಕಾ ಕೇಂದ್ರದಿಂದ ಗೌರವ

ನ್ಯೂಸ್‌ ನಾಟೌಟ್‌: ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಮುತ್ತಿನ ಕೃಷಿಕ ನವೀನ್ ಚಾತುಬಾಯಿಯವರಿಗೆ ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಿಂದ ಜಿಲ್ಲಾ ಮಟ್ಟದ ‘ಪ್ರಗತಿಪರ ಕೃಷಿಕ ಪುರಸ್ಕಾರ’ ದೊರೆಯಿತು.

ಮಾರ್ಚ್ 6ರಂದು ಉಳ್ಳಾಲದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ-2024 ಕಾರ್ಯಕ್ರಮದಲ್ಲಿ ಜಿಲ್ಲೆಯ 5 ಜನ ಪ್ರಗತಿಪರ ಕೃಷಿಕರಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಗೇರು ನಿಗಮದ ನೂತನ ಅಧ್ಯಕ್ಷರಾದ ಮಮತಾ ಗಟ್ಟಿಯವರು ಉದ್ಘಾಟಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳು,ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನ ಕೇಂದ್ರದ ಮುಖ್ಯಸ್ಥರು,ಬ್ರಹ್ಮಾವರ ಸಂಶೋಧನಾ ಕೇಂದ್ರದ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ,ದ.ಕ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಕೃಷಿಕ ಸಮಾಜದ ಮುಖ್ಯಸ್ಥರು ಉಪಸ್ಥಿತರಿದ್ದರು.

Related posts

ಅರಂಬೂರಿನಲ್ಲಿ ಕೊಂಚ ತಗ್ಗಿದ ಪಯಸ್ವಿನಿ ನದಿ

ಸುಳ್ಯ:NMCಯಲ್ಲಿ ಇಂಟರ್ ಕ್ಲಾಸ್ ಕಾಮರ್ಸ್ ಫೆಸ್ಟ್ ‘ಉತ್ಸವ್ 2k24’,ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ ,ಬಹುಮಾನ ವಿತರಣೆ

ಗೂನಡ್ಕ: ಖಾಸಗಿ ಬಸ್- ಓಮ್ನಿ ಕಾರು ನಡುವೆ ಅಪಘಾತ, ಕಾರಿನಲ್ಲಿದ್ದವರು ಪವಾಡಸದೃಶ ಪಾರು