ದೇಶ-ವಿದೇಶವೈರಲ್ ನ್ಯೂಸ್

‘ದೇಶದಲ್ಲಿ ಕಾಂಡೋಮ್​ಗಳನ್ನು ಹೆಚ್ಚು ಬಳಸುವವರೇ ಮುಸ್ಲಿಮರು’, ಅಸಾದುದ್ದೀನ್ ಓವೈಸಿ ಮತ್ತೊಂದು ಹೇಳಿಕೆ

ನ್ಯೂಸ್ ನಾಟೌಟ್: ದೇಶದಲ್ಲಿ ಕಾಂಡೋಮ್​ ಗಳನ್ನು ಹೆಚ್ಚು ಬಳಸುವವರೇ ಮುಸ್ಲಿಮರು ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಮುಸ್ಲಿಂ ಹಾಗೂ ಹಿಂದೂ ಸಮುದಾಯದ ನಡುವೆ ದ್ವೇಷವನ್ನು ಹರಡಲು ಪ್ರಧಾನಿ ಮೋದಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಓವೈಸಿ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಹೇಳುತ್ತಾ ಭಾರತದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ ಎನ್ನುವ ಸುಳ್ಳನ್ನು ಬಿತ್ತಲು ಬಿಜೆಪಿ ಹಾಗೂ ಆರ್​ಎಸ್​ಎಸ್​ ಪ್ರಯತ್ನಿಸುತ್ತಿದೆ ಎಂದರು. ಕಾಂಗ್ರೆಸ್​ ದೇಶದ ಸಂಪತ್ತನ್ನು ಮುಸ್ಲಿಮರಿಗೆ ನೀಡಲು ಬಯಸುತ್ತಿದೆ ಹಾಗೆಯೇ ಅತಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಿಕೆ ಮಾಡುತ್ತದೆ ಎಂದು ಹೇಳಿದ್ದರು. ಭಾರತದಲ್ಲಿ ಕಾಂಡೋಮ್​ಗಳನ್ನು ಹೆಚ್ಚು ಬಳಸುತ್ತಿರುವವರೇ ಮುಸ್ಲಿಮರು, ಸರ್ಕಾರಿ ಅಂಕಿ-ಅಂಶಗಳೇ ಹೇಳುವಂತೆ ಮುಸ್ಲಿಮರ ಫಲವತ್ತತೆಯ ಪ್ರಮಾಣ ಕುಸಿದಿದೆ ಎಂದು ಹೇಳುತ್ತಿದ್ದರೆ, ಇವರು ನಾವು ಹೆಚ್ಚು ಮಕ್ಕಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

ಪ್ರಧಾನಿ ಮೋದಿ ಭಯವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿರುವ ಓವೈಸಿ 2002ರಿಂದ ಮುಸ್ಲಿಂ-ದಲಿತ ದ್ವೇಷವನ್ನು ಹರಡುತ್ತಿದ್ದಾರೆ ಎಂದರು. ಮುಸ್ಲಿಮರನ್ನು ಒಳನುಸುಳುಕೋರರು ಎಂದು ಕರೆದಿರುವ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಅವರು ಸಬ್​ಕಾ ಸಾಥ್​, ಸಬ್​ಕಾ ವಿಕಾಸ್, ಸಬ್ಕಾ ವಿಶ್ವಾಸ್ ಎಂದು ಹೇಳಿ ಎಲ್ಲರನ್ನೂ ವಂಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದೇಶದ ಸಂಪನ್ಮೂಲಗಳಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿದ್ದನ್ನು ಪ್ರಧಾನಿ ಮೋದಿ ಹೇಳಿದ್ದರು, ಪ್ರಧಾನಿ ಶೇ.15ರಷ್ಟು ಮುಸ್ಲಿಮರು ಒಳನುಸುಳುಕೋರರು ಎಂದು ಕರೆದಿದ್ದಾರೆ.

Related posts

ಕರ್ನಾಟಕ ಬಿಜೆಪಿ ಸ್ವಪಕ್ಷೀಯನಿಂದ ಮೋದಿ ವಿರುದ್ಧವೇ ಅವಹೇಳನಕಾರಿ ಮಾತು! ವೈರಲ್ ಆದ ಆಡಿಯೋದಲ್ಲಿ ಅಂತದ್ದೇನಿದೆ?

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು..! ಇಲ್ಲಿದೆ CCTV ದೃಶ್ಯ..!

ಸಾಮಾಜಿಕ ಜಾಲತಾಣಗಳ ಮೂಲಕ ಬಂದೂಕು ಮಾರಾಟ..! ಇಬ್ಬರು ಗ್ರಾಹಕರೂ ಸೇರಿ 7 ಮಂದಿಯ ಬಂಧನ..!