Uncategorized

ಹಿಂದೂ ದೇಗುಲಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ

ನ್ಯೂಸ್ ನಾಟೌಟ್: ಉತ್ತರ ಪ್ರದೇಶದಲ್ಲಿ ಹಿಂದೂ ದೇಗುಲಕ್ಕೆ ಮುಸ್ಲಿಂ ವ್ಯಕ್ತಿ ಭೂಮಿ ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ಮೂಲಕ ಹಿಂದೂ-ಮುಸ್ಲಿಮ್ ಭಾವೈಕ್ಯತೆಯನ್ನು ಸಾರಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ದೇಗುಲವನ್ನು ಸ್ಥಳಾಂತರ ಮಾಡುವುದು ಅನಿವಾರ್ಯವೆನಿಸಿದೆ. ದೇಗುಲ ಸ್ಥಳಾಂತರದ ಹಿನ್ನೆಲೆಯಲ್ಲಿ ಮುಸ್ಲಿಮ್ ವ್ಯಕ್ತಿ ತಮ್ಮ ಜಮೀನಿನ ಒಂದು ಭಾಗವನ್ನು ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

ದೆಹಲಿ-ಲಖನೌ ನಡುವೆ ಹಾದು ಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 24 ವಿಸ್ತರಣೆಯ ಯೋಜನೆಗೆ ಕಚಿಯಾನಿ ಕೇರಾ ಗ್ರಾಮದಲ್ಲಿ ದೇಗುಲ ಇರುವುದರಿಂದ ಅಡಚಣೆ ಎದುರಾಗಿತ್ತು. ಇದನ್ನು ಮನಗಂಡ ಬಾಬು ಅಲಿ, ದೇಗುಲದ ಹತ್ತಿರದಲ್ಲಿ ತಮ್ಮ ಅಧೀನತೆಯಲ್ಲಿರುವ 0.65 ಹೆಕ್ಟೇರ್ ಭೂಮಿಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ಇದರಿಂದಾಗಿ ದೇಗುಲವನ್ನು ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಮಸೇವಕ್ ದ್ವಿವೇದಿ ಹೇಳಿದ್ದಾರೆ.

Related posts

ಸುಳ್ಯ: ಬೈಕ್ ಗುದ್ದಿ ಬಾಲಕಿ ಸಾವು

ರೈಲ್ವೆ ಹಳಿ ಮೇಲೆ ಮತ್ತೆ ಭೂಕುಸಿತ..! ಬೆಂಗಳೂರು-ಮಂಗಳೂರು ರೈಲು ಸಂಚಾರ ಸ್ಥಗಿತ..!

ಸುಳ್ಯ: ಶಾಲೆ ಸಿಬ್ಬಂದಿ ಎಡವಟ್ಟು, 4ನೇ ತರಗತಿ ಬಾಲಕಿಗೆ ಎರಡು ಸಲ ಮೆದುಳು ಜ್ವರದ ಲಸಿಕೆ