ರಾಜಕೀಯ

ದೇವಸ್ಥಾನದಲ್ಲಿ ಹಿಂದೂ ಜೋಡಿಯ ಮದುವೆ ಮಾಡಿಸಿದ ಮುಸ್ಲಿಂ ಲೀಗ್, ಅದ್ದೂರಿ ವಿವಾಹ ಸಂಭ್ರಮ ಹೇಗಿತ್ತು?

ನ್ಯೂಸ್ ನಾಟೌಟ್ :ಕೇರಳದಲ್ಲಿ ಅಚ್ಚರಿಯ ವಿವಾಹವೊಂದು ನಡೆದಿದ್ದು ಸಾಮರಸ್ಯತೆಗೆ ಸಾಕ್ಷಿಯಾಗಿದೆ.ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಆಶೀರ್ವಾದದೊಂದಿಗೆ ದೇವಸ್ಥಾನದಲ್ಲಿ ಹಿಂದೂ ಜೋಡಿಯ ವಿವಾಹ ನಡೆದಿದ್ದು,ವೆಂಗಾರ ಶ್ರೀ ಅಮ್ಮಂಚೇರಿ  ಭಗವತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು.

ವಿಷ್ಣು ಮತ್ತು ಗೀತಾ ವಿವಾಹವಾಗಿರುವ ನವ ವಧು-ವರರು.ಮುಸ್ಲಿಮ್ ಲೀಗ್ ರಾಜ್ಯಾಧ್ಯಕ್ಷ ಸೈಯದ್ ಸಾದಿಕಲಿ ಶಿಹಾಬ್ ತಂಗಳ್, ಹಿರಿಯ ಮುಖಂಡ ಹಾಗೂ ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿಯವರು ಸಮಾರಂಭದಲ್ಲಿ ಪಾಲ್ಗೊಂಡು ದಂಪತಿಯನ್ನು ಆಶೀರ್ವದಿಸಿದರು.ನವ ಜೋಡಿಗಳಾದ ಗೀತಾ-ವಿಷ್ಣು ವಿವಾಹಕ್ಕೆ ಸಕಲ ವ್ಯವಸ್ಥೆಗಳನ್ನು ಉತ್ತರ ಕೇರಳ ಜಿಲ್ಲೆಯ ವೆಂಗರಾ ಪಂಚಾಯತ್‌ನ 12 ನೇ ವಾರ್ಡ್‌ನ ಮುಸ್ಲಿಂ ಯೂತ್ ಲೀಗ್ ಸಮಿತಿ ಮಾಡಿತ್ತು.ಈ ವೇಳೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದು, ಜೋಡಿಗೆ ಶುಭ ಹಾರೈಸಿದರು.

ವೆಂಗಾರ ಮಣಟ್ಟಿಪರಂಬು ಮುಸ್ಲಿಂ ಲೀಗ್ ಕಾರ್ಯಕರ್ತರು ಗೀತಾ ಅವರ ವಿವಾಹಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರು. ಸೂಪರಿಂಟೆಂಡೆಂಟ್ ಮೈತ್ರಿಯನ್ನು ಏರ್ಪಡಿಸಿ ವಿಷ್ಣು ಜತೆ ಗೀತಾಳ ಮದುವೆ ಮಾಡುವುದಕ್ಕೆ ನಿಶ್ಚಯಿಸಿದರು.ಐಯುಎಂಎಲ್‌ನ ಯುವ ವಿಭಾಗವು ಆರ್ಥಿಕ ನೆರವು ನೀಡಿತು.ಅಮ್ಮಂಚೇರಿ ಭಗವತಿ ದೇವಸ್ಥಾನದ ಪ್ರಾಂಗಣದಲ್ಲಿ  ಈ ವಿವಾಹ ಅದ್ದೂರಿಯಾಗಿ ನೆರವೇರಿತು.

ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಕೆ ಕುನ್ಹಾಲಿಕುಟ್ಟಿ, “ಇಂದು, ದೇವಾಲಯದ ಪ್ರಾಂಗಣವು ನನ್ನ ನೆಲದ ಏಕತೆ ಮತ್ತು ಸ್ನೇಹವನ್ನು ಸಾರುವ ಸುಂದರವಾದ ಚಿತ್ರಗಳಿಗೆ ಸಾಕ್ಷಿಯಾಗಿದೆ. ಇದು ಉತ್ತಮ ಸಂದೇಶವಾಗಿದೆ. ವಿಷ್ಣು ಮತ್ತು ಗೀತಾ ಅವರು ದಾಂಪತ್ಯಕ್ಕೆ ಮೊದಲ ಹೆಜ್ಜೆ ಇಡುತ್ತಿರುವುದಕ್ಕೆ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ. ಈ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.

Related posts

ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್.​ಐ.ಆರ್..! ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಮಾಹಿತಿ ಹರಡಿದ ಆರೋಪ..!

ಹಲವು ಭರವಸೆಗಳನ್ನು ಒಳಗೊಂಡ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ

ಕೊರೊನಾ ಹರಡುವ ಭೀತಿ:ಕೋವಿಡ್ ನಿಯಮ ಪಾಲಿಸಿ,ಇಲ್ಲದಿದ್ದರೆ ಯಾತ್ರೆ ನಿಲ್ಲಿಸಿ ;ರಾಹುಲ್ ಗಾಂಧಿಗೆ ಸಚಿವರ ಮನವಿ