Uncategorized

ಮುಸ್ಲಿಂ ಕುಟುಂಬದಿಂದ ಅದ್ದೂರಿ ಗಣೇಶೋತ್ಸವ ಆಚರಣೆ

ನ್ಯೂಸ್ ನಾಟೌಟ್: ಕೋಮು ಸಂಘರ್ಷದ ನಡುವೆ ಮುಸ್ಲಿಂ ಕುಟುಂಬವೊಂದು ಸಾಮರಸ್ಯವನ್ನು ಮೆರೆದಿದೆ.

ಗಣೇಶ ಹಬ್ಬದ ಹಿನ್ನೆಲೆ ಅಲಿಘರ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬರು 7 ದಿನಗಳ ಕಾಲ ಮನೆಯಲ್ಲಿ ಗಣಪತಿಯನ್ನು ಕೂರಿಸಿ ಹಬ್ಬ ಆಚರಿಸಿದ್ದಾರೆ. ರೋರವಾರ ಪೊಲೀಸ್ ವೃತ್ತದ ಎಡಿಎ ಕಾಲೋನಿ ನಿವಾಸಿ ರೂಬಿ ಆಸಿಫ್ ಖಾನ್ ಎಂಬವರು ತಮ್ಮ ಮನೆಗೆ ಗಣೇಶ ಮೂರ್ತಿಯನ್ನು ತಂದು ಸಕಲ ವಿಧಿ ವಿಧಾನಗಳೊಂದಿಗೆ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳೆ, ನೀರಿನಲ್ಲಿ ಮುಳುಗಿಸುವ ಮುನ್ನ 7 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಇಟ್ಟಿರುತ್ತೇವೆ. ನಾನು ಮತ್ತು ನನ್ನ ಕುಟುಂಬಸ್ಥರು ಪ್ರತಿದಿನ ಪೂಜೆ ಮಾಡಿ, ದೇವರಿಗೆ ಮೋದಕವನ್ನು ನೈವೇದ್ಯೆ ಮಾಡಿ ಇಡುತ್ತೇವೆ. ನನಗೆ ಗಣೇಶನ ಮೇಲೆ ಅಪಾರವಾದ ನಂಬಿಕೆ ಇದೆ. ಅಲ್ಲದೇ ಗಣೇಶ ಕೂರಿಸಲು ನನ್ನ ಮನೆಯವರು ವಿರೋಧ ವ್ಯಕ್ತಪಡಿಸಲಿಲ್ಲ. ನಾನು ಮತ್ತು ನನ್ನ ಕುಟುಂಬ ಎಲ್ಲಾ ಹಬ್ಬಗಳನ್ನು ಧರ್ಮದ ಭೇದವಿಲ್ಲದೆ ಆಚರಿಸುತ್ತೇವೆ. ನನ್ನ ಪತಿ ಆಸಿಫ್ ಖಾನ್ ಅವರು ಕೂಡ ನನ್ನ ನಂಬಿಕೆಯನ್ನು ಬೆಂಬಲಿಸುತ್ತಾರೆ ಮತ್ತು ಇಡೀ ಕುಟುಂಬ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದ್ದಾರೆ. 

Related posts

ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ, ಪ್ರೋತ್ಸಾಹಧನಕ್ಕೆ ಆನ್‍ಲೈನ್ ಅರ್ಜಿ ಆಹ್ವಾನ

ಶೀಲ ಶಂಕಿಸಿ ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ..! ಆರೋಪಿ ಪೊಲೀಸ್ ವಶಕ್ಕೆ

ಹರೀಶ್‌ ಪೂಂಜ ಅಭಿಮಾನಿಗಳು ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಮಾರಾಮಾರಿ, ವಿಡಿಯೋ ವೈರಲ್ !!!